ಪ್ರತಿಷ್ಠಿತ ಬೀನಾ ವೈದ್ಯ ಕಾಲೇಜಿನಲ್ಲಿ ಉಚಿತ ಸಿಇಟಿ, ಜೆಇಇ, ನೀಟ್ ಕೋಚಿಂಚ್ ಕ್ಲಾಸ್ ಗಳು: ವಿದ್ಯಾರ್ಥಿಗಳು ಸದುಪಯೋಗ ಪಡೆದುಕೊಳ್ಳುವಂತೆ ಮನವಿ

ಮುರ್ಡೇಶ್ವರ: ಇಲ್ಲಿನ ರಾಷ್ಟ್ರೀಯ ಹೆದ್ದಾರಿ ಪಕ್ಕದಲ್ಲಿರುವ ಬೀನಾ ವೈದ್ಯ ಶಿಕ್ಷಣ ಸಂಸ್ಥೆ, ಅತ್ಯುತ್ತಮ ಶಿಕ್ಷಣದ ಮೂಲಕ ಪ್ರಸಿದ್ಧಿ ಪಡೆದಿದೆ. ಈ ಸಂಸ್ಥೆಯಲ್ಲಿ ಸಾವಿರಕ್ಕೂ ಅಧಿಕ ವಿದ್ಯಾರ್ಥಿಗಳು ಶಿಕ್ಷಣ ಪಡೆಯುತ್ತಿದ್ದು, ಎಲ್ ಕೆ ಜಿ ಯಿಂದ ಹಿಡಿದು ಡಿಗ್ರಿ ತನಕದ ಶಿಕ್ಷಣದ ಕಲಿಯುವ ಸೌಲಭ್ಯವಿದೆ. ಇನ್ನು ಬೀನಾ ವಿದ್ಯಾ ಎಜುಕೇಶನ್ ಟ್ರಸ್ಟ್ನ ಕಳೆದ ಕೆಲವು ವರ್ಷಗಳಿಂದ ವಿಶೇಷವಾಗಿ ಕೋವಿಡ್ -19 ಅವಧಿಯಲ್ಲಿ ಶಿಕ್ಷಣ ಕ್ಷೇತ್ರದಲ್ಲಿ ಉತ್ತಮ ಸಾಧನೆಗಾಗಿ ‘ಏಷ್ಯನ್ ಪೆಸಿಫಿಕ್ ಶ್ರೇಷ್ಠ’ ಪ್ರಶಸ್ತಿಯನ್ನು ಗೆದ್ದಿದೆ. ಮತ್ತು ಹೊಸ ಶಿಕ್ಷಣ ನೀತಿ ಮತ್ತು ಸಂಸ್ಥೆಯಲ್ಲಿ ಅದರ ಅನುಷ್ಠಾನಕ್ಕೆ ಅನುಗುಣವಾಗಿ ನವೀನ ಅಭ್ಯಾಸವು , ಈ ಪ್ರಶಸ್ತಿ ,, ಬೀನಾ ವೈದ್ಯ ಶಿಕ್ಷಣ ಟ್ರಸ್ಟ್ನ ಒಟ್ಟಾರೆ ಸಾಧನೆಯ ಮೈಲಿಗಲ್ಲಾಗಿದೆ.

ಕೇವಲ ಅಂಕಗಳಿಗೆ ಮಾತ್ರ ಪ್ರಾಮುಖ್ಯತೆ ನೀಡದೆ ವಿದ್ಯಾರ್ಥಿಯ ಸರ್ವಾಂಗೀಣ ಬೆಳವಣಿಗೆಗೆ ಪೂರಕವಾದ ಸಾಂಸ್ಕೃತಿಕ, ಕ್ರೀಡಾ, ವೈಜ್ಞಾನಿಕ ಸಾಧನೆಗೆ ಪ್ರೋತ್ಸಾಹ ನೀಡುತ್ತಾ ಬಂದಿದೆ. ಈ ಹಿನ್ನೆಲೆಯಲ್ಲಿ ಅನೇಕ ವಿದ್ಯಾರ್ಥಿಗಳು ಜಿಲ್ಲೆ, ರಾಜ್ಯ, ರಾಷ್ಟ್ರೀಯ ಮಟ್ಟದಲ್ಲಿ ಸಾಧನೆ ಮಾಡಿದ್ದಾರೆ. ವಿವಿಧ ಹಂತ ಮತ್ತು ಕ್ಷೇತ್ರಗಳಲ್ಲಿ ನೂರಕ್ಕೂ ಮಿಕ್ಕಿದ ಪ್ರಶಸ್ತಿಗಳನ್ನು ಗೆದ್ದು ಸಾಧನೆ ಮಾಡಿದ್ದಾರೆ.

