459 ದೇವಾಲಯಗಳಿಗೆ ತೆರವು ಕಾರ್ಯಾಚರಣೆ ಭೀತಿ : ಯಾವ ಯಾವ ತಾಲೂಕಿನಲ್ಲಿ ಎಷ್ಟು ದೇವಾಲಯಗಳಿವೆ ನೋಡಿ?

ಕಾರವಾರ: ಚಾಮರಾಜನಗರದಲ್ಲಿನ ದೇವಾಲಯ ತೆರವು ಭಾರೀ ವಿವಾದ, ಚರ್ಚೆ ಹುಟ್ಟುಹಾಕಿದ ಬೆನ್ನಲ್ಲೆ, ಇದೀಗ ಉತ್ತರಕನ್ನಡ ಜಿಲ್ಲೆಯಲ್ಲೂ ಧಾರ್ಮಿಕ ಕೇಂದ್ರಗಳ ತೆರವಿಗೆ ಪಟ್ಟಿ ಸಿದ್ಧವಾಗಿದೆ ಎನ್ನಲಾಗಿದೆ. ಸುಪ್ರೀಂ ಕೋರ್ಟ್ ನಿರ್ದೇಶನದಂತೆ ಜಿಲ್ಲೆಯಲ್ಲಿನ ಅರಣ್ಯ ಇಲಾಖೆಯ ಜಾಗ ಮತ್ತು ಸರ್ಕಾರಿ ಜಾಗದಲ್ಲಿರುವ ಧಾರ್ಮಿಕ ಕೇಂದ್ರಗಳ ಅಂತಿಮ ಪಟ್ಟಿ ಸಿದ್ಧವಾಗಿದೆ ಎಂಬ ಮಾಹಿತಿ ಲಭಿಸಿದೆ.

ಜಿಲ್ಲೆಯಲ್ಲಿ 1,514 ದೇವಾಲಯಗಳು ಮಜರಾಯಿ ಇಲಾಖೆಯಿಂದ ಅನುಮೋದನೆಗೊಂಡಿದೆ. ಆದರೆ, ಸುಪ್ರೀಂಕೋರ್ಟ್ ಆದೇಶದ ಪ್ರಕಾರ ಜಿಲ್ಲೆಯಲ್ಲಿ 459 ದೇವಾಲಯಗಳು ಕಾನೂನು ಬಾಹಿರ ಎನಿಸಿದ್ದು, ತೆರವುಗೊಳಿಸಬೇಕಾದ ಪಟ್ಟಿಯಲ್ಲಿ ಸೇರಿದೆ. ಮೈಸೂರಿನಲ್ಲಿ ಅನಧಿಕೃತ ದೇವಸ್ಥಾನ ಕೆಡವಿದಂತೆ ಜಿಲ್ಲೆಯಲ್ಲಿಯೂ ಕಾರ್ಯಾಚರಣೆ ನಡೆಯುವ ಆತಂಕ ಸಾರ್ವಜನಿಕರನ್ನು ಕಾಡುತ್ತಿದೆ.

ತೆರವುಗೊಳಿಸಬೇಕಾದ ಪಟ್ಟಿಯಲ್ಲಿ ಯಲ್ಲಾಪುರದಲ್ಲಿ ಅತಿಹೆಚ್ಚು ಅಂದರೆ 205 ದೇವಾಯಗಳು ಸ್ಥಾನ ಪಡೆದಿದೆ. ಉಳಿದಂತೆ ದಾಂಡೇಲಿ- 137, ಭಟ್ಕಳ 1, ಶಿರಸಿ 75, ಸಿದ್ದಾಪುರ 29, ಕುಮಟಾ 6, ಹೊನ್ನಾವರದಲ್ಲಿ 6 ದೇವಸ್ಥಾನಗಳು ಸೇರಿವೆ. ಒಟ್ಟು 459 ಧಾರ್ಮಿಕ ಕೇಂದ್ರಗಳಿಗೆ ಇದೀಗ ತೆರವುಗೊಳಿಸುವ ಆತಂಕ ಎದುರಾಗಿದೆ.

2009 ರ ನಂತರ ನಿರ್ಮಾಣವಾದ ಕಾನೂನು ಬಾಹಿರ ಮತ್ತು ಅನಧಿಕೃತ ದೇವಸ್ಥಾನವನ್ನು ಕೆಡವಲು ಈಗಾಗಲೇ ಜಿಲ್ಲಾಧಿಕಾರಿಗೆ ಸೂಚನೆ ನೀಡಲಾಗಿದೆ. ಇದರಂತೆ ಜಿಲ್ಲಾಧಿಕಾರಿ ನೇತ್ರತ್ವದಲ್ಲಿ ಸಮಿತಿ ಸಹ ಇದ್ದು ಇದರಲ್ಲಿ ಅರಣ್ಯ, ಪೊಲೀಸ್ ಇಲಾಖೆ, ಮುಜರಾಯಿ, ಕಂದಾಯ ಒಳಗೊಂಡ ಈ ಕಮಿಟಿ ಈಗಾಗಲೇ ಸಭೆ ನಡೆಸಿದೆ. ನಿರ್ಧಾರ ಶೀಘ್ರದಲ್ಲೇ ಪ್ರಕಟವಾಗಲಿದೆ ಎನ್ನಲಾಗಿದೆ.

ಬ್ಯೂರೋ ರಿಪೋರ್ಟ್ ವಿಸ್ಮಯ ನ್ಯೂಸ್

ನಿಮ್ಮ ಒಂದು ಕರೆ ನಿಮ್ಮ ಜೀವನವನ್ನೇ ಬದಲಾಯಿಸುತ್ತದೆ. ಓಂ ಶ್ರೀಭವಾನಿ ಮಾತಾ ಜ್ಯೋತಿಷ್ಯಾಲಯ. ಪ್ರೀತಿಯಲ್ಲಿ ತೊಂದರೆ? ಮದುವೆಯಲ್ಲಿ ಸಮಸ್ಯೆ? ಗಂಡ-ಹೆಂಡತಿಯಲ್ಲಿ ಕಿರಿಕಿರಿ, ಆರೋಗ್ಯದಲ್ಲಿ ಸಮಸ್ಯೆ? ವಿಧ್ಯಾಭ್ಯಾಸದಲ್ಲಿ ಅಡೆತಡೆ, ಮಾನಸಿಕ ತೊಂದರೆ? ಸಂತಾನ ಭಾಗ್ಯ, ಅಕಸ್ಮಿಕ ಧನಲಾಭ,ಇನ್ನೂ ನಿಮ್ಮ ಯಾವುದೇ ಗುಪ್ತ ಸಮಸ್ಯೆಗಳಿಗೆ 100%ರಷ್ಟು ಗ್ಯಾರಂಟಿ ಪರಿಹಾರ. ಕೇರಳದ ಪ್ರಸಿದ್ಧ ಜ್ಯೋತಿಷ್ಯರು.. ಪಂಡಿತ್:ದುರ್ಗಾ ಪ್ರಸಾದ್ ಗುರೂಜಿ. ಇಂದೇ ಸಂಪರ್ಕಿಸಿ ಮೊ:9686122581

Exit mobile version