ಬಿಡುವಿನ ವೇಳೆಯಲ್ಲಿ ಮಕ್ಕಳೊಂದಿಗೆ ಊರಿನವರೊಂದಿಗೆ ಬೆರತು ಕ್ರಿಕೆಟ್ ಆಡಿದ ಸ್ಪೀಕರ್ ಕಾಗೇರಿ: ಕ್ರಿಕೆಟ್ ಆಡಿ ಬಾಲ್ಯದ ದಿನಗಳ ಮೆಲುಕು

ಶಿರಸಿ : ಸರಳ ಸಜ್ಜನಿಕೆಗೆ ಹೆಸರಾಗಿರುವ ವಿಧಾನಸಭಾ ಸ್ಪೀಕರ್ ಕಾಗೇರಿ ರವರು ತಮ್ಮೂರಿನಲ್ಲಿ ಪಂಚೆ ಉಟ್ಟು ಗ್ರಾಮಸ್ತರೊಂದಿಗೆ ಕ್ರಿಕೆಟ್ ಆಡುವ ಮೂಲಕ ಮತ್ತೊಮ್ಮೆ ಸುದ್ದಿಯಾಗಿದ್ದಾರೆ. ಶಿರಸಿ ತಾಲೂಕಿನ ಕುಳವೆಯಲ್ಲಿ ಸ್ಪೀಕರ್ ಕಾಗೇರಿಯವರು ಬಿಡುವಿನ ವೇಳೆಯಲ್ಲಿ ಕ್ರಿಕೆಟ್ ಆಡಿದ್ದು ಇದೀಗ ವಿಡಿಯೊ ವೈರಲ್ ಆಗದ್ದು ಸ್ಪೀಕರ್ ಆಗಿ ಇಡೀ ವಿಧಾನಸಭೆಯ ಸದಸ್ಯರನ್ನು ನಿಯಂತ್ರಣ ಮಾಡುವ ಅವರು ಮಕ್ಕಳೊಂದಿಗೆ ಊರಿನವರೊಂದಿಗೆ ಬೆರತು ಆಡುತ್ತಿರುವುದು ಅವರ ಸರಳತೆಗೆ ಮಾದರಿಯಾಗಿದೆ.

ಸಾಂವಿಧಾನಿಕವಾಗಿ ಮಹತ್ವದ ಹುದ್ದೆ ಹೊಂದಿರುವ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಅವರು ಕ್ರಿಕೆಟ್ ಆಡುವ ಮೂಲಕ ತಮ್ಮ ಬಾಲ್ಯದ ದಿನಗಳಿಗೆ ಜಾರಿದರು. ಶಿರಸಿ – ಸಿದ್ದಾಪುರ ಕ್ಷೇತ್ರದಲ್ಲಿ ವಿವಿಧ ಕಾಮಗಾರಿಗಳಿಗೆ ಚಾಲನೆ ನೀಡುತ್ತಿರುವ ಕಾಗೇರಿ ಅವರು ಬಿಡುವಿನ ವೇಳೆಯಲ್ಲಿ ತಮ್ಮ ಹುಟ್ಟೂರಾದ ಕುಳವೆಯಲ್ಲಿ ಮಕ್ಕಳು, ಯುವಕರೊಂದಿಗೆ ಕ್ರಿಕೆಟ್ ಆಡಿ ಬಾಲ್ಯದ ಮತ್ತು ಯವೌನದ ದಿನಗಳನ್ನು ಮೆಲುಕು ಹಾಕಿದರು.

ತಮ್ಮ ಹುಟ್ಟೂರು ಬರೂರಿ ದೇವಸ್ಥಾನದ ಅಭಿವೃದ್ಧಿ ಕಾರ್ಯದಲ್ಲೂ ಪಾಲ್ಗೊಂಡಿರುವ ಅವರು, ಅಲ್ಲಿ ಶ್ರಮದಾನ ಮಾಡುವ ಮೂಲಕವೂ ಗಮನ ಸೆಳೆದರು. ತಾನು ದೊಡ್ಡ ಸ್ಥಾನದಲ್ಲಿದ್ದೇನೆ ಎನ್ನುವ ಯಾವ ಹಮ್ಮುಬಿಮ್ಮುಗಳಿಲ್ಲದೆ ಅವರು ಗ್ರಾಮಸ್ಥರೊಂದಿಗೆ ಬೆರೆತು ಅವರ ಕೆಲಸಕ್ಕೆ ಕೈಜೋಡಿಸಿದರು. ಹಿಂದೆಯೂ ಅನೇಕ ಸಂದರ್ಭಗಳಲ್ಲಿ ಸಹ ವಿಧಾನಸಭಾ ಅಧಿವೇಶನ ಹೊರತು ಹಲವಾರು ಸಂದರ್ಭ ದಲ್ಲಿ ತಮ್ಮ ಕಾರ್ಯಕರ್ತರು, ಅಭಿಮಾನಿಗಳ ಜೊತೆ ಬೆರೆತು ಸರಳತೆ ಮೆರೆದಿದ್ದರು.

ವಿಸ್ಮಯ ನ್ಯೂಸ್, ಶಿರಸಿ

ಒಂದು ಕರೆ ನಿಮ್ಮ ಜೀವನವನ್ನೇ ಬದಲಾಯಿಸುತ್ತದೆ. ನಿಮ್ಮೆಲ್ಲಾ ಸಮಸ್ಯೆಗಳಿಗೂ ಇದೆ ಪರಿಹಾರ: ಶ್ರೀಶ್ರೀ ಪಂಡಿತ್ ಗೋಪಾಲ್ ಶರ್ಮಾ, ಪ್ರಸಿದ್ಧಿ ಪಡೆದ ಜ್ಯೋತಿಷಿಗಳು- 8884147324 : ವಾಸ್ತುಶಾಸ್ತ್ರ, ಸಂಖ್ಯಾಶಾಸ್ತ್ರ, ಜಾತಕ ವಿಶ್ಲೇಷಣೆ, ಮದುವೆ ಸಮಸ್ಯೆ, ಹಸ್ತಮುದ್ರಿಕಾ ಶಾಸ್ತ, ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವ್ಯವಹಾರದಲ್ಲಿ ನಷ್ಟ, ನಿಮ್ಮ ಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃಸಿದ್ಧ. ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ ಎರಡೇ ದಿನಗಳಲ್ಲಿ ಫೋನಿನ ಮೂಲಕ ನೆರವೇರಿಸಿ ಕೊಡುತ್ತಾರೆ. ಇಂದೇ ಸಂಪರ್ಕಿಸಿ.

Exit mobile version