ಜಿಲ್ಲೆಯಲ್ಲಿ ಇಂದು ಕರೊನಾ ಸ್ಫೋಟ|ಒಂದೇ ದಿನ12 ಕೇಸ್

ಕಾರವಾರ: ಉತ್ತರಕನ್ನಡದಲ್ಲಿ ಇಂದು ಕರೊನಾ ಸ್ಫೋಟಗೊಂಡಿದೆ. ಇಂದು ಒಂದೇ ದಿನ 12 ಕರೊನಾ ಕೇಸ್ ದೃಢಪಟ್ಟಿದೆ.
ಹೊನ್ನಾವರ ತಾಲೂಕಿನ ಮಾವಿನಕುರ್ವಾ ಮೂಲದ ವ್ಯಕ್ತಿಯಲ್ಲಿ ಕರೋನಾ ಕಾಣಿಸಿಕೊಂಡಿದೆ‌ ಮಹಾರಾಷ್ಟ್ರದಿಂದ ಹೊನ್ನಾವರಕ್ಕೆ ದಿನಾಂಕ 15 ರಂದು ಆಗಮಿಸಿ ಪಟ್ಟಣದ ಖಾಸಗಿ ಹೊಟೆಲನಲ್ಲಿ ಕ್ವಾರಂಟೈನಗೆ ಒಳಗಾಗಿದ 24 ವರ್ಷದ ಯುವಕನಲ್ಲಿ ಇಂದು ಪಾಸಿಟಿವ್ ದೃಡ ಪಟ್ಟಿರುವ ಬಗ್ಗೆ ಮಾಹಿತಿ ಲಭ್ಯವಾಗಿದೆ. ಅವರನ್ನು ಹೆಚ್ಚಿನ ಚಿಕಿತ್ಸೆಗಾಗಿ ಜಿಲ್ಲಾ ಕೋವಿಡ್ ಆಸ್ಪತ್ರೆಗೆ ಸ್ಥಳಾಂತರಿಸಲಾಗಿದೆ.
ಅಲ್ಲದೆ, ಮುಂಡಗೋಡ ತಾಲೂಕಿನ ಟಿಬೇಟಿನ್ ಕ್ಯಾಂಪಿನ 32 ವರ್ಷದ ಪುರಷ, 27 ವರ್ಷದ ಯುವಕ ಹಾಗೂ ಉತ್ತರಖಾಂಡದಿಂದ ವಾಪಸ್ಸಾಗಿದ್ದ 16 ವರ್ಷದ ಬಾಲಕಿಗೆ ಕೊರೋನಾ ದೃಢಪಟ್ಟಿದೆ. ಹಳಿಯಾಳ ತಾಲೂಕಿನ 25 ಹಾಗೂ 23 ವರ್ಷದ ಯುವತಿಗೂ ಸೋಂಕು ಧೃಡಪಟ್ಟಿದೆ. ಭಟ್ಕಳದಲ್ಲಿ ಓರ್ವ, ಜೋಯಿಡಾದಲ್ಲಿ ಓರ್ವ ಪಾಸಿಟಿವ್ ಬಂದಿದೆ‌ ಹಾಗೂ ಶಿರಸಿಯ 55 ವರ್ಷದ ವ್ಯಕ್ತಿ, ಮತ್ತು ಯಲ್ಲಾಪುರ 3 ವರ್ಷದ ಹೆಣ್ಣು ಮಗುವಿಗೆ ಕೊರೋನಾ ಧೃಡ ಪಟ್ಟಿದೆ.

[sliders_pack id=”1487″]
Exit mobile version