ಕುಮಟಾದಲ್ಲಿ ನಾಳೆ ಒಟ್ಟು 4,700 ಕೋವಿಶೀಲ್ಡ್ ಮತ್ತು 920 ಕೋವ್ಯಾಕ್ಸಿನ್ ಲಭ್ಯವಿದೆ. ನಾಳೆ ತಾಲೂಕಿನಲ್ಲಿ ಎಲ್ಲೆಲ್ಲಿ ಎಷ್ಟು ಡೋಸ್ ವ್ಯಾಕ್ಸಿನೇಷನ್ ಪ್ರಕ್ರಿಯೆ ನಡೆಯಲಿದೆ ಎಂಬುದರ ವಿವರ ಇಲ್ಲಿದೆ.
ಹೊನ್ನಾವರ ತಾಲ್ಲೂಕಿನಲ್ಲಿ ಎಲ್ಲೆಲ್ಲಿ?
ಹೊನ್ನಾವರ ಪಟ್ಟಣದ ಹಳೆ ಡಿ ಎಫ್ ಓ ಕಟ್ಟಡದಲ್ಲಿ ಮತ್ತು ತಾಲ್ಲೂಕಿನ ಕಡತೋಕಾ ಹಳದೀಪುರ, ಸಾಲಕೋಡ, ಖರ್ವಾ.ಲ, ಹೊಸಾಡ, ಗೇರುಸೋಪ್ಪಾ, ಶಂಶಿ, ಬಳ್ಕೂರ, ಮಂಕಿ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ನಾಳೆ ಒಟ್ಟೂಲು 4000 ಕೋವಿಶೀಲ್ಡ್ ಡೋಸ್ ವಿತರಿಸಲಾಗುತ್ತಿದೆ.
ಅಂಕೋಲಾದಲ್ಲಿ ಎಲ್ಲೆಲ್ಲಿ ಕೋವಿಡ್ ಲಸಿಕೆಗಳು ಲಭ್ಯ,?
ಅಂಕೋಲಾ ಅ 31: ತಾಲೂಕಿನ ವಿವಿಧ ಭಾಗಗಳ ವಿತರಣೆಗೆ ಸಂಬಂಧಿಸಿದಂತೆ ಸಪ್ಟೆಂಬರ್ 1 ರ ಬುಧವಾರ ಒಟ್ಟೂ 3760 ಡೋಸ್ ಕೋವಿಡ್ ಲಸಿಕೆಗಳ ವಿತರಣೆಗೆ ಆರೋಗ್ಯ ಇಲಾಖೆ ಕ್ರಮ ಕೈಗೊಂಡಿದೆ.
ಪ್ರಾ ಆ ಕೇಂದ್ರ ಹಟ್ಟಿಕೇರಿ (200), ಶಿರಕುಳಿ (400), ಬಡಗೇರಿ (400), ಕಿ. ಪ್ರಾಶಾಲೆ ಸಗಡಗೇರಿ ( 300), ಲಕ್ಷ್ಮೇಶ್ವರದ ಆರ್. ಎನ್.ನಾಯಕ ಸಭಾಭವನ (390), ಕಿ. ಪ್ರಾ ಶಾಲೆ ಮಾಣಿಗದ್ದೆ (200), ಪ್ರಾ. ಆ.ಕೇಂದ್ರ ಹಿಲ್ಲೂರ (200), ಹಿಪ್ರಾ ಶಾಲೆ ಬ್ರಹ್ಯೂರ (260), ಅಗಸೂರ (400), ಕೊಡಸಣಿ (140), ಪ್ರಾ ಆ ಕೇಂದ್ರ ಹಾರವಾಡ (270), ತಾಲೂಕಾ ಆಸ್ಪತ್ರೆ ಅಂಕೋಲಾ (200),, ಡಾ. ಕಮಲಾ ಮತ್ತು ಆರ್ ಎನ್ ನಾಯಕ ಆಸ್ಪತ್ರೆ (200), ಆರ್ಯ ಮೆಡಿಕಲ್ ಸೆಂಟರ್ ಅಂಕೋಲಾಕ್ಕೆ (200), ಡೋಸ್ ಲಸಿಕೆಗಳನ್ನು ಹಂಚಿಕೆ ಮಾಡಲಾಗುತ್ತಿದೆ. ವಿಸ್ಮಯ ನ್ಯೂಸ್ ಅವುಗಳಲ್ಲಿ ಪ್ರಥಮ ಡೋಸ್ ಹಾಗೂ ,ದ್ವಿತೀಯ ಡೋಸ್ ಗಳು ಒಳಗೊಂಡಿದೆ.
ವಿಕಲಚೇತನರರು , ಗರ್ಭಿಣಿಯರು ಹಾಗೂ ಬಾಣಂತಿಯರಿಗೆ ವಿಶೇಷ ಪ್ರಾಧಾನ್ಯತೆಯಡಿ ಕೆಲ ಪ್ರಮಾಣದ ಲಸಿಕೆಗಳನ್ನು ಕಾಯ್ದಿರಿಸಲಾಗುತ್ತಿದೆ ಎಂದು ತಾಲೂಕಾ ಆರೋಗ್ಯಾಧಿಕಾರಿಗಳ ಕಾಯಾಲಯದ ಪ್ರಕಟಣೆಯಲ್ಲಿ ತಿಳಿಸಲಾಗಿದೆ .
ವಿಸ್ಮಯ ನ್ಯೂಸ್ ವಿಲಾಸ ನಾಯಕ ಅಂಕೋಲಾ ಮತ್ತು ಶ್ರೀಧರ್ ನಾಯ್ಕ ಹೊನ್ನಾವರ