Uttara Kannada
Trending

ಕುಮಟಾದಲ್ಲಿ 20 ಕೇಸ್: ಹೆಚ್ಚಿದ ಆತಂಕ

ಕುಮಟಾ: ತಾಲೂಕಿನಲ್ಲಿ ಇಂದು 20 ಕರೊನಾ ಪ್ರಕರಣ‌ ದಾಖಲಾಗಿದೆ ಎಂಬ ಸುದ್ದಿ‌ ಕೇಳಿ, ಜನರು ಭಯಭೀತರಾಗಿದ್ದಾರೆ. ಆದರೆ ಯಾರೂ ಆತಂಕ‌ ಪಡುವ ಅಗತ್ಯವಿಲ್ಲವಾಗಿದ್ದು, ಸೋಂಕಿತರ ಪ್ರಾಥಮಿಕ ಸಂಪರ್ಕ ಮತ್ತು ಕ್ವಾರಂಟೈನ್ ನಲ್ಲಿ ಇರುವವರಲ್ಲೇ ಪ್ರಕರಣ ದೃಢಪಟ್ಟಿದೆ. ಇತ್ತಿಚೆಗೆ ಸೋಂಕು ಕಾಣಿಸಿಕೊಂಡ ಮಾದನಗೇರಿ ವ್ಯಕ್ತಿಯ ಪ್ರಾಥಮಿಕ ಸಂಪರ್ಕಕ್ಕೆ ಬಂದ 15 ಜನರಿಗೆ ಸೋಂಕು ದೃಢಪಟ್ಟಿದೆ. ಉಳಿದಂತೆ ಮಿರ್ಜಾನ್ ನಲ್ಲಿ‌ ಎರಡು ಕೇಸ್ ದಾಖಲಾಗಿದೆ ಎನ್ನಲಾಗಿದೆ. ಮೂರೂರಿನಲ್ಲೂ ಪ್ರಕರಣ ದಾಖಲಾದ ಮಾಹಿತಿ ಬಂದಿದೆ. ಈ‌ ಕುರಿತ ಹೆಚ್ಚಿನ ಮಾಹಿತಿಯನ್ನು 8.30ಕ್ಕೆ ಪ್ರಸಾರವಾಗುವ ವಿಸ್ಮಯ ನ್ಯೂಸ್ ನಲ್ಲಿ ವೀಕ್ಷಿಸಿ.

[sliders_pack id=”1487″]

Back to top button