ಹಾವುಗಳನ್ನು ಹಿಡಿದು ಕಾಡಿಗೆ ಬಿಡುವುದನ್ನು ಬಿಟ್ಟು, ಅವುಗಳ ಜೊತೆ ಸರಸವಾಡಿ, ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಬಿಡಲು ಹೋಗಿ, ಈ ಯುವಕ ಜೀವಕ್ಕೆ ಅಪಾಯ ತಂದಿಕೊoಡಿರುವುದoತೂ ನಿಜ.
ಶಿರಸಿ: ಮೂರು ವಿಷಪೂರಿತ ನಾಗರಹಾವುಗಳ ಜೊತೆ ಆಟವಾಡಲು ಹೋದ ಶಿರಸಿಯ ಕಸ್ತೂರಿಬಾ ನಗರದ ಯುವಕನೊಬ್ಬ ಈಗ ಸಾವು-ಬದುಕಿನ ನಡುವೆ ಹೋರಾಡುತ್ತಿದ್ದಾನೆ. ಶಿರಸಿ ಸುತ್ತಮುತ್ತಲ ಪ್ರದೇಶದಲ್ಲಿ ಹಾವುಗಳನ್ನು ಹಿಡಿದು ಸುರಕ್ಷಿತವಾಗಿ ಕಾಡಿಗೆ ಬಿಡುತ್ತಿದ್ದ 21 ವರ್ಷದ ಮಾಝ್ ಸೈಯದ್ ಎಂಬ ಯುವಕ, ನಾಗರಹಾವುಗಳ ಜೊತೆ ಸ್ಟಂಟ್ ನಡೆಸಲು ಯತ್ನಿಸಿ ನಾಗರ ಹಾವಿನಿಂದ ತೀವ್ರವಾದ ಕಡಿತಕ್ಕೆ ಒಳಗಾಗಿದ್ದಾನೆ.
ಮಾಝ್‌ನನ್ನು ಈಗ ಐಸಿಯುಗೆ ಸೇರಿಸಲಾಗಿದೆ. ಈ ಬಗ್ಗೆ ಪ್ರತಿಕ್ರಿಯಿಸಿರುವ ಮಾಝ್ ಸೈಯದ್ ತಾನು ಶಿರಸಿಯ ಸುತ್ತಮುತ್ತ ನಾಗರ ಹಾವುಗಳನ್ನು ಹಿಡಿದು ಕಾಡಿಗೆ ಸುರಕ್ಷಿತವಾಗಿ ಬಿಡುತ್ತಿದ್ದೇನೆ. ಶಿರಸಿಯ ಸುತ್ತಮುತ್ತ 3 ನಾಗರಹಾವುಗಳನ್ನು ಹಿಡಿದಿದ್ದು ಅವುಗಳನ್ನು ಸುರಕ್ಷಿತವಾಗಿ ಬಿಡುವ ಕಾರಣಕ್ಕಾಗಿ ತಾರಗೋಡ ಸಮೀಪದ ಕಾಡಿಗೆ ಹೋಗಿದ್ದೆ. ಅಲ್ಲಿ ಅವುಗಳ ಚಿತ್ರೀಕರಣ ನಡೆಸಿ ಬಿಡುವ ಯೋಚನೆ ನನ್ನದಾಗಿತ್ತು. ಅವನ್ನು ಸಾಲಾಗಿ ಇಟ್ಟು ಚಿತ್ರೀಕರಣ ನಡೆಸುತ್ತಿದ್ದಾಗ ನನ್ನ ಎಡ ತುದಿಯಲ್ಲಿದ್ದ ನಾಗರಹಾವು ಇದ್ದಕ್ಕಿದ್ದಂತೆ ನನ್ನ ಮೇಲೆ ದಾಳಿ ಮಾಡಿ ನನ್ನ ಮೊಣಕಾಲಿಗೆ ಬಲವಾಗಿ ಕಚ್ಚಿದೆ ಎಂದು ತಿಳಿಸಿದ್ದಾನೆ.
