ಕಾರವಾರ: ಆಗಸ್ಟ್ 16 ರಿಂದ ಬೆಂಗಳೂರಿನಿಂದ ಕಾರವಾರಕ್ಕೆ ವಿಸ್ಟಾಡೋಮ್ ಕೋಚ್ ಆಗಮಿಸಲಿದ್ದು, ಪ್ರಯಾಣಿಕರಿಗೆ ಪಶ್ಚಿಮ ಘಟ್ಟಗಳ ರುದ್ರ ರಮಣೀಯ ದೃಶ್ಯ ಹಾಗೂ ಅರಬ್ಬೀ ಸಮುದ್ರದ ಸೌಂದರ್ಯ ಸವಿಯುವ ಸದಾವಕಾಶ ಸಿಗಲಿದೆ. ಹೌದು, ಬೆಂಗಳೂರಿನಿಂದ ಮಂಗಳೂರು ಮೂಲಕ ಕಾರವಾರಕ್ಕೆ ಆಗಮಿಸುವ ರೈಲಿಗೆ ವಿಸ್ಟಾಡೋಮ್ ಕೋಚ್ ಅಳವಡಿಸಲಾಗುತ್ತಿದ್ದು, ಇದು ಆಗಸ್ಟ್ 16 ರಿಂದ ಪ್ರಯಾಣ ಆರಂಭಿಸಲಿದೆ. ಬೆಂಗಳೂರು ಕಾರವಾರ ಹಗಲು ರೈಲು ಆಗಸ್ಟ್ 16 ರಿಂದ ಒಂದು ಹೊಸ ವಿಸ್ಟಾಡೋಮ್ ಕೋಚ್ ನೊಂದಿಗೆ ಪುನಾರಂಭಗೊಳ್ಳಲಿದೆ.
ಪ್ರಸ್ತುತ ಯಶವಂತಪುರ ಮತ್ತು ಮಂಗಳೂರು ನಡುವೆ ಚಲಿಸುತ್ತಿರುವ ಈ ರೈಲಿನಲ್ಲಿ ಪ್ರವಾಸೋದ್ಯಮವನ್ನು ಉತ್ತೇಜಿಸಲು ಎರಡು ವಿಸ್ಟಾಡೋಮ್ ಬೋಗಿಗಳನ್ನು ಜುಲೈ ಮಧ್ಯದಲ್ಲಿ ಪರಿಚಯಿಸಲಾಗಿತ್ತು. ಇದು ಭಾರೀ ಯಶಸ್ಸು ಕೂಡ ಕಂಡಿತ್ತು. ಹೀಗಾಗಿ ಇದನ್ನು ಇದೀಗ ಮತ್ತಷ್ಟು ವಿಸ್ತರಿಸಲಾಗಿದೆ.
ಪ್ರತಿ ಕೋಚ್‌ನಲ್ಲಿ 44 ಅಜೆಸ್ಟೆಬಲ್ ಆಸನಗಳು, ಅಗಲವಾದ ಕಿಟಕಿಗಳು ಮತ್ತು ಅಗಲವಾದ ಹಿಂಭಾಗದ ಕಿಟಕಿಗಳು ಇರುವುದರಿಂದ ಹೊರಗಡೆಯ ಸೌಂದರ್ಯವನ್ನು ಕೂಳಿತಲ್ಲೇ ವೀಕ್ಷಿಸಬಹುದಾಗಿದೆ. ಹೀಗಾಗಿ ಇದು ಪ್ರಯಾಣಿಕರಿಗೆ ಹೊಸ ಅನುಭವ ನೀಡಲಿದ್ದು, ವಿಸ್ಟಾಡೋಮ್ ಬೋಗಿಗಳು ಪ್ರಯಾಣಿಕರನ್ನು ಆಕರ್ಷಿಸುತ್ತಿವೆ.
ಶ್ರೀ ವರಾಹಸ್ವಾಮಿ ಜ್ಯೋತಿಷ್ಯ ಪೀಠಂ”ಪ್ರಧಾನ ತಾಂತ್ರಿಕ್ : ಶ್ರೀ ದೇವದತ್ತ ಪಣಿಕರ್ ( ಕೇರಳ ) ಮೊಬೈಲ್ : 9964108888 FAMOUS ASTROLOGER
ಫೋನಿನಲ್ಲಿ ಪ್ರಶ್ನೆ ,ಫೋನಿನಲ್ಲಿ ಉತ್ತರ , ಫೋನಿನಲ್ಲಿ ಪರಿಹಾರ, ನಿಮ್ಮ ಜೀವನದ ಯಾವುದೇ ಕಷ್ಟ ಸಂಕಷ್ಟಗಳಿದ್ದರೂ ಕೇವಲ 3 ದಿನದಲ್ಲಿ ಪರಿಹಾರ ಶತಸಿದ್ಧ ಸ್ತ್ರೀ ಪುರುಷ ಪ್ರೇಮ ವಿಚಾರ, ವಶೀಕರಣ,ಅತ್ತೆ ಸೊಸೆ ಜಗಳ,ಸಂತಾನ,ಆರೋಗ್ಯ ತೊಂದರೆ, ಸ್ತ್ರೀಯರ ಗುಪ್ತ ಸಮಸ್ಯೆ,ಗಂಡ-ಹೆಂಡತಿಯ ಕಲಹ, ನಿಮ್ಮ ಗಂಡ ಪರಸ್ತ್ರೀಯರ ವ್ಯಾಮೋಹ, ವಶೀಕರಣ ಮತ್ತು ನಿಮ್ಮ ಜೀವನದ ಯಾವುದೇ ಸಮಸ್ಯೆಗಳಿದ್ದರೂ ಕೇರಳದ ಪೂಜಾ ವಿಧಿವಿಧಾನದಿಂದ ಕೇವಲ 3 ದಿನದಲ್ಲಿ ಪರಿಹಾರ ಶತಸಿದ್ಧ ಮೊಬೈಲ್ : 9964108888.
ವಿಸ್ಮಯ ನ್ಯೂಸ್, ಕಾರವಾರ