ಆಕಳಕರುವಿಗೆ ನಾಮಕರಣ ಮಾಡಿ ತೊಟ್ಟಿಲಿಗೆ ಹಾಕಿ ತೂಗಿ ತೊಟ್ಟಿಲಶಾಸ್ತ್ರ: ತೊಟ್ಟಿಲಲ್ಲಿ ಆಕಳ ಕರುವನ್ನು ಕೂರಿಸಿ ಮನೆಮಂದಿಯೆಲ್ಲ ತೂಗಿ ಸಂಭ್ರಮ

ಬನವಾಸಿ: ಮಕ್ಕಳನ್ನು ತೊಟ್ಟಿಲಿಗೆ ಹಾಕಿ ತೊಟ್ಟಿಲ ಶಾಸ್ತ್ರ ನೆರವೇರಿಸುವುದನ್ನು ನೋಡಿದ್ದೇವೆ. ಕೇಳಿದ್ದೇವೆ. ಆದರೆ, ಇದು ಸ್ವಲ್ವ ವಿಭಿನ್ನ. ಹೌದು, ಆಕಳ ಕರುವನ್ನು ತೊಟ್ಟಿಲಿಗೆ ಹಾಕಿ ತೂಗಿ ತೊಟ್ಟಿಲ ಶಾಸ್ತ್ರ ನೆರವೇರಿಸಲಾಗಿದೆ. ಅಚ್ಚರಿಯಾದರೂ ಸತ್ಯ ಇದು. ಮನೆಯ ಹಸುವೊಂದು ಮೂರನೇ ಕರುವಿಗೆ ಜನ್ಮನೀಡಿತ್ತು. ಅದಕ್ಕೆ ಗಿರಿಯಮ್ಮ ಎಂದು ಹೆಸರಿಡುವುದರ ಜತೆ ಅದಕ್ಕೆ ತೊಟ್ಟಿಲು ಶಾಸ್ತ್ರ ಮಾಡಲಾಯಿತು.

ತೊಟ್ಟಿಲಲ್ಲಿ ಆಕಳ ಕರುವನ್ನು ಕೂರಿಸಿ ಮನೆಮಂದಿಯೆಲ್ಲ ತೂಗಿ ಸಂಭ್ರಮಿಸಿದರು. ಈ ಘಟನೆ ಘಟನೆ ನಡೆದಿರೋದು ಉತ್ತರಕನ್ನಡ ಬನವಾಸಿಯಲ್ಲಿ. ಬನವಾಸಿಯ ಅರವಿಂದ ಶೆಟ್ಟಿ ಕುಟುಂಬ ಇಂಥದ್ದೊoದು ಕಾರ್ಯ ಮಾಡಿ ಗಮನ ಸೆಳೆದಿದೆ. ಈ ತೊಟ್ಟಿಲು ಶಾಸ್ತ್ರ ನೋಡೋಕೆ ಗ್ರಾಮಸ್ಥರು ಕೂಡಾ ಆಗಮಿಸಿದ್ದರು. ಇವರ ಗೋ ಪ್ರೇಮಕ್ಕೆ ಸಾರ್ವಜನಿಕ ವಲಯದಲ್ಲಿ ಮೆಚ್ಚುಗೆ ವ್ಯಕ್ತವಾಗಿದೆ.

ಬ್ಯೂರೋ ರಿಪೋರ್ಟ್ ವಿಸ್ಮಯ ನ್ಯೂಸ್

ನಿಮ್ಮ ಒಂದು ಕರೆ ನಿಮ್ಮ ಜೀವನವನ್ನೇ ಬದಲಾಯಿಸುತ್ತದೆ. ಓಂ ಶ್ರೀಭವಾನಿ ಮಾತಾ ಜ್ಯೋತಿಷ್ಯಾಲಯ. ಪ್ರೀತಿಯಲ್ಲಿ ತೊಂದರೆ? ಮದುವೆಯಲ್ಲಿ ಸಮಸ್ಯೆ? ಗಂಡ-ಹೆಂಡತಿಯಲ್ಲಿ ಕಿರಿಕಿರಿ, ಆರೋಗ್ಯದಲ್ಲಿ ಸಮಸ್ಯೆ? ವಿಧ್ಯಾಭ್ಯಾಸದಲ್ಲಿ ಅಡೆತಡೆ, ಮಾನಸಿಕ ತೊಂದರೆ? ಸಂತಾನ ಭಾಗ್ಯ, ಅಕಸ್ಮಿಕ ಧನಲಾಭ,ಇನ್ನೂ ನಿಮ್ಮ ಯಾವುದೇ ಗುಪ್ತ ಸಮಸ್ಯೆಗಳಿಗೆ 100%ರಷ್ಟು ಗ್ಯಾರಂಟಿ ಪರಿಹಾರ. ಕೇರಳದ ಪ್ರಸಿದ್ಧ ಜ್ಯೋತಿಷ್ಯರು.. ಪಂಡಿತ್:ದುರ್ಗಾ ಪ್ರಸಾದ್ ಗುರೂಜಿ. ಇಂದೇ ಸಂಪರ್ಕಿಸಿ ಮೊ:9686122581

Exit mobile version