ತನ್ನ ಜೊತೆಗಾರರ ಸಹಕಾರದಿಂದ ನೇರವಾಗಿ ಆಸ್ಪತ್ರೆಗೆ ದಾಖಲಾಗಿದ್ದಾನೆ. ನಾಗರ ಹಾವಿನ ಕಡಿತದಿಂದ ಮೂರ್ಛೆ ಹೋಗಿದ್ದ ಮಾಝ್ ನನ್ನು ಐಸಿಯುನಲ್ಲಿ ಇಡಲಾಗಿತ್ತು. ಎಡಗಾಲಿನ ಮಾಂಸವನ್ನು ಶಸ್ತç ಚಿಕಿತ್ಸೆಯ ಮೂಲಕ ತೆಗೆಯಲಾಗಿದೆ. ಹಾವು ಕಚ್ಚಿದ ನಂತರ ಮಾಜ್ ಕೆಲ ಕಾಲದವರೆಗೆ ಪ್ರಜ್ಞಾಹೀನನಾಗಿದ್ದ, ಬಳಿಕ ಆಸ್ಪತ್ರೆಯಲ್ಲಿ ಆಂಟಿ ವೇನಮ್ ಚುಚ್ಚುಮದ್ದು ನೀಡಿದ ಬಳಿಕ ಚೇತರಿಸಿಕೊಂಡಿದ್ದಾನೆ.
ಮಾಝ್ `ಕಳೆದ 9 ವರ್ಷಗಳಿಂದ ಹಾವುಗಳ ರಕ್ಷಣೆಯನ್ನು ಮಾಡುತ್ತಿದ್ದಾನೆ. ಇದುವರೆಗೆ 3 ಸಾವಿರಕ್ಕೂ ಅಧಿಕ ನಾಗರಹಾವುಗಳ ರಕ್ಷಣೆ ಮಾಡಿದ್ದಾನೆ. ಒಟ್ನಲ್ಲಿ ಹಾವುಗಳನ್ನು ಹಿಡಿದು ಕಾಡಿಗೆ ಬಿಡುವುದನ್ನು ಬಿಟ್ಟು, ಅವುಗಳ ಜೊತೆ ಸರಸವಾಡಿ, ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಬಿಡಲು ಹೋಗಿ, ಈ ಯುವಕ ಜೀವಕ್ಕೆ ಅಪಾಯ ತಂದಿಕೊoಡಿರುವುದoತೂ ನಿಜ.
ವಿಸ್ಮಯ ನ್ಯೂಸ್, ಶಿರಸಿ
ವಿಶೇಷ ಸೂಚನೆ: ಉತ್ತರಕನ್ನಡದ ಪ್ರಮುಖ ಸುದ್ದಿ, ವಿಶೇಷ ವರದಿ, ಸಭೆ-ಸಮಾರಂಭ ಉದ್ಯೋಗದ ಮಾಹಿತಿಯನ್ನು ನಿರಂತರವಾಗಿ ಪಡೆಯಿರಿ. ವಿಸ್ಮಯ ಟಿ.ವಿಯ 8762287698 ಈ ನಂಬರ್ ಸೇವ್ ಮಾಡಿಕೊಂಡು, ನಮ್ಮ ವಾಟ್ಸಪ್ ನಂಬರ್‌ಗೆ ಹಾಯ್ ಅಂತ ಮೆಸೇಜ್ ಮಾಡಿ ವಿಸ್ಮಯ ಟಿ.ವಿ ನ್ಯೂಸ್ ಗ್ರೂಫ್ ಮೂಲಕ ಕ್ಷಣ ಕ್ಷಣದ ಸುದ್ದಿಗಳನ್ನು, ಮೊಬೈಲ್ ನಲ್ಲಿ ನೀವಿರುವ ಸ್ಥಳದಲ್ಲೇ ನಿರಂತರವಾಗಿ ಪಡೆಯಿರಿ. ಈ ಕೆಳಗಿನ ಲಿಂಕ್ ಕ್ಲಿಕ್ ಮಾಡಿ., ಹಾಯ್ ಅಂತ ಮೆಸೇಜ್ ಮಾಡಿ.