ಅತಿ ಅಪರೂಪದ ಗಿಡುಗ ಆಮೆ ಕಳೆಬರಹ ಪತ್ತೆ: ಅರಣ್ಯಾಧಿಕಾರಿಗಳ ಸಮ್ಮುಖ ಮರಣೋತ್ತರ ಪರೀಕ್ಷೆ

ಕಾರವಾರ: ಮಾಜಾಳಿ ಕಡಲತೀರದಲ್ಲಿ ಅತೀ ಅಪರೂಪ ಹಾಗೂ ವಿನಾಶದ ಹಂತದಲ್ಲಿರುವ ಕಡಲಾಮೆ ಕಳೇಬರ ಪತ್ತೆಯಾಗಿದೆ. ಆಮೆಯ ತಲೆಯ ಮೇಲೆ ಗಿಡುಗನ ಕೊಕ್ಕಿನ ರೀತಿಯ ಅಪರೂಪದ ರಚನೆ ಇರುವ ಹಿನ್ನೆಲೆಯಲ್ಲಿ ಈ ಕಡಲಾಮೆಯ ಪ್ರಬೇಧವನ್ನು ಗಿಡುಗ ಆಮೆ ಎಂದು ಕರೆಯಲಾಗುತ್ತದೆ. ಈ ಪ್ರಬೇಧ ಸಾಗರ ಜೀವಿಶಾಸ್ತ್ರವಿಜ್ಞಾನಿಗಳ ಅಚ್ಚರಿಗೆ ಕಾರಣವಾಗಿದೆ.

ಇವುಗಳ ಜೀವಿತಾವಧಿ 50 ರಿಂದ 60 ವರ್ಷವಾಗಿದ್ದು, ಹವಳದ ದ್ವೀಪ ಇವುಗಳ ವಾಸ ಸ್ಥಳವಾಗಿದೆ ಎಂದು ಸಾಗರ ವಿಜ್ಞಾನಿಗಳು ಮಾಹಿತಿ ನೀಡಿದ್ದಾರೆ. ಅರಣ್ಯಾಧಿಕಾರಿಗಳ ಸಮ್ಮುಖ ಮರಣೋತ್ತರ ಪರೀಕ್ಷೆ ನಡೆಸಲಾಗಿದೆ.

ವಿಸ್ಮಯ ನ್ಯೂಸ್, ಕಾರವಾರ

Exit mobile version