ಮಳೆಯ ಅಬ್ಬರ: ಕದ್ರಾ ಜಲಾಶಯದಿಂದ ನೀರು ಹೊರಬಿಡಲು ನಿರ್ಧಾರ: ನದಿ ತೀರದಲ್ಲಿ ವಾಸವಿರುವ ಸಾರ್ವಜನಿಕರು ಎಚ್ಚರಿಕೆಯಿಂದಿರಲು ಸೂಚನೆ

ಕಾರವಾರ: ಉತ್ತರಕನ್ನಡದಲ್ಲಿ ಮಳೆಯ ಅಬ್ಬರ ಮುಂದುವರಿದಿದೆ. ಕದ್ರಾ ಜಲಾಶಯಕ್ಕೆ ಅಪಾರ ಪ್ರಮಾಣದ ನೀರು ಹರಿದುಬರುತ್ತಿದ್ದು, ಜಲಾಶಯದ ಮಟ್ಟವನ್ನು ಕಾಯ್ದುಕೊಳ್ಳುವ ಉದ್ದೇಶದಿಂದ ಜಲಾಶಯದಿಂದ ನೀರು ಹೊರಬಿಡಲು ನಿರ್ಧರಿಸಲಾಗಿದೆ.

ಇಂದು ರಂದು ಮಧ್ಯಾಹ್ನ 2:00 ರಿಂದ 3:00 ಗಂಟೆಯ ಸಮಯದಲ್ಲಿ 35000 ಕ್ಯೂಸೆಕ್ಸ ನೀರನ್ನು ಹೊರ ಬಿಡಲು ಉದ್ದೇಶಿಸಲಾಗಿದ್ದು, ಕಾರಣ ಕಾರವಾರ ತಾಲೂಕಿನ ಮಲ್ಲಾಪುರ, ಕದ್ರಾ, ಗೋಟೆಗಾಳಿ, ಕೆರವಡಿ, ಘಾಡಸಾಯಿ, ವೈಲವಾಡ, ಕಿನ್ನರ ಹಾಗೂ ಹಣಕೋಣ ಗ್ರಾಮ ಪಂಚಾಯತಗಳ ನದಿ ತೀರದಲ್ಲಿ ವಾಸವಿರುವ ಸಾರ್ವಜನಿಕರು ಎಚ್ಚರಿಕೆಯಿಂದಿರಲು ಸೂಚಿಸಿದೆ.

ವಿಸ್ಮಯ ನ್ಯೂಸ್, ಕಾರವಾರ

Exit mobile version