ಆಹಾರ ಅರಸಿ ನಾಡಿನತ್ತ ಬಂದಿದ್ದ ಜಿಂಕೆ: ಗದ್ದೆಯೊಳಗೆ ನುಗ್ಗಲು ಯತ್ನಿಸಿದ ವೇಳೆ ಬಲೆಯೊಳಗೆ ಸಿಲುಕಿ ಒದ್ದಾಟ

ಅರಣ್ಯ ಇಲಾಖೆಯವರ ಕಾರ್ಯಾಚರಣೆ ಹೇಗಿತ್ತು ನೋಡಿ: ಇಲ್ಲಿದೆ ವಿಡಿಯೋ

ಮುಂಡಗೋಡ: ಆಹಾರ ಅರಸಿ ನಾಡಿನತ್ತ ಹೆಜ್ಜೆ ಹಾಕಿದ್ದ ಜಿಂಕೆಯೊoದು ಬಲೆಗೆ ಸಿಲುಕಿ ಒದ್ದಾಡಿದ ಘಟನೆ ಮುಂಡಗೋಡ ತಾಲ್ಲೂಕಿನ ಅಜ್ಜಳ್ಳಿಯಲ್ಲಿ ನಡೆದಿದೆ. ಅಜ್ಜಳ್ಳಿಯ ವಿಷ್ಣು ಆಲದಕಟ್ಟಿ ಎಂಬುವವರು ತಮ್ಮ ಭತ್ತದ ಹೊಲಗಳಿಗೆ ಜಾನುವಾರುಗಳು ಹಾಗೂ ಕಾಡು ಪ್ರಾಣಿಗಳು ನುಗ್ಗಿ ಬೆಳೆ ನಾಶ ಮಾಡುತ್ತಿರುವುದರಿಂದ ಇದನ್ನು ತಡೆಯಲು ಗದ್ದೆ ಸುತ್ತ ಬಲೆಯನ್ನು ಹಾಕಿದ್ದರು.

ಆದರೆ ಇಂದು ಆಹಾರ ಅರಸಿ ನಾಡಿನತ್ತ ಬಂದಿದ್ದ ಜಿಂಕೆಯೊoದು ಗದ್ದೆಗೆ ನುಗ್ಗಲು ಯತ್ನಿಸಿದಾಗ ಅದರ ಕೊಂಬುಗಳು ಬಲೆಗೆ ಸಿಲುಕಿದ್ದ ತಪ್ಪಿಸಿಕೊಳ್ಳಲಾಗದೇ ಒದ್ದಾಟ ನಡೆಸುತಿತ್ತು. ಆದರೆ ಇದೇ ಸಮಯಕ್ಕೆ ಕುಟುಂಬಸ್ಥರು ಗದ್ದೆಗೆ ಬಂದಾಗ ಜಿಂಕೆ ಬಲೆಗೆ ಸಿಲುಕಿಕೊಂಡು ಒದ್ದಾಡುತ್ತಿರುವುದು ಬೆಳಕಿಗೆ ಬಂದಿದೆ.

ಬಳಿಕ ಈ ಬಗ್ಗೆ ಅರಣ್ಯ ಇಲಾಖೆ ಸಿಬ್ಬಂದಿಗೆ ತಿಳಿಸಿದ್ದರು. ತಕ್ಷಣ ಸ್ಥಳಕ್ಕಾಗಮಿಸಿದ ಸಿಬ್ಬಂದಿ ಜಿಂಕೆಯ ಕೋಡುಗಳಿಂದ ಬಲೆಯನ್ನು ಬೇರ್ಪಡಿಸುತ್ತಿದ್ದಂತೆ ಕಾಡಿನತ್ತ ಜಿಂಕೆ ಓಡಿ ಹೋಗಿದೆ.

ಶ್ರೀ ವರಾಹಸ್ವಾಮಿ ಜ್ಯೋತಿಷ್ಯ ಪೀಠಂ”ಪ್ರಧಾನ ತಾಂತ್ರಿಕ್ : ಶ್ರೀ ದೇವದತ್ತ ಪಣಿಕರ್ ( ಕೇರಳ ) ಮೊಬೈಲ್ : 9964108888 FAMOUS ASTROLOGER
ಫೋನಿನಲ್ಲಿ ಪ್ರಶ್ನೆ ,ಫೋನಿನಲ್ಲಿ ಉತ್ತರ , ಫೋನಿನಲ್ಲಿ ಪರಿಹಾರ, ನಿಮ್ಮ ಜೀವನದ ಯಾವುದೇ ಕಷ್ಟ ಸಂಕಷ್ಟಗಳಿದ್ದರೂ ಕೇವಲ 3 ದಿನದಲ್ಲಿ ಪರಿಹಾರ ಶತಸಿದ್ಧ ಸ್ತ್ರೀ ಪುರುಷ ಪ್ರೇಮ ವಿಚಾರ, ವಶೀಕರಣ,ಅತ್ತೆ ಸೊಸೆ ಜಗಳ,ಸಂತಾನ,ಆರೋಗ್ಯ ತೊಂದರೆ, ಸ್ತ್ರೀಯರ ಗುಪ್ತ ಸಮಸ್ಯೆ,ಗಂಡ-ಹೆಂಡತಿಯ ಕಲಹ, ನಿಮ್ಮ ಗಂಡ ಪರಸ್ತ್ರೀಯರ ವ್ಯಾಮೋಹ, ವಶೀಕರಣ ಮತ್ತು ನಿಮ್ಮ ಜೀವನದ ಯಾವುದೇ ಸಮಸ್ಯೆಗಳಿದ್ದರೂ ಕೇರಳದ ಪೂಜಾ ವಿಧಿವಿಧಾನದಿಂದ ಕೇವಲ 3 ದಿನದಲ್ಲಿ ಪರಿಹಾರ ಶತಸಿದ್ಧ ಮೊಬೈಲ್ : 9964108888.

ವಿಸ್ಮಯ ನ್ಯೂಸ್, ಕಾರವಾರ

Exit mobile version