ಕುಮಟಾ: ಸಾರ್ವಜನಿಕ ಗಣಪತಿ ಯನ್ನು ವಿಸರ್ಜಿಸುವ ವೇಳೆ ಆಕಸ್ಮಿಕವಾಗಿ ಅವಾಂತರ ಒಂದು ನಡೆದಿದ್ದು, ಗ್ರಾಮಸ್ಥರೆಲ್ಲರೂ ಕ್ಷಣಕಾಲ ಆತಂಕಗೊಂಡಿದ್ದರು.
ಹೌದು, ಗಣೇಶ ಮೂರ್ತಿಗೆ ತೊಡಿಸಿದ್ದ ಚಿನ್ನದ ಉಂಗುರ ಮತ್ತು ಬೆಳ್ಳಿ ಸರಪಳಿ ಸಮೇತವಾಗಿ ಗಣಪತಿ ಮೂರ್ತಿಯನ್ನು ಕೆರೆಯಲ್ಲಿ ವಿಸರ್ಜಿಸಲಾಗಿತ್ತು. ಆಭರಣ ಸಮೇತವಾಗಿ ಗಣಪತಿ ಮೂರ್ತಿಯನ್ನು ವಿಸರ್ಜಿಸಿದ್ದು ತಡವಾಗಿ ಬೆಳಕಿಗೆ ಬಂದಿದ್ದು, ಗ್ರಾಮಸ್ಥರು ಹಾಗೂ ಸಂಘಟಕರು ಏನೂ ಮಾಡಬೇಕು ಎಂದು ತಿಳಿಯದೆ ಪೇಚಿಗೆ ಸಿಲುಕಿದ್ದರು.
ಈ ಘಟನೆ ನಡೆದಿರೋದು ಉತ್ತರ ಕನ್ನಡದ ಗೋಕರ್ಣದ ಮಳಲಿ ಗ್ರಾಮಪಂಚಾಯತ್ ವ್ಯಾಪ್ತಿಯ ಗೋನರಹಳ್ಳಿಯಲ್ಲಿ. ಮಹಾಗಣಪತಿಗೆ ಪೂಜೆ ಸಲ್ಲಿಸಿ ಸಮೀಪದ ಕೆರೆಗೆ ತಂದಿದ್ದರು. ಈ ವೇಳೆ ಮೂರ್ತಿಗೆ ಹಾಕಿದ ಆಭರಣ ತೆಗೆಯಲು ಮರೆತಿದ್ದರು.
ವಿಷಯ ಗಮನಕ್ಕೆ ಬಂದಕೂಡಲೇ ಕೆಲವರು ನೀರಿನಲ್ಲಿ ಮುಳಗಿ ಹುಡುಕುವ ಪ್ರಯತ್ನ ಮಾಡಿದರೂ ಏನೂ ಪ್ರಯೋಜನ ಆಗಿಲ್ಲ.
ಈ ವೇಳೆ ದೇವರಭಾವಿ ಗ್ರಾಮದ ಯುವಕ ವಿನಯ್ ನಾಯಕ್ ಸ್ಕೂಬಾ ಡೈವಿಂಗ್ ಗೆ ಬಳಸುವ ಪರಿಕರ ಬಳಸಿ ನೀರಿನಲ್ಲಿ ಮುಳಗಿ ಹುಡುಕಾಟ ನಡೆಸಿದರು. ಹಲವು ಪ್ರಯತ್ನಗಳ ನಂತರ ಮೂರ್ತಿಯೊಂದಿಗೆ ವಿಸರ್ಜಿಸಲಾಗಿದ್ದ ಆಭರಣಗಳನ್ನು ತೆಗೆದುಕೊಟ್ಟರು.
ವಿಸ್ಮಯ ನ್ಯೂಸ್ ಕುಮಟಾ
ನಿಮ್ಮ ಒಂದು ಕರೆ ನಿಮ್ಮ ಜೀವನವನ್ನೇ ಬದಲಾಯಿಸುತ್ತದೆ. ಓಂ ಶ್ರೀಭವಾನಿ ಮಾತಾ ಜ್ಯೋತಿಷ್ಯಾಲಯ. ಪ್ರೀತಿಯಲ್ಲಿ ತೊಂದರೆ? ಮದುವೆಯಲ್ಲಿ ಸಮಸ್ಯೆ? ಗಂಡ-ಹೆಂಡತಿಯಲ್ಲಿ ಕಿರಿಕಿರಿ, ಆರೋಗ್ಯದಲ್ಲಿ ಸಮಸ್ಯೆ? ವಿಧ್ಯಾಭ್ಯಾಸದಲ್ಲಿ ಅಡೆತಡೆ, ಮಾನಸಿಕ ತೊಂದರೆ? ಸಂತಾನ ಭಾಗ್ಯ, ಅಕಸ್ಮಿಕ ಧನಲಾಭ,ಇನ್ನೂ ನಿಮ್ಮ ಯಾವುದೇ ಗುಪ್ತ ಸಮಸ್ಯೆಗಳಿಗೆ 100%ರಷ್ಟು ಗ್ಯಾರಂಟಿ ಪರಿಹಾರ. ಕೇರಳದ ಪ್ರಸಿದ್ಧ ಜ್ಯೋತಿಷ್ಯರು.. ಪಂಡಿತ್:ದುರ್ಗಾ ಪ್ರಸಾದ್ ಗುರೂಜಿ. ಇಂದೇ ಸಂಪರ್ಕಿಸಿ ಮೊ:9686122581