ಪಂಚಕ್ಷೇತ್ರಗಳಲ್ಲೊಂದಾದ ಶ್ರೀ ಕ್ಷೇತ್ರಧಾರೇಶ್ವರದ ಶ್ರೀ ಧಾರಾನಾಥ ಸ್ವಾಮಿ ಸನ್ನಿಧಿಯಲ್ಲಿ ನೂತನವಾಗಿ ನಿರ್ಮಿಸಿದ ಮಹಾದ್ವಾರದ ಉದ್ಘಾಟನಾ ಕಾರ್ಯಕ್ರಮ:ಸ್ವಾಮಿಯ ಕೃಪೆಗೆ ಪಾತ್ರರಾಗಬೇಕಾಗಿ ಸಂಘಟಕರ ವಿನಂತಿ
ಕಾರವಾರ: ಪಂಚಕ್ಷೇತ್ರಗಳಲ್ಲೊಂದಾದ ಶ್ರೀ ಕ್ಷೇತ್ರಧಾರೇಶ್ವರದ ಶ್ರೀ ಧಾರಾನಾಥ ಸ್ವಾಮಿ ಸನ್ನಿಧಿಯಲ್ಲಿ ನವೆಂಬರ್ 28ರ ರವಿವಾರ ಮತ್ತು 29 ರ ಸೋಮವಾರ ವಿಶೇಷ ಧಾರ್ಮಿಕ, ವೈದಿಕ ಕಾರ್ಯಕ್ರಮಗಳು, ನೂತನವಾಗಿ ನಿರ್ಮಿಸಿದ ಮಹಾದ್ವಾರದ ಉದ್ಘಾಟನಾ ಕಾರ್ಯಕ್ರಮಗಳು ನಡೆಯಲಿವೆ.
28-11-2021 ರಂದು ಏಕಾದಶ ನಾರಿಕೇಳ ಗಣಹವನ, ಮತ್ತು ಮಹಾರುದ್ರ ಪಠಣಗಳು ನಡೆಯಲಿವೆ. ಈ ದಿನ ರಾತ್ರಿ 9.00 ಘಂಟೆಗೆ ಸರ್ವಾಭರಣದೊಂದಿಗೆರಾಜೋಪಚಾರ ಪೂಜೆ ನಡೆಯಲಿದೆ. 29-11-2021 ಸೋಮವಾರ ಮಹಾರುದ್ರಯಾಗ, ಹಾಗೂ ಯಾಗದ ಪೂರ್ಣಾಹುತಿ, ಮಂಗಳಾರತಿ ಮಹಾನೈವೇದ್ಯ ಮಹಾ ಅನ್ನಸಂತರ್ಪಣೆ ನಡೆಯಲಿದೆ.
ಸಂಜೆ ನೂತನ ಮಹಾದ್ವಾರದ ಉದ್ಘಾಟನಾಕಾರ್ಯಕ್ರಮ, ಸಭಾಕಾರ್ಯಕ್ರಮ ಮತ್ತು ಮಹಾದ್ವಾರ ನಿರ್ಮಾಣಕ್ಕೆ ಹೆಚ್ಚಿನ ಸಹಾಯಧನ, ದೇಣಿಗೆ ನೀಡಿದ ದಾನಿಗಳಿಗೆ ಗೌರವಅರ್ಪಣೆ ನಡೆಯಲಿದೆ. ಸಭಾಕಾರ್ಯಕ್ರಮದ ನಂತರ ಸಾಂಸ್ಕøತಿಕ ಕಾರ್ಯಕ್ರಮಗಳು ಹಾಗೂ ಮೂರು ಮುತ್ತುಖ್ಯಾತಿಯ ತಂಡದಿಂದ “ಮದುಮಗ” ನಾಟಕ ನಡೆಯಲಿವೆ.
ಭಕ್ತಾದಿಗಳು ಈ ಎಲ್ಲಕಾರ್ಯಕ್ರಮದಲ್ಲಿ ಹಾಜರಿದ್ದುತೀರ್ಥ ಪ್ರಸಾದ ಸ್ವೀಕರಿಸಿ ಶ್ರೀ ಧಾರಾನಾಥ ಸ್ವಾಮಿಯ ಕೃಪೆಗೆ ಪಾತ್ರರಾಗಬೇಕಾಗಿ ಸಂಘಟಕರು ವಿನಂತಿಸಿದ್ದಾರೆ. ಕೋವಿಡ್‍ತಡೆಗಟ್ಟುವಲ್ಲಿ ಸರಕಾರ ಸೂಚಿಸಿದ ಎಲ್ಲ ನಿಯಮಾವಳಿಗಳನ್ನು ಪಾಲಿಸಲಾಗುತ್ತದೆ ಮತ್ತು ಈ ದಿಸೆಯಲ್ಲಿ ಕ್ಷೇತ್ರಕ್ಕೆ ಆಗಮಿಸುವ ಭಕ್ತಾದಿಗಳ ಸಹಕಾರವನ್ನು ಆಶಿಸುತ್ತೇವೆ.
ವಿಸ್ಮಯ ನ್ಯೂಸ್ ಕುಮಟಾ