Follow Us On

WhatsApp Group
Focus News
Trending

ತ್ಯಾಜ್ಯ ವಿಲೇವಾರಿಯಲ್ಲಿ ಹಿಗೋಂದು ಮಾದರಿಯಾದ ಬೇಂಗ್ರೆ ಗ್ರಾಮ ಪಂಚಾಯತಿ

ಲೇಖನ; ಉಮೇಶ ಮುಂಡಳ್ಳಿ ಭಟ್ಕಳ
ಭಟ್ಕಳ; ವೃತ್ತಿಯಲ್ಲಿ ಬದ್ದತೆ ಕ್ರಿಯಾಶೀಲತೆ ಹಾಗೂ ಸಮಾಜಮುಖಿ ಕಳಕಳಿ ಇದ್ದಲ್ಲಿ ಅಸಾಧ್ಯವಾದದ್ದನ್ನು ಕಷ್ಟಕರ ಎಂದು ದೂರ ಇಟ್ಟವುಗಳನ್ನೂ ಸಹ ಸುಲಭವಾಗಿ ಸಾದಿಸಿ ತೋರಿಸಬಹುದಾಗಿದೆ. ಹೌದು ಇಂತ ಒಂದು ಸಾಧ್ಯತೆ ಸಾಧ್ಯವಾಗಿದ್ದು ,ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದ್ದು ಉತ್ತರ ಕನ್ನಡ ಜಿಲ್ಲೆಯ ಭಟ್ಕಳ ತಾಲ್ಲೂಕಿನ ಬೇಂಗ್ರೆ ಗ್ರಾಮ ಪಂಚಾಯತಿಯಲ್ಲಿ.

ಕೆಲಸದಲ್ಲಿ ಸದಾ ಹೊಸತನ ಹೊಸ ಸಾಧ್ಯತೆ ಜನೋಪಕಾರಿ ಚಿಂತನೆಗಳ ಮುಖೇನ ಸದಾ ಸಾರ್ವಜನಿಕರೊಂದಿಗೆ ನಗುನಗುತ್ತಲೇ ಕೆಲಸ ಮಾಡುತ್ತ ಬರುತ್ತಿರುವ ಕುಮಟಾ ಮೂಲದ ಉದಯ ಬೋರ್ಕರ್ ಎನ್ನುವ ಅಭಿವೃದ್ಧಿ ಅಧಿಕಾರಿಗಳೇ ಈ ಸಾಧ್ಯತೆಗಳ ರುವಾರಿಗಳು.

ಕರೊನಾ ಕಾಯಿಲೆ ಅದರ ಭೀಕರ ಪರಿಣಾಮ ಎಲ್ಲ ಕಡೆ ವ್ಯಾಪಿಸಿ ಅನೇಕ ಅವಗಡಗಳನ್ನು ತಂದೊಡ್ಡಿದ ಸಮಯದಲ್ಲಿಯೇ ದೇಶದ ಹೆಮ್ಮೆಯ ನಾಯಕ ನರೇಂದ್ರ ಮೋದಿಜಿಯವರ ಆಶಯ ಹಾಗೂ ಜಿಲ್ಲಾ ಪಂಚಾಯತಿಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳ ಸೂಚನೆ ಮಾರ್ಗದರ್ಶನದಂತೆ ಮೊದಲು ತಮ್ಮ ಗ್ರಾಮ ಪಂಚಾಯತಿ ಯಲ್ಲಿ ಸಂಪೂರ್ಣ ಸ್ವಚ್ಚತಾ ಅಭಿಯಾನ ಕೈಗೊಳ್ಳುವ ಮೂಲಕ ಪೂರ್ತಿ ಗ್ರಾಮದಲ್ಲಿ ಸ್ವಚ್ಚತೆಯ ಅರಿವೂ ಮೂಡಿಸುವ ಪ್ರತಿ ಮನೆ ಅಂಗಡಿಗಳಿಂದಲೂ ಹಸಿ ಹಾಗೂ ಒಣಕಸಗಳನ್ನು ಸಂಗ್ರಹಿಸುವ ತೀರ್ಮಾನ ಮಾಡುತ್ತಾರೆ.ಈ ಬಗ್ಗೆ ತಮ್ಮ ಪಂಚಾಯತಿಯ ಅಧ್ಯಕ್ಷರು ಉಪಾಧ್ಯಕ್ಷರು ಹಾಗೂ ಎಲ್ಲ ಸದಸ್ಯರಿಗೆ ಈ ಬಗ್ಗೆ ಮನವರಿಕೆ ಮಾಡಿ ಒಕ್ಕೊರಲಿನಿಂದ ಎಲ್ಲರ ಒಪ್ಪಿಗೆ ಪಡೆಯುತ್ತಾರೆ.

ಪಿಡಿಓ ಹಾಗೂ ಪಂಚಾಯತಿ ಸಿಬ್ಬಂದಿಗಳು ಪ್ರತಿ ಗ್ರಾಮಸ್ತರಿಗೂ ಸ್ಬಸಹಾಯ ಸಂಘದ ಸದಸ್ಯರಿಗೂ ಹಸಿ ಕಸ ಹಾಗೂ ಒಣ ವಿಂಗಡಿಸುವಲ್ಲಿ ಮಾರ್ಗದರ್ಶನ ನೀಡಿದ್ದಾರೆ. ಇದರಿಂದ ಗ್ರಾಮಸ್ಥರು ಸುಲಭವಾಗಿ ಕಸ ವಿಂಗಡನೆ ಮಾಡಿ ಕಸದ ವಾಹನಕ್ಕೆ ನೀಡುತ್ತಾರಡ. ವಿಂಗಡನೆಗೊಂಡ ಕಸವನ್ನು ವಿಲೆವಾರಿ ಘಟಕಕ್ಕೆ ತಂದು ಮರುಬಳಕೆ ಹಾಗೂ ವಿಲೆವಾರಿ ಮಾಡಬೇಕಾದ ಕಸವನ್ನು ನೇಮಕವಾದ ಸ್ವಚ್ಚತಾ ಕಾರ್ಯಕರ್ತರು ವ್ಯವಸ್ಥಿತ ವಾಗಿ ವಿಂಗಡನೆ ಮಾಡುತ್ತಾರೆ

