Follow Us On

WhatsApp Group
Focus News
Trending

ಹೈಗುಂದ ಅರಣ್ಯಪ್ರದೇಶದಲ್ಲಿ ಬೀಜ ಬಿತ್ತೋತ್ಸವ : 7 ಜಾತಿಯ 6 ಕೆಜಿ ಬೀಜ ಬಿತ್ತನೆ

ಹೊನ್ನಾವರ: ವಿಶ್ವ ಪರಿಸರ ದಿನಾಚರಣೆಯ ಪ್ರಯುಕ್ತ ವಲಯ ವ್ಯಾಪ್ತಿಯ ಹೈಗುಂದ ಅರಣ್ಯಪ್ರದೇಶದಲ್ಲಿ ಬೀಜ ಬಿತ್ತೋತ್ಸವ ಕಾರ್ಯಕ್ರಮ ಯಶಸ್ವಿಯಾಗಿ ನಡೆಯಿತು. ಇರುವುದೊಂದೆ ಭೂಮಿ; ಬೀಜ ಬಿತ್ತೋಣ, ಅರಣ್ಯ ಉಳಿಸೋಣ ಎಂಬ ಧ್ಯೇಯ ವ್ಯಾಖ್ಯಾನದೊಂದಿಗೆ 9 ವಿವಿಧ ಜಾತಿಯ ಬೀಜಗಳ ಸಹಾಯದಿಂದ ಕರ್ನಾಟಕ ಭೂಪಟವನ್ನು ಚಿತ್ರಿಸಿದರು.

ವೃತ್ತ ನಿರೀಕ್ಷಕ ಶ್ರೀಧರ್ ಎಸ್.ಆರ್., ಪಿಎಸ್‌ಐ ಆನಂದ್‌ಮೂರ್ತಿ, ಪೊಲೀಸ್ ಸಿಬ್ಬಂದಿ, ಹೊನ್ನಾವರ ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿ ಮುಂತಾದವರು ಇದ್ದರು. ಮೂವತ್ತಕ್ಕೂ ಹೆಚ್ಚು ಗಿಡಗಳನ್ನು ನೆಟ್ಟು, ಒಟ್ಟು 7 ಜಾತಿಯ 6 ಕೆಜಿ ಬೀಜಗಳನ್ನು ಬಿತ್ತಲಾಯಿತು.

ವಿಸ್ಮಯ ನ್ಯೂಸ್, ಹೊನ್ನಾವರ

Back to top button