ಹೊನ್ನಾವರ: ಜಿಲ್ಲಾ ಬಾಂಬ್ ನಿಷ್ಕ್ರೀಯ ತಂಡವು ತರಬೇತಿ ಪಡೆದ ಶ್ವಾನದೊಂದಿಗೆ ಹೊನ್ನಾವರ ನ್ಯಾಯಾಲಯ ಸಂಕೀರ್ಣದಲ್ಲಿ ಶೋಧನಾ ಕಾರ್ಯ ನಡೆಸಿತು.
ಪಂಜಾಬ್ ಮತ್ತು ದೆಹಲಿ ನ್ಯಾಯಾಲಯಗಳ ಆವರಣದಲ್ಲಿ ಬಾಂಬ್ ವಿದ್ವಂಸಕ ಕೃತ್ಯ ನಡೆದ ಹಿನ್ನಲೆಯಲ್ಲಿ ಮುಂಜಾಗೃತ ಕ್ರಮವಾಗಿ ಜಿಲ್ಲಾ ಬಾಂಬ್ ಪತ್ತೆ ಮತ್ತು ನಿಷ್ಕ್ರೀಯ ತಂಡವು ಸರ್ಕಾರದ ಆದೇಶದ ಪ್ರಕಾರ ನ್ಯಾಯಾಲಯ ಸಂಕೀರ್ಣವನ್ನು ಭೇಟಿ ನೀಡಿ ಪರಿಶೀಲಿಸಿತು.
ತಂಡದಲ್ಲಿದ್ದ ತರಬೇತಿ ಪಡೆದ ಶ್ವಾನ ಬೆಳ್ಳಿಯೊಂದಿಗೆ ಅಧಿಕಾರಿಗಳು ಮತ್ತು ಸಿಬ್ಬಂದಿಗಳು ನ್ಯಾಯಾಲಯ ಕಟ್ಟಡದ ವಿವಿಧ ಕೋಣೆಗಳನ್ನು ಪರೀಕ್ಷಿಸಿದರು. ಶ್ವಾನ ಬೆಳ್ಳಿ ಅನುಮಾನವಿದ್ದ ಮೂಲೆ-ಮೂಲೆಗಳನ್ನು ಹುಡುಕಿತು. ತಂಡದ ಮುಖಂಡ ಸಂಜಯ ಭೋವಿ ನೇತೃತ್ವದ ತಂಡದ ಸಿಬ್ಬಂದಿಗಳು ಪರಿಶೀಲನಾ ಕಾರ್ಯ ನೆರವೇರಿಸಿದರು.
ತಂಡದಲ್ಲಿದ್ದ ಬೆಳ್ಳಿಯು ತರಬೇತಿದಾರನ ನಿರ್ದೇಶನದ ಪ್ರಕಾರ ತನ್ನ ಪರಿಶೀಲನಾ ಕಾರ್ಯವನ್ನು ಶಿಸ್ತಿನಿಂದ ನಡೆಸಿತು. ಕೇವಲ 7 ವರ್ಷದ ಲೆಬ್ರಡೋಬ ಜಾತಿಗೆ ಸೇರಿದ ಶ್ವಾನವನ್ನು ಪ್ರದೀಪ ನಾಯ್ಕ ತರಬೇತಿ ನೀಡಿ ಸೇವೆಗೆ ಅಣಿಗೊಳಿಸಿದ್ದಾರೆ. ಶ್ವಾನವನ್ನು ತಂಡಕ್ಕೆ ಸೇರಿಸಿಕೊಂಡು 7 ವರ್ಷಗಳಾಗಿದೆ. ಸಿಬ್ಬಂದಿಗಳಾದ ಜಗನ್ನಾಥ ನಾಯ್ಕ, ಈರಪ್ಪ, ಶೇಖೋ ಪೂಜಾರಿ, ಸಂತೋಷ ಉಪಸ್ಥಿತರಿದ್ದರು.
ವಿಸ್ಮಯ ನ್ಯೂಸ್, ಶ್ರೀಧರ್ ನಾಯ್ಕ ಹೊನ್ನಾವರ
ವಿಶೇಷ ಸೂಚನೆ: ಉತ್ತರಕನ್ನಡದ ಪ್ರಮುಖ ಸುದ್ದಿ, ವಿಶೇಷ ವರದಿ, ಸಭೆ-ಸಮಾರಂಭ ಉದ್ಯೋಗದ ಮಾಹಿತಿಯನ್ನು ನಿರಂತರವಾಗಿ ಪಡೆಯಿರಿ. ವಿಸ್ಮಯ ಟಿ.ವಿಯ 8762287698 ಈ ನಂಬರ್ ಸೇವ್ ಮಾಡಿಕೊಂಡು, ನಮ್ಮ ವಾಟ್ಸಪ್ ನಂಬರ್‌ಗೆ ಹಾಯ್ ಅಂತ ಮೆಸೇಜ್ ಮಾಡಿ ವಿಸ್ಮಯ ಟಿ.ವಿ ನ್ಯೂಸ್ ಗ್ರೂಫ್ ಮೂಲಕ ಕ್ಷಣ ಕ್ಷಣದ ಸುದ್ದಿಗಳನ್ನು, ಮೊಬೈಲ್ ನಲ್ಲಿ ನೀವಿರುವ ಸ್ಥಳದಲ್ಲೇ ನಿರಂತರವಾಗಿ ಪಡೆಯಿರಿ. ಈ ಕೆಳಗಿನ ಲಿಂಕ್ ಕ್ಲಿಕ್ ಮಾಡಿ., ಹಾಯ್ ಅಂತ ಮೆಸೇಜ್ ಮಾಡಿ.