ಅಂಕೋಲಾ: ಬಸ್ ನಿಲ್ದಾಣದಲ್ಲಿರುವ ಸಾರ್ವಜನಿಕ ಶೌಚಾಲಯಕ್ಕೆ ತೆರಳಿದ ವ್ಯಕ್ತಿಯೋರ್ವ, ಬಹು ಹೊತ್ತಾದರೂ ಹೊರಗೆ ಬಾರದಿರುವುದನ್ನು ಗಮನಿಸಿದ ಸಿಬ್ಬಂದಿ, ಆತಂಕ ಗೊಂಡು, ಶೌಚೌಲಯದ ಹಿಂಬದಿ ಕಿಂಡಿಯಿಂದ ಮೊಬೈಲಲ್ಲಿ ವಿಡಿಯೋ ಮಾಡಿ,ಆತಂಕಕ್ಕೊಳಗಾದ ಘಟನೆ ನಡೆದಿದೆ. ಬಹುಕೋಟಿ ವೆಚ್ಚದಲ್ಲಿ ಅಂಕೋಲಾದಲ್ಲಿ ಹೊಸ ನಿಲ್ದಾಣ ನಿರ್ಮಾಣ ಮಾಡಲಾಗಿದೆ.ಬಸ್ ನಿಲ್ದಾಣದ ಮುಂಬದಿಯಲ್ಲಿ ಹೊಸ ಶೌಚಾಲಯವನ್ನು ನಿರ್ಮಿಸಲಾಗಿದೆ.
ಪ್ರತಿನಿತ್ಯ ಈ ಬಸ್ ನಿಲ್ದಾಣಕ್ಕೆ ಸಾವಿರಾರು ಪ್ರಯಾಣಿಕರು ಬಂದು ಹೋಗುತ್ತಿದ್ದು,ಶಿವರಾತ್ರಿ ಮತ್ತಿತರ ಕಾರಣಗಳಿಂದ ಬಸ್ ನಿಲ್ದಾಣ ಜನರಿಂದ ತುಂಬಿ ತುಳುಕುತ್ತಿತ್ತು.ಹೊಸ ಬಸ್ ನಿಲ್ದಾಣದ ಹಿಂಬದಿಯಲ್ಲಿ ಈ ಹಿಂದೆ ಇದ್ದ ಹಳೆಯ ಶಾಚಾಲಯವನ್ನು ಈಗಲೂ ಪ್ರಯಾಣಿಕ ಬಳಕೆಗೆ ತೆರೆದಿಡಲಾಗಿದ್ದು ದಿನನಿತ್ಯ ನೂರಾರು ಪ್ರಯಾಣಿಕರು ತಮ್ಮ ಶೌಚ ಬಾದೆ ತೀರಿಸಿಕೊಳ್ಳಲು,ಮಲಮೂತ್ರ ವಿಸರ್ಜಿಸಲು ಇದೆ ಹಳೆಯ ಶೌಚಾಲಯಕ್ಕೆ ಬಂದು ಹೋಗುತ್ತಿರುತ್ತಾರೆ.
ಪ್ರಯಾಣಿಕನೋರ್ವ ಇಲ್ಲಿಯ ಶೌಚಾಲಯಕ್ಕೆ ಬಂದವನು,ಒಳಗಡೆ ಹೋಗಿ ಬಾಗಿಲು ಚಿಲಕ ಭದ್ರ ಪಡಿಸಿಕೊಂಡಿದ್ದ ಎನ್ನಲಾಗಿದೆ. ಈ ಪ್ರಯಾಣಿಕನ ಬಳಿಕ ಮತ್ತೆ ಹತ್ತಾರು ಪ್ರಯಾಣಿಕರು ಅಕ್ಕಪಕ್ಕದ ಬೇರೆಬೇರೆ ಶೌಚ ಗ್ರಹಗಳಲ್ಲಿ ತಮ್ಮ ಶೌಚ ಬಾಧೆ ತೀರಿಸಿಕೊಂಡು,ನಿಗದಿತ ಶುಲ್ಕ ಪಾವತಿಸಿ ಮರಳಿದರು ಎನ್ನಲಾಗಿದೆ. ಆದರೆ ಈ ಮೊದಲೇ ಹೋಗಿದ್ದ ಪ್ರಯಾಣಿಕನೋರ್ವ ಬಹು ಹೊತ್ತಾದರೂ ,ಶೌಚಗೃಹ ದಿಂದ ಹೊರ ಬರದಿರುವುದನ್ನು ಗಮನಿಸಿದ,ಶೌಚಗೃಹ ನಿರ್ವಹಣೆ ಸಿಬ್ಬಂದಿ ಬಾಗಿಲ ಬಂದು , ಬಾಗಿಲು ಬಡಿದು ಒಳಗೆ ಇರುವ ಪ್ರಯಾಣಿಕನನ್ನು ಯಾಕೆ ಬಂದಿಲ್ಲ ಎಂದು ಪ್ರಶ್ನಿಸುವಂತೆ ಹಲವು ಬಾರಿ ಪ್ರಯತ್ನಿಸಿದರು,ಒಳಗಡೆಯಿಂದ ಉತ್ತರ ಬಂದಿರಲಿಲ್ಲ.
