ಮೀನುಗಾರರ ಗಮನಕ್ಕೆ: ಮೀನುಗಾರಿಕೆ‌ ಇಲಾಖೆಯಿಂದ ಮಹತ್ವದ ಮಾಹಿತಿ

ಕಾರವಾರ: ಮೀನುಗಾರಿಕೆಗೆ ಸಮುದ್ರಕ್ಕೆ ತೆರಳುವ ಮತ್ತು ಹೊರ ರಾಜ್ಯದ ಗೋವಾ ,ಮಹಾರಾಷ್ಟ್ರಕ್ಕೆ ಬೋಟ್ ಗಳಲ್ಲಿ ದುಡಿಯಲು ತೆರಳುವ 18 ವರ್ಷ ಮೇಲ್ಪಟ್ಟ ಎಲ್ಲ ಮೀನುಗಾರರಿಗೆ,ಇದೇ ಶನಿವಾರ 9.00 am ರಿಂದ 4.00 pmರವರೆಗೆ ಕೋವಿಡ್ 19 ಲಸಿಕೆ ಹಾಕುವ ಕಾರ್ಯಕ್ರಮವನ್ನು, ಉ.ಕ.ಜಿಲ್ಲೆಯ ಆರೋಗ್ಯ ಇಲಾಖೆಯ ಸಹಯೋಗದ ಅಡಿ ಆಯೋಜಿಸಲಾಗಿದೆ.

ಈ ಕೆಳಕಂಡ ಪ್ರಮುಖ ಮೀನುಗಾರಿಕೆ ಬಂದರುಗಳು- ಬೈತಕೋಲ ಕಾರವಾರ, ಅಮದಳ್ಳಿ, ತದಡಿ,ಹೊನ್ನಾವರ ಹಾಗೂ ಮಾವಿನಕುರ್ವೆ ಭಟ್ಕಳ ಮತ್ತು ಮೀನುಗಾರಿಕೆಯ ಇಳಿದಾಣ ಕೇಂದ್ರ ಗಳು- ಅಳ್ವೆಕೋಡಿ, ಬೆಳಂಬಾರ,ಗಂಗಾವಳಿ, ಬೇಲೆಕೇರಿ, ವನ್ನಳ್ಳಿ, ಮಂಜುಗುಣಿ, ತೆಂಗಿನ ಗುಂಡಿ,ಕಾಗಲ್ ಹಿಣಿ, ಹಾರವಾಡ, ಕಿಮಾನಿ ಹೊರಭಾಗ, ಅಳ್ವೆದಂಡೆ, ಶಶಿಹಿತ್ತಲು, ಮತ್ತು ಬೆಳಕೆ ಪ್ರದೇಶಗಳಲ್ಲಿ, ಲಸಿಕಾಕರಣ ಹಮ್ಮಿಕೊಳ್ಳಲಾಗಿದೆ.

ಆದುದರಿಂದ ಎಲ್ಲ ಮೀನುಗಾರರು ತಪ್ಪದೆ ತಮ್ಮ ಮೀನುಗಾರಿಕೆ ಗುರುತಿನ ಪತ್ರ, ಆಧಾರ್ ಕಾರ್ಡ್ ಗಳೂಂದಿಗೆ ಮೇಲ್ಕಂಡ ಕೇಂದ್ರ ಗಳಲ್ಲಿ ಹಾಜರಾಗಿ ಲಸಿಕೆ ಹಾಕಿಸಿ ಕೂಳ್ಳುವುದು .ಮೀನುಗಾರರ ಸಂಘದ ಅಧ್ಯಕ್ಷರು ,ಪದಾಧಿಕಾರಿಗಳು,ಮೀನುಗಾರರ ಮುಖಂಡರು ಮೀನುಗಾರ ಕಾರ್ಮಿಕ ರನ್ನು ಲಸಿಕೆ ಹಾಕುವ ಕೇಂದ್ರಗಳಿಗೆ ಕರೆ ತರುವ ಮೂಲಕ ಈ ಲಸಿಕಾ ಅಭಿಯಾನವನ್ನು ಯಶಸ್ವಿಗೂಳಿಸಬೇಕೆಂದು ಮೀನುಗಾರಿಕೆ ಇಲಾಖೆ,ಕಾರವಾರ ವಲಯ‌ ಇದರ ಜಂಟಿ‌ ನಿರ್ದೇಶಕರಾದ ಪಿ.ನಾಗರಾಜು ಅವರು ಮಾಹಿತಿ‌ ನೀಡಿದ್ದಾರೆ.

ವಿಸ್ಮಯ ನ್ಯೂಸ್ ವಿಲಾಸ ನಾಯಕ ಅಂಕೋಲಾ

ಶ್ರೀ ವರಾಹಸ್ವಾಮಿ ಜ್ಯೋತಿಷ್ಯ ಪೀಠಂ”ಪ್ರಧಾನ ತಾಂತ್ರಿಕ್ : ಶ್ರೀ ದೇವದತ್ತ ಪಣಿಕರ್ ( ಕೇರಳ ) ಮೊಬೈಲ್ : 9964108888 FAMOUS ASTROLOGER
ಫೋನಿನಲ್ಲಿ ಪ್ರಶ್ನೆ ,ಫೋನಿನಲ್ಲಿ ಉತ್ತರ , ಫೋನಿನಲ್ಲಿ ಪರಿಹಾರ, ನಿಮ್ಮ ಜೀವನದ ಯಾವುದೇ ಕಷ್ಟ ಸಂಕಷ್ಟಗಳಿದ್ದರೂ ಕೇವಲ 3 ದಿನದಲ್ಲಿ ಪರಿಹಾರ ಶತಸಿದ್ಧ ಸ್ತ್ರೀ ಪುರುಷ ಪ್ರೇಮ ವಿಚಾರ, ವಶೀಕರಣ,ಅತ್ತೆ ಸೊಸೆ ಜಗಳ,ಸಂತಾನ,ಆರೋಗ್ಯ ತೊಂದರೆ, ಸ್ತ್ರೀಯರ ಗುಪ್ತ ಸಮಸ್ಯೆ,ಗಂಡ-ಹೆಂಡತಿಯ ಕಲಹ, ನಿಮ್ಮ ಗಂಡ ಪರಸ್ತ್ರೀಯರ ವ್ಯಾಮೋಹ, ವಶೀಕರಣ ಮತ್ತು ನಿಮ್ಮ ಜೀವನದ ಯಾವುದೇ ಸಮಸ್ಯೆಗಳಿದ್ದರೂ ಕೇರಳದ ಪೂಜಾ ವಿಧಿವಿಧಾನದಿಂದ ಕೇವಲ 3 ದಿನದಲ್ಲಿ ಪರಿಹಾರ ಶತಸಿದ್ಧ ಮೊಬೈಲ್ : 9964108888.

Exit mobile version