ರಾಜ್ಯದಲ್ಲಿ ಪೆಟ್ರೋಲ್,‌ಡಿಸೇಲ್ ಬೆಲೆ ಮತ್ತಷ್ಟು ಇಳಿಕೆ: ಕೇಂದ್ರದ ಜೊತೆ ರಾಜ್ಯ ಸರ್ಕಾರದಿಂದಲೂ ಜನರಿಗೆ ಬಂಪರ್‌ ಗಿಪ್ಟ್

ಕೇಂದ್ರ ಸರ್ಕಾರ ಪೆಟ್ರೋಲ್, ಡಿಸೇಲ್ ಮೇಲಿನ ಅಬಕಾರಿ ಸುಂಕ ಕಡಿತಗೊಳ್ಳುವ ನಿರ್ಧಾರ ಪ್ರಕಟಿಸಿದ ಬೆನ್ನಲ್ಲೆ‌ ಇದೀಗ ಹಲವು ರಾಜ್ಯ ಸರ್ಕಾರಗಳು ಕೇಂದ್ರ ಸರ್ಕಾರದ ಹಾದಿಯನ್ನೇ ಹಿಡಿದಿವೆ.

ಕರ್ನಾಟಕ ಸೇರಿ ಹಲವು ರಾಜ್ಯ ಸರ್ಕಾರಗಳು ಇಂಧನಗಳ ಮೇಲಿನ ವ್ಯಾಟ್ ಇಳಿಕೆ ಮಾಡುತ್ತಿದ್ದು, ದೀಪಾವಳಿ ಹಬ್ಬದ ಖುಷಿಯನ್ನು ದುಪ್ಪಟ್ಟುಗೊಳಿಸಿದ್ದು, ಜನಸಾಮಾನ್ಯರ ಮೇಲಿನ ಹೊರೆ ಕಡಿಮೆ ಮಾಡಿದೆ.

ಮುಖ್ಯಮಂತ್ರಿ ಬೊಮ್ಮಾಯಿ ಸರ್ಕಾರ ಪೆಟ್ರೋಲ್​, ಡಿಸೇಲ್ ಪ್ರತಿ ಲೀಟರ್‌ಗೆ ತಲಾ 7 ರೂಪಾಯಿ ಬೆಲೆ ಕಡಿತಗೊಳಿಸಿದೆ. ಈ ದರ ನಾಳೆ ಆಮದರೆ ನವೆಂಬರ್ 04 ಸಾಯಂಕಾಲದಿಂದ‌ ಜಾರಿಗೆ ಬರಲಿದೆ. ನಿನ್ನೆ ಕೇಂದ್ರ ಸರ್ಕಾರ ಕೂಡ ಡೀಸೆಲ್ 10 ಹಾಗೂ ಪೆಟ್ರೋಲ್‌ ಮೇಲಿನ ಸುಂಕ 5ರೂಪಾಯಿ ಕಡಿತ ಮಾಡಿತ್ತು

ಕೇಂದ್ರ ಹಾಗೂ ರಾಜ್ಯ ಸರ್ಕಾರ ಸುಂಕ ಕಡಿತಗೊಳಿಸಿದ್ದರಿಂದ ರಾಜ್ಯದಲ್ಲಿ ಪೆಟ್ರೋಲ್ 12 ಮತ್ತು ಡೀಸೆಲ್ 17 ರೂ ಕಡಿಮೆಯಾಗಲಿದೆ. ಡಿಸೇಲ್ ಬೆಲೆ ಅಂದಾಜು 81.50 ಮತ್ತು ಪೆಟ್ರೋಲ್ ಬೆಲೆ ಅಂದಾಜು 95.50 ರೂ ಆಗುವ ಸಾಧ್ಯತೆಯಿದೆ..

ಬ್ಯೂರೋ ರಿಪೋರ್ಟ್ ವಿಸ್ಮಯ ನ್ಯೂಸ್

ಶ್ರೀ ಗುರುರಾಘವೇಂದ್ರ ಸ್ವಾಮಿ ಜ್ಯೋತಿಷ್ಯ ಕೇಂದ್ರ.. ಮದುವೆ ವಿಳಂಬ ಸಮಸ್ಯೆಯನ್ನು, ಸಂತಾನ ಸಮಸ್ಯೆಯನ್ನು ಕೂಡಲೇ ನಿವಾರಿಸಬಲ್ಲರು. ಉದ್ಯೋಗ ಮತ್ತು ಆರ್ಥಿಕ ಸಮಸ್ಯೆಗೂ ಪರಿಹಾರ ಶತಸಿದ್ಧ. ಪ್ರೀತಿಯಲ್ಲಿ ತೊಂದರೆ? ಗಂಡ-ಹೆoಡತಿಯಲ್ಲಿ ಕಿರಿಕಿರಿ, ಆರೋಗ್ಯದಲ್ಲಿ ಸಮಸ್ಯೆ? ವಿಧ್ಯಾಭ್ಯಾಸದಲ್ಲಿ ಅಡೆತಡೆ, ಮಾನಸಿಕ ತೊಂದರೆ, ಇನ್ನೂ ನಿಮ್ಮ ಯಾವುದೇ ಗುಪ್ತ ಸಮಸ್ಯೆಗಳಿಗೆ 100%ರಷ್ಟು ಗ್ಯಾರಂಟಿ ಪರಿಹಾರ. ಪ್ರಸಿದ್ಧ ದೈವಶಕ್ತಿ ಜ್ಯೋತಿಷ್ಯರು: ಪಂಡಿತ್- ಆರ್ ವಿ ಭಟ್ .. ಇಂದೇ ಸಂಪರ್ಕಿಸಿ ಮೊಬೈಲ್ ನಂಬರ್ : 9880446537

Exit mobile version