ಮುಸ್ಲಿಮ್ ಯುವಕರೊಂದಿಗೆ ಮೋಜು ಮಸ್ತಿಗೆ ಕಾರಿನಲ್ಲಿ ತೆರಳಿದ ವೇಳೆ ಸಿಕ್ಕಿಬಿದ್ದ ಹಿಂದು ಮತ್ತು ಕ್ರಿಶ್ಚಿಯನ್ ಯುವತಿಯರು: ಬುದ್ಧಿವಾದ ಹೇಳಿ ಪಾಲಕರಿಗೆ ಮಾಹಿತಿ ನೀಡಿ ಮನೆಗೆ ಕಳುಹಿಸಿದ ಪೋಲಿಸರು

ಭಟ್ಕಳ: ಮೋಜು ಮಸ್ತಿಗೆಂದು ಮುಸ್ಲಿಮ್ ಯುವಕರೊಂದಿಗೆ ಹಿಂದು ಹಾಗೂ ಕ್ರಿಶ್ಚಿಯನ್ ವಿದ್ಯಾರ್ಥಿನಿಯರು ಬಂದಿದ್ದ ವೇಳೆ ಸ್ಥಳೀಯರು ತಡೆದು ಪೊಲೀಸರಿಗೆ ಒಪ್ಪಿಸಿದ ಘಟನೆ ಇಲ್ಲಿನ ಸರ್ಪನಕಟ್ಟೆಯ ಬಳಿ ನಡೆದಿದೆ. ಮುರುಡೇಶ್ವರ ಕಾಲೇಜೊಂದರ ದ್ವಿತೀಯ ವರ್ಷ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳು ಸರ್ಪನಕಟ್ಟೆಯ ಬಳಿ ಕಾರಿನಲ್ಲಿ ಬಂದಿದ್ದ ವೇಳೆ ಸ್ಥಳಿಯರ ಕೈಗೆ ಸಿಕ್ಕಿ ಬಿದ್ದಿದ್ದಾರೆ. ಈ ವೇಳೆ ವಿದ್ಯಾರ್ಥಿಗಳನ್ನು ಸ್ಥಳೀಯರು ವಿಚಾರಿಸಿದ್ದಾರೆ.

ವಿದ್ಯಾರ್ಥಿಗಳು ಸರ್ಪನಕಟ್ಟೆ ಬೇಕರಿಯ ಬಳಿ ಕಾರು ನಿಲ್ಲಿಸಿದಾಗ ಸ್ಥಳೀಯರು ಗಮನಿಸಿದ್ದು, ಈ ವಿದ್ಯಾರ್ಥಿಗಳ ವರ್ತನೆಯಿಂದ ಅನುಮಾನಗೊಂಡ ಸ್ಥಳೀಯರು ಅವರ ಬಗ್ಗೆ ಮಾಹಿತಿ ಕಲೆ ಹಾಕಿದ್ದರು. ಈ ವೇಳೆ ಓರ್ವ ವಿದ್ಯಾರ್ಥಿನಿ ನೀಡಿದ ಉಡಾಫೆಯ ಉತ್ತರದಿಂದ ಆಕ್ರೋಶಗೊಂಡ ಸ್ಥಳೀಯರು ಎಲ್ಲಾ ವಿದ್ಯಾರ್ಥಿಗಳನ್ನು ತರಾಟೆಗೆ ತೆಗೆದುಕೊಂಡರು.

ಕಾಲೇಜಿಗೆ ತೆರಳುವ ಸಮಯದಲ್ಲಿ ಮೋಜು ಮಸ್ತಿಗೆ ತೆರಳುತ್ತಿರುವುದಕ್ಕೆ ಸ್ಥಳೀಯರು ಬುದ್ಧಿವಾದ ಹೇಳಿದರು. ಹಾಗೂ ಸ್ಥಳಕ್ಕೆ ನಿಮ್ಮ ಪಾಲಕರನ್ನು ಕರೆಯಿಸಿ ಎಂದು ತಿಳಿಸಿದ್ದಾರೆ ಎನ್ನಲಾಗಿದೆ. ಅತ್ತ ಈ ಘಟನೆಯಿಂದ ತಕ್ಷಣವೇ ನೂರಾರು ಮಂದಿ ಜಮಾವಣೆಗೊಂಡಿದ್ದರು. ಸ್ಥಳದಲ್ಲಿ ಜನರು ಜಮಾವಣೆಗೊಂಡ ಹಿನ್ನೆಲೆ ಪರಿಸ್ಥಿತಿ ವಿಕೋಪಕ್ಕೆ ತೆರಳುವ ಮೊದಲು ಪೊಲೀಸರು ಸ್ಥಳಕ್ಕೆ ತೆರಳಿ ವಿಚಾರಣೆಗೆ ಮುಂದಾಗಿದ್ದು, ಸ್ಥಳದಲ್ಲಿಯೇ ವಿದ್ಯಾರ್ಥಿನಿಯರ ಪಾಲಕರಿಗೆ ವಿಷಯ ಮುಟ್ಟಿಸಿ ಮನೆಗೆ ತೆರಳಿಸಿದ್ದಾರೆ. ಬಳಿಕ ಇಬ್ಬರು ಯುವಕರನ್ನು ಅಲ್ಲಿಂದ ಠಾಣೆಗೆ ಕರೆದು ತಂದು ಬುದ್ಧಿವಾದ ಹೇಳಿ ಕಳುಹಿಸಿದ್ದಾರೆ ಎಂದು ಪೋಲಿಸ್ ಮೂಲದಿಂದ ತಿಳಿದು ಬಂದಿದೆ.

ವಿಸ್ಮಯ ನ್ಯೂಸ್, ಉದಯ್ ಎಸ್ ನಾಯ್ಕ, ಭಟ್ಕಳ

Exit mobile version