Info
Trending

ಅಪಘಾತದಲ್ಲಿ ಮರಣ ಹೊಂದಿದ ವ್ಯಕ್ತಿಯ ಕುಟುಂಬಕ್ಕೆ ಯುನೈಟೆಡ್ ಇಂಡಿಯಾ ಇನ್ಷೂರೆನ್ಸ್ ನಿಂದ 15 ಲಕ್ಷದ ವಿಮೆ ಹಣ ಹಸ್ತಾಂತರ

ಹೊನ್ನಾವರ: ಯುನೈಟೆಡ್ ಇಂಡಿಯಾ ಇನ್ಷೂರೆನ್ಸ್ ಕಂಪನಿ ನಿಯಮಿತ ಹೊನ್ನಾವರ ಶಾಖೆ ವತಿಯಿಂದ ಅಪಘಾತದಲ್ಲಿ ಮರಣ ಹೊಂದಿದ ವ್ಯಕ್ತಿಯ ಕುಟುಂಬಕ್ಕೆ 15 ಲಕ್ಷ ಮೊತ್ತದ ಚೆಕ್ ನ್ನು ಹಸ್ತಾಂತರಿಸಲಾಯಿತು. ವಸಂತ ದೇವಿದಾಸ ಗೌಡ ಇವರು ಇತ್ತೀಚೆಗೆ ರಸ್ತೆ ಅಪಘಾತದಲ್ಲಿ ನಿಧನ ಹೊಂದಿದ್ದರು. ಇವರ ಮರಣ ಹೊಂದಿದ್ದರಿoದ ವೈಯಕ್ತಿಕ ಅಪಘಾತ ವಿಮೆ ಸೌಲಭ್ಯದ ಅಡಿಯಲ್ಲಿ 15 ಲಕ್ಷ ರೂ.ಗಳ ಚೆಕ್ ನ್ನು ಹಿರಿಯ ವಿಭಾಗಾಧಿಕಾರಿಗಳಾದ ಎಲ್. ಎನ್. ಮುರಳೀಧರ ಇವರಿಂದ ವಸಂತ ದೇವಿದಾಸ ಗೌಡ ಇವರ ಕುಟುಂಬಕ್ಕೆ ವಿತರಿಸಲಾಯಿತು.

ಈ ಸಂದರ್ಭದಲ್ಲಿ ಯುನೈಟೆಡ್ ಇಂಡಿಯಾ ಇನ್ಸೂರೆನ್ಸ್ ಕಂಪನಿ ನಿಯಮಿತ ಭಟ್ಕಳ ಶಾಖೆಯ ಶಾಖಾಧಿಕಾರಿ ಗುರುನಾಥ ಗದಗ, ಹೊನ್ನಾವರ ಶಾಖೆಯ ಕೆ.ಜಿ. ಮೊಗೇರ, ವಿಮಾ ಪ್ರತಿನಿಧಿಗಳಾದ ಎ.ವಿ. ದೇಸಾಯಿ, ಕಿಶೋರ ನಾಯ್ಕ ಹಾಜರಿದ್ದರು..

ವಿಸ್ಮಯ ನ್ಯೂಸ್, ಹೊನ್ನಾವರ

Back to top button