
ಗೋಕರ್ಣ: ಇಲ್ಲಿನ ಕಡಲತೀರದ ರುದ್ರಪಾದ ಕಲಿಯಪ್ಪನ ಕಟ್ಟೆ ಹತ್ತಿರ ಇರುವ ಹೊಟೇಲ್ ವೊಂದು ಅಗ್ನಿ ಅವಘಡ ಸಂಭವಿಸಿದ್ದು, ಹೊಟೇಲ್ ಬೆಂಕಿಗೆ ಆಹುತಿ ಆಗಿರುವ ಘಟನೆ ನಡೆದಿದೆ. ಬೆಳಗಿನ ಜಾವದಲ್ಲಿ ಹೊಟೇಲ್ ನಲ್ಲಿ ಅಗ್ನಿ ಅವಘಡ ಸಂಭವಿಸಿದ್ದು, ವಸತಿ ಮತ್ತು ಹೊಟೇಲ್ ಕಟ್ಟಡಗಳು ಸಂಪೂರ್ಣವಾಗಿ ಸುಟ್ಟು ಕರಕಲಾಗಿದೆ..
- ಯಶಸ್ವಿ ಉದ್ಯಮಿ, ಕಾಂಗ್ರೆಸ್ ಧುರೀಣ ಯಶೋಧರ ನಾಯ್ಕ ನಿಧನ
- ಭಾರೀ ಮಳೆ ಹಿನ್ನಲೆ: ಶಾಲೆಗಳಿಗೆ ರಜೆ ಘೋಷಣೆ
- ರೆಡ್ ಅಲರ್ಟ್ ಹಿನ್ನಲೆ; ನಾಳೆ ಶಾಲಾ ಕಾಲೇಜುಗಳಿಗೆ ರಜೆ ಘೋಷಣೆ
ಅದೃಷ್ಟ ವಶಾತ್ ದುರ್ಘಟನೆಯಲ್ಲಿ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ. ವಿದ್ಯುತ್ ಶಾರ್ಟ್ ಸರ್ಕ್ಯೂಟ್ ನಿಂದ ಬೆಂಕಿ ಹತ್ತಿರಬಹುದು ಎಂಬ ಶಂಕೆ ವ್ಯಕ್ತವಾಗಿದೆ. ಗೋಕರ್ಣ ಪೊಲೀಸರು ಈ ಘಟನೆಯನ್ನು ಪರಿಶೀಲಿಸಿದ್ದು, ಮುಂದಿನ ಕ್ರಮ ಕೈಗೊಂಡಿದ್ದಾರೆ.
ಪ್ರಿಡ್ಜ್ ಸೇರಿ ಹಲವು ಉಪಕರಣಗಳು ಬೆಂಕಿಗೆ ಆಹುತಿಯಾಗಿದೆ.. ಯಾರು ಇಲ್ಲದ ಸಮಯದಲ್ಲಿ ಈ ದುರ್ಘಟನೆ ನಡೆದಿದ್ದು ಸಂಭಾವ್ಯ ಅನಾಹುತವೊಂದು ತಪ್ಪಿದಂತಾಗಿದೆ.
ವಿಸ್ಮಯ ನ್ಯೂಸ್ ಕಾರವಾರ