ಉಚಿತ ಸಿಇಟಿ, ಜೆಇಇ, ನೀಟ್ ಕೋಚಿಂಚ್ ಕ್ಲಾಸ್ ಗಳು

ಪೋಷಕರ ಭರವಸೆ ಇನ್ನಷ್ಟು ದ್ವಿಗುಣಗೊಳಿಸಲು ಪ್ರಥಮ ಹಾಗೂ ದ್ವಿತೀಯ ವಿಜ್ಞಾನ ವಿಭಾಗದ ವಿದ್ಯಾರ್ಥಿಗಳಿಗೆ ನಿಟ್/ಜೆಇಇ/ಸಿಇಟಿ ಉಚಿತ ತರಬೇತಿಯನ್ನು ಭೋದಿಸಲು ಶಿಕ್ಷಣ ಸಂಸ್ಥೆ ಮುಂದಾಗಿದೆ. ಅಪಾರ ಅನುಭವವಿರುವ ನುರಿತ ಉಪನ್ಯಾಸಕರಾದ ಸದಾನಂದಗೌಡ ಸಿ. ಚೈತನ್ಯ ಕಾಲೇಜು ಬೆಂಗಳೂರು, ನಗೇಶ್ ಗುಪ್ತಾ ವಿಜಯವಾಡ, ವಿನಯ ಕುಮಾರ್ ಮಾಸ್ಟರ್ ಮೈಂಡ್ ಕಾಲೇಜ ಗುಂಟೂರು, ಆಂಧ್ರ ಪ್ರದೇಶ ಹಾಗೂ ಮಂಗಳೂರು, ಮೈಸೂರು ಮುಂತಾದ ಕಾಲೇಜಿನಲ್ಲಿ ಕಲಿಸುವ ಉಪನ್ಯಾಸಕರು ಬರುತ್ತಿದ್ದು, ಇದರ ತರಗತಿಯನ್ನು ಶನಿವಾರ ಹಾಗೂ ಭಾನುವಾರದಂದು ನಡೆಸಲಾಗುತ್ತಿದೆ.

ಇದರ ಪ್ರಯೋಜನವನ್ನು ಯಾವುದೇ ಕಾಲೇಜಿನಲ್ಲಿ ಓದುತ್ತಿರುವ ಆಸಕ್ತ ವಿದ್ಯಾರ್ಥಿಗಳು ಉಚಿತವಾಗಿ ಪಡೆದುಕೊಳ್ಳಬಹುದು ಎಂದು ಕಾಲೇಜಿನ ಅಧ್ಯಕ್ಷರಾದ ಶ್ರೀ ಮಂಕಾಳ ಎಸ್ ವೈದ್ಯ ಹಾಗೂ ಸಂಸ್ಥೆಯ ಮ್ಯಾನೇಜಿಂಗ್ ಡೈರೆಕ್ಟರ್ ಪುಷ್ಪಲತಾ ವೈದ್ಯ ಅವರು ಕೋರಿದ್ದಾರೆ.

ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ 8317472854(ಕೃಷ್ಣಮೂರ್ತಿ) ಅಥವಾ ನೇರವಾಗಿ ಕಾಲೇಜಿನ ಆಪೀಸಿನಲ್ಲಿ ಸಮಯ: 9:30 ರಿಂದ ಸಂಜೆ: 4:30 ರ ಒಳಗೆ ಸಂಪರ್ಕಿಸಬಹುದಾಗಿದೆ.

Exit mobile version