ಹೊನ್ನಾವರ, ಅಂಕೋಲಾ, ಶಿರಸಿ ತಾಲೂಕಿನಲ್ಲಿ ನಾಳೆ ಎಲ್ಲೆಲ್ಲಿ ವ್ಯಾಕ್ಸಿನೇಷನ್ ಪ್ರಕ್ರಿಯೆ ನಡೆಯಲಿದೆ ನೋಡಿ?

ಅಂಕೋಲಾದಲ್ಲಿ 1500 ಡೋಸ್ ಲಸಿಕೆಗಳು ಲಭ್ಯ        

ಅಂಕೋಲಾ ಅ 26: ತಾಲೂಕಿನ ವಿವಿಧ ಭಾಗಗಳ ವಿತರಣೆಗೆ ಸಂಬಂಧಿಸಿದಂತೆ  ಅಗಸ್ಟ್ 27 ರ  ಶುಕ್ರವಾರ  ಒಟ್ಟೂ 1500 ಡೋಸ್ ಕೋವಿಡ್ ಲಸಿಕೆಗಳ ವಿತರಣೆಗೆ ಆರೋಗ್ಯ ಇಲಾಖೆ ಕ್ರಮ  ಕೈಗೊಂಡಿದೆ.   ಮೊಗಟಾದ ಗ್ರಾಮ ಪಂಚಾಯತ್ ಸಭಾಭವನ (270) ಬೋಳೆ ಹೊಸಗದ್ದೆಯ ಕಿ.ಪ್ರಾ.ಶಾಲೆ (340), ಅವರ್ಸಾದ ಗ್ರಾಪಂ (260), ಸುಂಕಸಾಳ (120), ರಾಮನಗುಳಿಯ ಪ್ರಾ.ಆ.ಕೇಂದ್ರ (150), ಉಪಕೇಂದ್ರ ನದಿಭಾಗ (360), ಲಸಿಕಾಕರಣ ನಡೆಯಲಿದೆ. 

ಅವುಗಳಲ್ಲಿ ಪ್ರಥಮ ಡೋಸ್  ಹಾಗೂ ,ದ್ವಿತೀಯ ಡೋಸ್ ಗಳ ಹೊರತಾಗಿ ವಿಕಲಚೇತನರರು , ಗರ್ಭಿಣಿಯರು ಹಾಗೂ  ಬಾಣಂತಿಯರಿಗೆ ವಿಶೇಷ ಪ್ರಾಧಾನ್ಯತೆಯಡಿ ಕೆಲ ಪ್ರಮಾಣದ ಲಸಿಕೆಗಳನ್ನು ಕಾಯ್ದಿರಿಸಲಾಗುತ್ತಿದೆ ಎಂದು ತಾಲೂಕಾ ಆರೋಗ್ಯಾಧಿಕಾರಿಗಳ ಕಾಯಾಲಯದ ಪ್ರಕಟಣೆಯಲ್ಲಿ ತಿಳಿಸಲಾಗಿದೆ .         

ಶಿರಸಿಯಲ್ಲಿ ಡೋಸ್ ಲಸಿಕೆ ಲಭ್ಯ  

ಶಿರಸಿ: ತಾಲೂಕಿನಲ್ಲಿ ಶುಕ್ರವಾರ 5,700 ಡೋಸ್ ಕೋವಿಶೀಲ್ಡ್ ಲಸಿಕೆ ಲಭ್ಯವಿದ್ದು, ಪ್ರಥಮ ಮತ್ತು ದ್ವತೀಯ ಡೋಸ್ ನವರು ಪಡೆದುಕೊಳ್ಳಬಹುದಾಗಿದೆ ನವಣಗೇರಿಯಲ್ಲಿ 250, ಬೆಂಗಳೆ 250, ಉಂಚಳ್ಳಿ 250, ಕಾನಗೋಡ 250, ಹೆಗಡೆಕಟ್ಟಾ 500, ಆಡಳ್ಳಿ 250, ಬೆಳೆನಳ್ಳಿ 250, ಹೀಪನಳ್ಳಿ 250, ಸಾಲ್ಕಣಿ 250, ಸೋಂದಾ 500, ವಡ್ಡಳ್ಳಾ 300, ರಾಮಾಪುರ 200, ಚಿಪಗಿ 500, ಟಿಎಸ್‍ಎಸ್ ಸೂಪರ್ ಮಾರ್ಕೇಟ್ ಹೆಲ್ತ್ ಸೆಂಟರ್ 650, ಯಲ್ಲಾಪುರ ರಸ್ತೆ ಬಿ.ಆರ್.ಅಂಬೇಡ್ಕರ ಭವನದಲ್ಲಿ 1050 ಡೋಸ್ ಲಸಿಕೆ ಲಭ್ಯವಿದೆ .

ಹೊನ್ನಾವರ ತಾಲೂಕಿನಲ್ಲಿ ನಾಳೆ ಎಲ್ಲೆಲ್ಲಿ?

ಹೊನ್ನಾವರ ತಾಲೂಕಿನಲ್ಲಿ ನಾಳೆ ಒಟ್ಟು 2,250 ಕೋವಿಶೀಲ್ಡ್ ವಿತರಿಸಲಾಗುವುದು. ತಾಲೂಕಿನ ಕಡತೋಕಾ ಪ್ರಾಥಮಿಕ ಆರೋಗ್ಯ ಕೇಂದ್ರ ವ್ಯಾಪ್ತಿಯ ನವಿಲಗೋಣ ಭಾಗದಲ್ಲಿ, ಬಳ್ಕೂರ ಪ್ರಾಥಮಿಕ ಆರೋಗ್ಯ ಕೇಂದ್ರ ವ್ಯಾಪ್ತಿಯ ಕಾಸರಕೋಡ ಭಾಗದಲ್ಲಿ, ಮಂಕಿ ಪ್ರಾಥಮಿಕ ಆರೋಗ್ಯ ಕೇಂದ್ರ ವ್ಯಾಪ್ತಿಯ ಚಿತ್ತಾರ ಮತ್ತು ಹೊಸಹಿತ್ಲ ಭಾಗದಲ್ಲಿ, ಗೇರುಸೋಪ್ಪಾ ಪ್ರಾಥಮಿಕ ಆರೋಗ್ಯ ಕೇಂದ್ರ ವ್ಯಾಪ್ತಿಯಲ್ಲಿ ವ್ಯಾಕ್ಸಿನೇಷನ್ ನಡೆಯಲಿದೆ.

ವಿಸ್ಮಯ ನ್ಯೂಸ್ ವಿಲಾಸ ನಾಯಕ ಅಂಕೋಲಾ ಮತ್ತು ಶ್ರೀಧರ್ ನಾಯ್ಕ, ಹೊನ್ನಾವರ

ಇದನ್ನೂ ಓದಿ: ಪ್ರಮುಖ ಸುದ್ದಿಗಳು

Exit mobile version