ಇದರಿಂದ ಆತಂಕಗೊಂಡ ನಿರ್ವಹಣಾ ಸಿಬ್ಬಂದಿ,ಶೌಚಾಲಯದ ಹಿಂಬದಿ ಹೋಗಿ,ಶೌಚಾಲಯದ ಕಿಂಡಿಯಲ್ಲಿ ತನ್ನ ಮೊಬೈಲ್ ತೂರಿಸಿ,ವಿಡಿಯೋ ರೆಕಾರ್ಡ್ ಮಾಡಿದ್ದಾನೆ. ಕಿಂಡಿ ಇಂದ ಮೊಬೈಲನ್ನು ಹೊರತೆಗೆದು ವಿಡಿಯೋ ದೃಶ್ಯಾವಳಿಗಳನ್ನು ನೋಡಲಾಗಿ ಶೌಚಾಲಯದ ಒಳಗೆ ಹೋಗಿದ್ದ ವ್ಯಕ್ತಿ,ಸತ್ತು ಬಿದ್ದಿರುವಂತೆ ಕಂಡು ಬಂದಿದೆ.ಇದರಿಂದ ಅವಕ್ಕಾದ ನಿರ್ವಹಣಾ ಸಿಬ್ಬಂದಿ, ಬಸ್ ನಿಲ್ದಾಣದ ಸಾರಿಗೆ ಅಧಿಕಾರಿಗಳ ಗಮನಕ್ಕೆ ತಂದು,ಪೊಲೀಸರಿಗೆ ವಿಷಯ ತಿಳಿಸಿದ್ದಾರೆ.
ಪೊಲೀಸರು ಬಂದು ಕದ ಬಡಿದರೂ ,ಶೌಚಾಲಯ ಬಿಟ್ಟೇಳಲಾಗದ ಪ್ರಯಾಣಿಕನ ಅಸಹಾಯಕ ಸ್ಥಿತಿ, ಊಹಿಸಿ ,ಶೌಚಾಲಯದ ಮುಂಬಾಗಿಲಿಗೆ ಬಲ ಪ್ರಯೋಗಿಸಿದ್ದಾರೆ.ಈ ವೇಳೆ ಶೌಚಾಲಯಕ್ಕೆ ಅಳವಡಿಸಿದ ಡೋರ ಶೀಟ್ ಒಂದೆಡೆ ಒಡೆದು ಹೋಗುವಂತೆ ಆಗಿದ್ದು,ಒಡೆದುಹೋದ ಸಂದಿ ಮೂಲಕ ಕೈ ತೂರಿಸಿ, ಒಳಗಡೆಯ ಚಿಲಕ ಸರಿಸಿ, ಬಾಗಿಲು ತೆರೆದಿದ್ದಾರೆ.ಈ ವೇಳೆ ಅಸ್ವಸ್ಥಗೊಂಡ ತಿದ್ದ ಪ್ರಯಾಣಿಕನನ್ನು ವಿಚಾರಿಸಲಾಗಿದೆ.
ಮಂಗಳೂರು ಮೂಲದ ಈತ ಈ ಹಿಂದೆ,ಅಂಕೋಲಾದ ರಾಷ್ಟ್ರೀಯ ಹೆದ್ದಾರಿ 63 ರಂಚಿನ ಖಾಸಗಿ ಹೋಟೆಲೊಂದರಲ್ಲಿ ಕಾರ್ಮಿಕನಾಗಿ ಕೆಲಸ ಮಾಡುತ್ತಿದ್ದ ಎನ್ನಲಾಗಿದ್ದು,ಆತನ ಮಧ್ಯವ್ಯಸನ ಮತ್ತಿತರ ಕಾರಣಗಳಿಂದ,ಕೆಲಸದಿಂದ ತೆಗೆದಿದ್ದರು ಎನ್ನಲಾಗಿದೆ.ಮಧ್ಯ ಕುಡಿದ ನಶೆ,ಅನಾರೋಗ್ಯ,ಆಕಸ್ಮಿಕ ತಲೆಸುತ್ತು ಮತ್ತಿತರ ಕಾರಣಗಳಿಂದ ಪ್ರಯಾಣಿಕ ಶೌಚಾಲಯದಲ್ಲಿ ಬಿದ್ದು ಪರದಾಡುವಂತಾಯಿತು ಎನ್ನಲಾಗಿದ್ದು , ಆತ ತದನಂತರ ಸುಧಾರಿಸಿಕೊಂಡು ಬೇರೆ ಬಸ್ ಹತ್ತಿ ಪ್ರಯಾಣಿಸಿದ ಎನ್ನಲಾಗಿದೆ.
