ತಾನು ಅನ್ಯ ಜಾತಿಯ ಹುಡುಗನನ್ನು ಮದುವೆ ಮಾಡಿಕೊಂಡಿರುವುದಕ್ಕೆವಿರೋಧ ವ್ಯಕ್ತ ಪಡಿಸಿರುವ ನನ್ನ ಕುಟುಂಬಸ್ಥರು, ಪೊಲೀಸ್ ಮತ್ತಿತರರ ಹೆಸರು ಹೇಳಿ ನಾನಾ ರೀತಿಯಲ್ಲಿ ನಮಗೆ ಬೆದರಿಕೆ ಹಾಕುತ್ತಿದ್ದಾರೆ. ನಾನು ಸ್ವ ಇಚ್ಚೆ ಯಿಂದ ಮದುವೆಯಾಗಿದ್ದು ಮುಂದೆಯೂ ನನ್ನ ಪ್ರಿಯಕರ (ಗಂಡ)ನೊಂದಿಗೆ ಬಾಳಿ ಬದುಕ ಬೇಕೆಂದಿದ್ದೇನೆ.
ಅಂಕೋಲಾ :ಪ್ರೀತಿಸಿ ಮದುವೆಯಾದ ನವ ವಿವಾಹಿತ ಜೋಡಿಗೆ ಹುಡುಗಿ ಮನೆ ಕಡೆಯಿಂದ ಜೀವ ಬೆದರಿಕೆ ಬರುತ್ತಿರುವ ಹಿನ್ನೆಲೆಯಲ್ಲಿ ರಕ್ಷಣೆ ಕೋರಿ ಜಿಲ್ಲಾ ಪೊಲೀಸ್ ವರಿಷ್ಠರಿಗೆ ಮತ್ತು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಸಖಿ ವಿಭಾಗಕ್ಕೆ ನವ ದಂಪತಿಗಳು ಮನವಿ ಸಲ್ಲಿಸಿದ್ದಾರೆ.
ಶಿರಸಿ ಹೆಗಡೆಕಟ್ಟಾ ನಿವಾಸಿಗಳಾದ ನೀಲಕಂಠ ನಾಯ್ಕನನ್ನು ಪ್ರೀತಿಸಿದ ವಸುಧಾ ಹೆಗಡೆ ಇತ್ತೀಚೆಗೆ ಅಂಕೋಲಾದ ಉಪ ನೋಂದಣಿ ಕಚೇರಿಯಲ್ಲಿ ಕಾನೂನು ಬದ್ಧವಾಗಿ ಮದುವೆಯಾಗಿದ್ದು, ತಾನು ಅನ್ಯ ಜಾತಿಯ ಹುಡುಗನನ್ನು ಮದುವೆ ಮಾಡಿಕೊಂಡಿರುವುದಕ್ಕೆವಿರೋಧ ವ್ಯಕ್ತ ಪಡಿಸಿರುವ ನನ್ನ ಕುಟುಂಬಸ್ಥರು, ಪೊಲೀಸ್ ಮತ್ತಿತರರ ಹೆಸರು ಹೇಳಿ ನಾನಾ ರೀತಿಯಲ್ಲಿ ನಮಗೆ ಬೆದರಿಕೆ ಹಾಕುತ್ತಿದ್ದಾರೆ. ನಾನು ಸ್ವ ಇಚ್ಚೆ ಯಿಂದ ಮದುವೆಯಾಗಿದ್ದು ಮುಂದೆಯೂ ನನ್ನ ಪ್ರಿಯಕರ (ಗಂಡ)ನೊಂದಿಗೆ ಬಾಳಿ ಬದುಕ ಬೇಕೆಂದಿದ್ದೇನೆ. ಆದ್ದರಿಂದ ನಮಗೆ ರಕ್ಷಣೆ ನೀಡಬೇಕು ಎಂದು ಮನವಿ ಮಾಡಿದ್ದಾರೆ.
ಈ ಕುರಿತು ವಸುಧಾ ಹೆಗಡೆ ತನ್ನ ಕಥೆ – ವ್ಯಥೆಗಳನ್ನು ಹಂಚಿಕೊಳ್ಳುವ ಮೂಲಕ ತಮಗಾಗುತ್ತಿರುವ ಅನ್ಯಾಯ ಸರಿಪಡಿಸುವಂತೆ ಕೋರಿಕೊಂಡಿದ್ದಾರೆ.ಅಂಕೋಲಾದಲ್ಲಿ ತಂಗಿರುವ ದಂಪತಿ ಆಗ್ರಹಿಸಿದ್ದಾರೆ. ನವ ವಿವಾಹಿತ ಜೋಡಿಯ ಮದುವೆ ದಾಖಲೆ ಪಡೆದುಕೊಂಡಿರುವ ಸಖಿ ವಿಭಾಗದವರು ಅದನ್ನು ಪೊಲೀಸ್ ಇಲಾಖೆಗೆ ಸಲ್ಲಿಸಿ ರಕ್ಷಣೆ ನೀಡುವಂತೆ ಆಗ್ರಹಿಸಿದ್ದಾರೆ.
ಇವರ ಮದುವೆ ಕುರಿತಂತೆ ಕೆಲವರು congrats ಮತ್ತಿತರ ಶುಭಾಶಯ ಕಳಿಸಿದ್ದರೆ,ಇನ್ನು ಕೆಲವರು ಅನ್ಯ ಜಾತಿ ಯುವಕನ ಜೊತೆ ಓಡಿ ಹೋದದ್ದು,ಪಾಲಕರನ್ನು ದೂರ ಮಾಡಿದ್ದು,ಮನೆಯಿಂದ ಹಣ ಮತ್ತು ಬಂಗಾರ ಒಯ್ದ ರೀತಿಯಲ್ಲಿ ಮೂದಲಿಸಿ ಪ್ರತಿಕ್ರಿಯಿಸಿದ್ದಾರೆ ಎನ್ನಲಾಗಿದೆ.
ಪ್ರಾಪ್ತ ವಯಸ್ಕರ ಪರಸ್ಪರ ಪ್ರೀತಿ ಮತ್ತು ಒಪ್ಪಿಗೆ ಯಿಂದಲೇ ಈ ಮದುವೆ ನಡೆದಿರುವಾಗ,ಜಾತಿ ಮತ್ತಿತರ ಹೆಸರು ಹೇಳಿಕೊಂಡು ಅನ್ಯತಾ ಬೆದರಿಕೆ ಒಡ್ಡುವ ಬದಲು,ತಮ್ಮ ಕುಟುಂಬದ ಮಗಳು ಎಲ್ಲಿಯಾದರೂ ಸಂತೋಷದಿಂದ ಇರಲಿ ಎಂದು ಹೆತ್ತವರು ಮತ್ತು ಕುಟುಂಬಸ್ಥರು ತಮ್ಮ ಅಂತರಾಳದ ದುಃಖ ಮತ್ತು ನೋವನ್ನು ಮರೆತು ದೂರದಿಂದಲೇ ಹಾರೈಸಿದರು ಸಾಕಿತ್ತು ಎನ್ನುವ ಮಾತು ಸಹ ಅಂಕೋಲದಲ್ಲಿ ತಂಗಿರುವ ನೂತನ ದಂಪತಿಗಳ ಪರವಾಗಿ ಅಲ್ಲಲ್ಲಿ ಕೇಳಿ ಬಂದಿದೆ.
ವಿಸ್ಮಯ ನ್ಯೂಸ್ ವಿಲಾಸ ನಾಯಕ ಅಂಕೋಲಾ