ಎಲ್ಲೆಂದರಲ್ಲಿ ಕಸ ಎಸೆದು ಮಲಿನವಾಗಿದ್ದ ಪರಿಸರ ಪಂಚಾಯತಿಯ ಈ ಉತ್ತಮ ಕಾರ್ಯದಿಂದ ಊರಿನಲ್ಲಿ ಸ್ವಚ್ಛ ವಾತಾವರಣ ನಿರ್ಮಾಣವಾಗಿತ್ತಿದೆ ಎನ್ನುತ್ತಾರೆ ಬೇಂಗ್ರೆ ಸಣಬಾವಿಯ ಪ್ರಜ್ಞಾವಂತ ಗ್ರಾಮಸ್ಥರು. ಸ್ವಚ್ಚತೆಯ ಜೊತೆ ಜೊತೆಗೆ ಕೆಲವು ಕಸದಲ್ಲಿ ಸಂಗ್ರಹವಾದ ಪ್ಲಾಸ್ಟಿಕ್ ಇನ್ನಿತರೆ ವಸ್ತುಗಳು ಮಾರಾಟ ಮಾಡಿ ಬಂದ ಹಣದಿಂದ ಸ್ವಚ್ಚತಾ ಸಿಬ್ಬಂದಿಗಳಿಗೆ ಅದರಿಂದಲೇ ಗೌರವಧನ ಪಾವತಿ ಮಾಡುತ್ತಿರುವುದು ಪಂಚಾಯತಿ ಅಧಿಕಾರಿಗಳ ದೂರಿದೃಷ್ಟಿತ್ವಕ್ಕೆ ಸಾಕ್ಷಿಯಾಗಿದೆ.

ಈ ಕಸ ಸಂಗ್ರಹ ಸುಲಭತೆಗಾಗಿ ಗ್ರಾಮ ಪಂಚಾಯತ್ ವತಿಯಿಂದ 13 ಶಾಲೆ,15ಅಂಗನವಾಡಿಗಳಿಗೆ ಸ್ವಚ್ಚತೆಯ ದೃಷ್ಟಿಯಿಂದ ಬ್ಲೀಚಿಂಗ್ ಪೌಡರ್,ಫಿನಾಯಲ್,ಬಕೆಟ್ ಇತರೆ ಸಾಮಾಗ್ರಿಗಳನ್ನು ಉಚಿತವಾಗಿ ವಿತತಣೆ ಮಾಡಿರುವುದನ್ನು ಗಮನಿಸಬಹುದಾಗಿದೆ. ಸುಶಿಕ್ಷಿತ ಪಂಚಾಯತಿ ಅಧ್ಯಕ್ಷರಾದ ಶ್ರಿಮತಿ ಬೇಬಿ ಮಾರುತಿ ನಾಯ್ಕ ಕೂಡ ಈ ಕಾರ್ಯದಲ್ಲಿ ಮುಂಚೂಣಿಯಾಗಿ ನಿಂತು ಅಭಿವೃದ್ಧಿ ಸ್ವಚ್ಚತಾ ಕಾರ್ಯಕ್ಕೆ ಸಾತ್ ನೀಡುತ್ತಿದ್ದಾರೆ.

ಒಟ್ಟಿನಲ್ಲಿ ತಮ್ಮ ಸೇವಾ ಕಾರ್ಯದಲ್ಲಿ ಬದ್ದತೆ ಇದ್ದು ಅದಕ್ಕಾಗಿ ಸಿದ್ದತೆ ಮಾಡಿಕೊಳ್ಳುವ ಮನೋಭಾವ ದೂರದೃಷ್ಟಿತ್ವ ಇದ್ದಲ್ಲಿ ತಮ್ಮ ಕಾರ್ಯದಲ್ಲೇ ವಿಶೇಷವಾದ ನ್ನು ವಿಶಿಷ್ಟವಾದ ದನ್ನು ಜನೋಪಕಾರಿಯಾದದನ್ನು ಖಂಡಿತ ಮಾಡಲು ಸಾಧ್ಯ ಎನ್ನುವುದು ಕ್ರಿಯಾಶೀಲ ಅಭಿವೃದ್ಧಿ ಅಧಿಕಾರಿ ಉದಯ ಬೋರ್ಕರ್ ಅವರು ತೋರಿಸಿಕೊಟ್ಟಿದ್ದಾರೆ.

ಪ್ರಾಮಾಣಿಕ ಪ್ರಯತ್ನದಿಂದ ಇವರು ತಮ್ಮ ಸೇವಾ ಅವದಿಯಲ್ಲಿ ಇನ್ನಷ್ಟು ಜನೋಪಕಾರಿಯಾದ ಚಿಂತನೆಗಳಿಂದ ಗ್ರಾಮದಲ್ಲಿ ಅಭಿವೃದ್ದಿ ತರಲಿ ಎನ್ನುವುದು ನಮ್ಮೆಲ್ಲರ ಆಶಯವಾಗಿದೆ.

ಮಾಹಿತಿ ಸಂಪರ್ಕ :(ಪಿಡಿಓ ) ಉದಯ ಬೋರ್ಕರ್
ಮೊಬೈಲ್- 9495055579

Back to top button