ಸೋಂಕು ಹೆಚ್ಚಳ ಹಿನ್ನಲೆಯಲ್ಲಿ ಕ್ರಮ
ವೈದ್ಯಾಧಿಕಾರಿಗೂ ಅಂಟಿದ ಕರೊನಾ?
ಭಟ್ಕಳ: ಜಿಲ್ಲೆಯಲ್ಲಿ ಇಂದು ಒಂದೇ ದಿನ ಕೊರೋನಾ ಸ್ಫೋಟವಾಗಿದ್ದು, 45 ಪ್ರಕರಣ ಪತ್ತೆಯಾಗಿದೆ. ತಾಲೂಕಾಸ್ಪತ್ರೆಯ ವೈದ್ಯಾಧಿಕಾರಿಗಳಿಗು ಕರೋನಾ ಸೋಂಕು ಪತ್ತೆಯಾಗಿದೆ.
ತಾಲೂಕಾಸ್ಪತ್ರೆಯ ವೈದ್ಯಾಧಿಕಾರಿಗೆ ಸೋಂಕು ಪತ್ತೆಯಾಗಿರುವ ಹಿನ್ನೆಯಲ್ಲಿ ತಾಲೂಕಾಸ್ಪತ್ರೆಯ ಸಿಬ್ಬಂದಿಗಳ ಗಂಟಲು ದ್ರವ ಮಾದರಿ ಕಲೆ ಹಾಕಿ ಪರೀಕ್ಷೆಗೆ ಕಳುಹಿಸಲಾಗಿದ್ದು, ಸೋಂಕಿತೆ ವೈದ್ಯಾಧಿಕಾರಿಯ ಸೋಂಕು ಪತ್ತೆಯಾಗಿರುದನ್ನು ಖಚಿತ ಪಡಿಸಿಕೊಳ್ಳಲು ಎರಡನೇ ಬಾರಿ ಆಸ್ಪತ್ರೆ ವೈದ್ಯಾಧಿಕಾರಿಗಳ ಗಂಟಲು ದ್ರವ ಮಾದರಿ ಪರೀಕ್ಷೆಗೆ ಕಳುಹಿಸುವ ಬಗ್ಗೆ ಮಾಹಿತಿ ದೊರಕಿದೆ.
ತಾಲೂಕು ಆಸ್ಪತ್ರೆಯ 49 ವರ್ಷದ ವೈದ್ಯಾಧಿಕಾರಿ, ಸೋಂಕಿತ ನರ್ಸ್ ಇದ್ದ ಖಾಸಗಿ ಆಸ್ಪತ್ರೆಯ 40 ವರ್ಷದ ಸಿಬ್ಬಂದಿ, 45 ವರ್ಷದ ಅದೇ ಆಸ್ಪತ್ರೆಯ ಔಷಧ ಮಳಿಗೆಯ ಸಿಬ್ಬಂದಿಗೂ ಸೋಂಕು ದೃಢಪಟ್ಟಿದೆ. ವೈದ್ಯಾಧಿಕಾರಿಗೆ ಸೋಂಕು ತಗುಲಿದ ಬಗ್ಗೆ ಇನ್ನೊಮ್ಮೆ ಖಚಿತಪಡಿಸಲು ಗಂಟಲು ದ್ರವವನ್ನು ಮತ್ತೊಮ್ಮೆ ಪರೀಕ್ಷೆಗೆ ಕಳುಹಿಸಲಾಗಿದೆ.
ಒಟ್ಟು 11 ಮಹಿಳೆಯರು, ಓರ್ವ ಯುವತಿ, ಓರ್ವ ಬಾಲಕಿ, 19 ಪುರುಷರಿಗೆ, 7 ಯುವಕರಿಗೆ, ಆರು ಬಾಲಕರಿಗೆ ಸೋಂಕು ದೃಢಪಟ್ಟಿದೆ.
ಭಟ್ಕಳದಲ್ಲಿ ಈವರೆಗೆ 177 ಮಂದಿಗೆ ಸೋಂಕು ದೃಢಪಟ್ಟಿದ್ದು, 55 ಮಂದಿ ಗುಣಮುಖರಾಗಿದ್ದಾರೆ. 122 ಮಂದಿಗೆ ಚಿಕಿತ್ಸೆ ಮುಂದುವರಿದಿದೆ.
ಭಟ್ಕಳದಲ್ಲಿ ಮಧ್ಯಾಹ್ನ 2 ಗಂಟೆಯಿಂದ ಲಾಕ್ ಡೌನ್!!
ತಾಲೂಕಿನಲ್ಲಿ ಕೋವಿಡ್- 19 ಸಾಂಕ್ರಾಮಿಕ ರೋಗದ ಸೋಂಕಿತರ ಸಂಖ್ಯೆ ವೃದ್ಧಿಸುತ್ತಿರುವುದರಿಂದ ಭಟ್ಕಳ ಪುರಸಭೆ ವ್ಯಾಪ್ತಿಯಲ್ಲಿ ರೋಗ ಹರಡುವುದನ್ನು ತಡೆಗಟ್ಟಲು ಮುಂಜಾಗ್ರತಾ ಕ್ರಮವಾಗಿ ಹೆಚ್ಚಿನ ನಿರ್ಬಂಧಗಳನ್ನು ವಿಧಿಸಿ ಜಿಲ್ಲಾಧಿಕಾರಿ ಡಾ.ಕೆ.ಹರೀಶಕುಮಾರ್ ಆದೇಶಿಸಿದ್ದಾರೆ.
ವಿಸ್ಮಯ ನ್ಯೂಸ್ ಉದಯ್ ಎಸ್ ನಾಯ್ಕ ಭಟ್ಕಳ
[sliders_pack id=”1487″]