ಈ ಮೂಲಕ ಬಸ್ ನಿಲ್ದಾಣದಲ್ಲಿ ಆತ ಸತ್ತುಹೋಗಿರಬಹುದು ಎಂಬ ಸಂಶಯಗಳಿಗೆ ತೆರೆಬಿದ್ದಂತಾಗಿದೆ. ಇದೇ ಬಸ್ ನಿಲ್ದಾಣದ ಪ್ರವೇಶ ಗೇಟ್ ಬಳಿ ಜಾನುವಾರುಗಳು ಒಳ ಪ್ರವೇಶಿಸಿದಂತೆ ಕೆಟಲ್ ರ್ಯಾಕ್ ಮಾದರಿಯ ಕಬ್ಬಿಣದ ಪಟ್ಟಿಗಳನ್ನು ಅಳವಡಿಸಲಾಗಿದ್ದು,ಆರಂಭದಿಂದ ಈವರೆಗೆ ಹಲವು ಬಾರಿ ಪಟ್ಟಿಗಳು ಕಿತ್ತು ಹೋಗುತ್ತಿದ್ದು,ಪಾದಚಾರಿ ಪ್ರಯಾಣಿಕರು,ಸೈಕಲ್, ದ್ವಿಚಕ್ರ ವಾಹನ ಮತ್ತಿತರರ ಪಾಲಿಗೆ ಅಪಾಯದ ಆಹ್ವಾನ ನೀಡುವಂತಿದೆ.ಮಹಿಳೆ ಓರ್ವಳು ಸೇರಿದಂತೆ ಕೆಲವರು ಇಲ್ಲಿ ಕಾಲು ಸಿಲುಕಿಸಿ ಕೊಂಡ ಉದಾಹರಣೆಗಳಿದೆ.
ಸಾರ್ವಜನಿಕರು ಮತ್ತು ಪ್ರಯಾಣಿಕರ ಜೀವಕ್ಕೆ ಅಪಾಯವಾಗದಂತೆ,ಸಂಬಂಧಿತ ಇಲಾಖೆ ಹಾಗೂ ಗುತ್ತಿಗೆದಾರರು ಕೂಡಲೇ ಲಕ್ಷ ವಹಿಸಿ , ಕಬ್ಬಿಣ ಪಟ್ಟಿ ದೋಷಗಳನ್ನು ಸರಿಪಡಿಸುವಂತೆ,ಸಾರ್ವಜನಿಕರು ಆಗ್ರಹಿಸಿದ್ದಾರೆ.
ವಿಸ್ಮಯ ನ್ಯೂಸ್ ವಿಲಾಸ ನಾಯಕ ಅಂಕೋಲಾ
ವಿಶೇಷ ಸೂಚನೆ: ಉತ್ತರಕನ್ನಡದ ಪ್ರಮುಖ ಸುದ್ದಿ, ವಿಶೇಷ ವರದಿ, ಸಭೆ-ಸಮಾರಂಭ ಉದ್ಯೋಗದ ಮಾಹಿತಿಯನ್ನು ನಿರಂತರವಾಗಿ ಪಡೆಯಿರಿ. ವಿಸ್ಮಯ ಟಿ.ವಿಯ 8762287698 ಈ ನಂಬರ್ ಸೇವ್ ಮಾಡಿಕೊಂಡು, ನಮ್ಮ ವಾಟ್ಸಪ್ ನಂಬರ್‌ಗೆ ಹಾಯ್ ಅಂತ ಮೆಸೇಜ್ ಮಾಡಿ ವಿಸ್ಮಯ ಟಿ.ವಿ ನ್ಯೂಸ್ ಗ್ರೂಫ್ ಮೂಲಕ ಕ್ಷಣ ಕ್ಷಣದ ಸುದ್ದಿಗಳನ್ನು, ಮೊಬೈಲ್ ನಲ್ಲಿ ನೀವಿರುವ ಸ್ಥಳದಲ್ಲೇ ನಿರಂತರವಾಗಿ ಪಡೆಯಿರಿ. ಈ ಕೆಳಗಿನ ಲಿಂಕ್ ಕ್ಲಿಕ್ ಮಾಡಿ., ಹಾಯ್ ಅಂತ ಮೆಸೇಜ್ ಮಾಡಿ.