ಡ್ರೈ ಪ್ರೂಟ್ಸ್ ಅಂಗಡಿಯ ಶೆಟರ್ಸ್ ಮುರಿದು ಕಳ್ಳತನ‌ ಮಾಡಿದ ಕಿಡಿಗೇಡಿಗಳು

ಕುಮಟಾ: ತಾಲೂಕಿನ ಮಣಕಿ ಸಮೀಪದಲ್ಲಿರುವ ಡ್ರೈ ಫ್ರುಟ್ಸ್ ಅಂಗಡಿಯಲ್ಲಿ ಕಳ್ಳತನವಾಗಿದ್ದು, ಈ ಕುರಿತಾಗಿ ಕುಮಟಾ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಬೆಳಿಗ್ಗೆ ಅವಧಿಯಲ್ಲಿ ಕಳ್ಳತನವಾಗಿದೆ.

ಅಂಗಡಿಯ ಶೆಟರ್ಸ್ ಮುರಿದ ಕಿಡಿಗೆಡಿಗಳು, ಅಂಗಡಿಯಲ್ಲಿದ್ದ ಸುಮಾರು 1 ಲಕ್ಷಕ್ಕೂ ಅಧಿಕ ಮೌಲ್ಯದ ಡ್ರೈ ಪ್ರೂಟ್ಸ್ ಗ ಳನ್ನು ದೋಚಿ ಪರಾರಿಯಾಗಿದ್ದಾರೆ. ಘಟನೆಯ ಕುರಿತಂತೆ ಅಂಗಡಿಯ ಮಾಲೀಕರಾದ ಭಾಸ್ಕರ ಈಶ್ವರ ಪಟಗಾರ ಅವರು ಕುಮಟಾ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದು, ಪ್ರಕರಣ ದಾಖಲಿಸಿಕೊಂಡ ಪೊಲೀಸರು ತನಿಖೆ ಮುಂದುವರೆಸಿದ್ದಾರೆ.

ವಿಸ್ಮಯ ನ್ಯೂಸ್‌‌ ಯೋಗೇಶ್ ಮಡಿವಾಳ ಕುಮಟಾ

Exit mobile version