ಅಂಕೋಲಾ: ಸರ್ಕಾರದ ಸೂಚನೆಯಂತೆ ಸ್ವಾತಂತ್ರ್ಯೋತ್ಸವದ ಅಮೃತ ಮಹೋತ್ಸವದ ಅಂಗವಾಗಿ ಮಕರ ಸಂಕ್ರಾಂತಿ ಪ್ರಯುಕ್ತ ಸೂರ್ಯ ನಮಸ್ಕಾರ ಕಾರ್ಯಕ್ರಮವನ್ನು ಅಂಕೋಲಾ ತಹಶೀಲ್ಧಾರರ ಕಚೇರಿಯ ಹೊರ ಆವರಣದಲ್ಲಿ ಆಯೋಜಿಸಲಾಗಿತ್ತು.
ತಹಶೀಲ್ಧಾರ ಉದಯ ಕುಂಬಾರ ಅವರ ಅವರು ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿ, ಒತ್ತಡದ ಇಂದಿನ ಬದುಕಿಗೆ ಯೋಗ, ಪ್ರಾಣಾಯಾಮಗಳ ಮೂಲಕ ಮಾನಸಿಕ ನೆಮ್ಮದಿ ಹಾಗೂ ಆರೋಗ್ಯ ಭಾಗ್ಯ ಪಡೆಯಲು ಸಾಧ್ಯವಿದೆ ಎಂದರು.
ಯೋಗ ಗುರು ವಿನಾಯಕ ಗುಡಿಗಾರ ಅವರು ಸೂರ್ಯ ನಮಸ್ಕಾರದ ವಿವಿಧ ಆಯಾಮ, ಮಾಡುವ ಕ್ರಮ, ಅದರಿಂದ ದೊರೆಯುವ ಹೆಚ್ಚಿನ ಪ್ರಯೋಜನದ ಕುರಿತು ಸವಿಸ್ತರವಾಗಿ ವಿವರಿಸಿ,ನೆರೆದ ಅಧಿಕಾರಿಗಳು ಮತ್ತು ಸಿಬ್ಬಂದಿಗಳಿಗೆ ಸೂರ್ಯನಮಸ್ಕಾರದ ಕ್ರಮಬದ್ಧತೆ ಕ್ರಮಬದ್ಧತೆ ತಿಳಿಸಿಕೊಟ್ಟರು.ಕಂದಾಯ ಹಾಗೂ ಪುರಸಭೆ ಇಲಾಖೆಯ ಕೆಲ ಅಧಿಕಾರಿಗಳು, ಇತರೆ ಸಿಬ್ಬಂದಿಗಳು ಪಾಲ್ಗೊಂಡಿದ್ದರು.
ತಾಲೂಕು ಆರೋಗ್ಯ ಅಧಿಕಾರಿ ಡಾ. ನಿತೀನ್ ಹೋಸ್ಮೇಲಕರ ನೇತೃತ್ವದಲ್ಲಿ ತಾಲೂಕ ಆರೋಗ್ಯ ಅಧಿಕಾರಿಗಳ ಕಚೇರಿ ಆವರಣದಲ್ಲಿ, ಮತ್ತು ಹಟ್ಟಿಕೇರಿ ಸೇರಿದಂತೆ ಅಯಾ ವ್ಯಾಪ್ತಿಯ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಸೂರ್ಯ ನಮಸ್ಕಾರ ವಿಶೇಷ ಕಾರ್ಯಕ್ರಮ ಆಯೋಜಿಸಲಾಗಿತ್ತು. ಆಯುಷ್ ವಿಭಾಗದ ಸಹಯೋಗದಲ್ಲಿ ವೈದ್ಯರು ಮತ್ತು ಸಿಬ್ಬಂದಿಗಳು ಸೂರ್ಯ ನಮಸ್ಕಾರದ ಮಾಡಿದರು..
ತಾ.ಪಂ ಇ ಓ ಪಿ. ವೈ ಸಾವಂತ ನೇತೃತ್ವದಲ್ಲಿ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ಸೂರ್ಯ ನಮಸ್ಕಾರ ಮಾಡಿದರು. ತಾಲೂಕಿನ ಇತರೆ ಕೆಲ ಸರ್ಕಾರಿ ಕಚೇರಿಗಳು,ಕಾಲೇಜುಗಳಲ್ಲಿ ಜಿಲ್ಲಾಧಿಕಾರಿಗಳ ಸೂಚನೆಯಂತೆ ಸೂರ್ಯ ನಮಸ್ಕಾರ ಕಾರ್ಯಕ್ರಮಗಳನ್ನ ಸರ್ಕಾರದ ಕೋವಿಡ್ ಮಾರ್ಗಸೂಚಿ ಪಾಲನೆಯೊಂದಿಗೆ ಸರಳವಾಗಿ ನಡೆಸಲಾಗಿದೆ ಎನ್ನಲಾಗಿದೆ.
ವಿಸ್ಮಯ ನ್ಯೂಸ್ ವಿಲಾಸ ನಾಯಕ ಅಂಕೋಲಾ