ಅಡ್ಡಾದಿಡ್ಡಿ ಬೈಕ್ ಚಲಾಯಿಸಿ ಭಯ ಹುಟ್ಟಿಸಿದ ಯುವ ಜೋಡಿ: ಪೊಲೀಸರೊಂದಿಗೆ ವಾಗ್ವಾದ, ರಂಪಾಟ: ದಂಡ ವಿಧಿಸಿ ಎಚ್ಚರಿಕೆ ನೀಡಿ ಕಳುಹಿಸಿದ ಪಿಎಸ್‌ಐ

ಗೋಕರ್ಣ: ಅಡ್ಡಾದಿಡ್ಡಿ ಬೈಕ್ ಚಲಾಯಿಸಿ ಭಯ ಹುಟ್ಟಿಸಿದ ಯುವ ಜೋಡಿಯೊಂದು ಬಳಿಕ ಎಚ್ಚರಿಕೆ ನೀಡಿದ ಪೊಲೀಸರೊಂದಿಗೆ ವಾಗ್ವಾದಕ್ಕಿಳಿದು ರಂಪಾಟ ನಡೆಸಿದ ಘಟನೆ ಗೋಕರ್ಣದಲ್ಲಿ ನಡೆದಿದೆ.. ಹೈದ್ರಾಬಾದ್‌ನ ಯುವಕ ಮತ್ತು ಯವತಿ ಜನನಿಬಿಡ ರಸ್ತೆಯಲ್ಲಿ ಯುವತಿ ಮುಂದೆ ಕುಳಿತಿದ್ದು, ಹಿಂದಿನ ಸೀಟ್ ನಲ್ಲಿ ಕುಳಿತ ಯುವಕ ಬೈಕ ಅತ್ತಿತ್ತ ಚಲಾಯಿಸುತ್ತಾ ಭಯ ಉಂಟುಮಾಡುತ್ತಿದ್ದು, ಇದನ್ನು ಗಮನಿಸಿದ ಪೊಲೀಸರು ಬೈಕ್ ನಿಲ್ಲಿಸಿ ಎಚ್ಚರಿಕೆ ನೀಡಲು ಮುಂದಾಗಿದ್ದರು.

ಆದರೆ ಈ ವೇಳೆ ಪೊಲೀಸರ ಮೇಲೆ ಇಬ್ಬರು ಹರಿಹಾಯ್ದು ರಂಪಾಟ ನಡೆಸಿ ಮತ್ತೆ ಬೈಕ ಚಲಾಯಿಸಲು ಯತ್ನಿಸಿ ಬಿದ್ದಿದ್ದು, ನಂತರ ವಾದಕ್ಕೆ ಇಳಿದಿದ್ದರು. ಬಳಿಕ ಪೊಲೀಸ್ ತುರ್ತು ಸೇವಾ ವಾಹನ 112 ಸ್ಥಳಕ್ಕೆ ಆಗಮಿಸಿ ಇಬ್ಬರನ್ನು ಠಾಣೆಗೆ ಕರೆದುಕೊಂಡು ಹೋಗಿದ್ದರು. ನಂತರ ಪಿ.ಐ. ವಸಂತ ಆಚಾರ ದಂಡ ವಿಧಿಸಿ ಎಚ್ಚರಿಕೆ ನೀಡಿ ಕಳುಹಿಸಿದ್ದಾರೆ. ಬೈಕ ಬೀಳಿಸಿಕೊಂಡು ಸಣ್ಣ ಪುಟ್ಟ ಗಾಯ ಮಾಡಕೊಂಡ ಯುವತಿಗೆ ಪೊಲೀಸರೇ ಆರೋಗ್ಯ ಕೇಂದ್ರಕ್ಕೆ ಕೆರದುಕೊಂಡು ಹೋಗಿ ಚಿಕಿತ್ಸೆ ಕೊಡಿಸಿ ಮಾನವೀಯತೆ ಮೆರೆದಿದ್ದಾರೆ.

ಯುವ ಜೋಡಿ ರೆಸಾರ್ಟ್ ಒಂದರಲ್ಲಿ ವಸತಿ ಪಡೆದಿದ್ದಾರೆ ಎನ್ನಲಾಗಿದ್ದು, ಇಬ್ಬರು ಮದ್ಯ ಅಥವಾ ಇನ್ನಾವುದೂ ಅಮಲು ಪದಾರ್ಧ ಸೇವಿಸಿರುವ ಸಂದೇಹ ವ್ಯಕ್ತವಾಗಿದ್ದು, ಇದಕ್ಕೆ ಪುಷ್ಟಿ ನೀಡುವಂತೆ ಆಸ್ಪತ್ರೆಗೆ ಕರೆದುಕೊಂಡು ಹೋಗುತ್ತೇವೆ ಎಂದು ಪೊಲೀಸರು ಹೇಳಿದರೆ ಬೇಡವೇ ಬೇಡ ಎಂದು ಹಠ ಹಿಡಿದಿದ್ದರು. ರಾತ್ರಿ 8 ಗಂಟೆ ಬೆಂಗಳೂರಿಗೆ ತೆರಳಲು ಬಸ್ ಬುಕ್ ಮಾಡಿದ್ದು, ದಯವಿಟ್ಟು ಬಿಟ್ಟು ಬಿಡಿ ಎಂದು ಕ್ಷಮೆಯಾಚಿಸಿ ದಂಡ ಕಟ್ಟಿ ತರಾತುರಿಯಲ್ಲಿ ಪೊಲೀಸ ಠಾಣೆಯಿಂದ ತೆರಳಿದ್ದಾರೆ.

ವಿಸ್ಮಯ ನ್ಯೂಸ್, ಗೋಕರ್ಣ

Exit mobile version