ಬಾಳಿಗಾ ವಾಣಿಜ್ಯ ಕಾಲೇಜಿನ ಮೇಘಾ ಹೆಗಡೆ ಪ್ರಥಮ

ಕುಮಟಾದ ಬಾಳಿಗಾ ವಾಣಿಜ್ಯ ಕಾಲೇಜಿನ ಪಿಯುಸಿ ದ್ವಿತೀಯ ವರ್ಷದ ವಿದ್ಯಾರ್ಥಿಗಳ ಫಲಿತಾಂಶ ಬಂದಿದ್ದು ಪರೀಕ್ಷೆ ಎದುರಿಸಿದ ಒಟ್ಟೂ 110 ವಿದ್ಯಾರ್ಥಿಗಳಲ್ಲಿ 26 ವಿದ್ಯಾರ್ಥಿಗಳು ಡಿಸ್ಟಿಂಕ್ಷನ್‌ನಲ್ಲಿ ಉತ್ತೀರ್ಣರಾಗಿದ್ದಾರೆ. ಪ್ರಥಮ ಸ್ಥಾನ ಮೇಘಾ ದತ್ತಾತ್ರಯ ಹೆಗಡೆ ಶೇ. 96.83 (581/600), ದ್ವಿತೀಯ ಸ್ಥಾನ ರವಿ ಗೋವಿಂದರಾಯ ಪ್ರಭು ಶೇ. 96.66 (580/600) ಹಾಗೂ ತೃತೀಯ ಸ್ಥಾನ ಶ್ರೀಲತಾ ವಿಶ್ವನಾಥ ಕಿಣಿ ಶೇ. 95.16 (571/600) ಹಂಚಿಕೊoಡಿರುತ್ತಾರೆ.

ಸುಪ್ರಭಾ ಶಾಸ್ತ್ರಿ ಲೆಕ್ಕಶಾಸ್ತ್ರ ವಿಭಾಗ ವಿಷಯದಲ್ಲಿ, ಅಂಕಿತಾ ಶಿರೋಡಕರ್ ಸಂಸ್ಕೃತ ವಿಷಯದಲ್ಲಿ ಹಾಗೂ ರವಿ ಪ್ರಭು ಕನ್ನಡ ವಿಷಯದಲ್ಲಿ 100 ಅಂಕಗಳನ್ನು ಪಡೆದಿರುತ್ತಾರೆ. ಮಹಾವಿದ್ಯಾಲಯಕ್ಕೆ ಕೀರ್ತಿಯನ್ನು ತಂದ ಈ ಮೇಲಿನ ವಿದ್ಯಾರ್ಥಿಗಳನ್ನು ಆಡಳಿತ ಮಡಳಿಯವರು, ಕಾಲೇಜಿನ ಪ್ರಾಚಾರ್ಯರು ಹಾಗೂ ಬೋಧಕ-ಬೋಧಕೇತರ ಸಿಬ್ಬಂದಿಗಳು ಅಭಿನಂದಿಸಿದ್ದಾರೆ.

Exit mobile version