ಕಾರವಾರ: ಪ್ರೇಮಿಯಿಂದ ಬೇರ್ಪಟ್ಟು ತಿಂಗಳ ಹಿಂದೆ ಮದುವೆಯಾಗಿದ್ದ ಮಹಿಳೆಯೋರ್ವಳು ಅದೇ ಪ್ರೇಮಿ ಜೊತೆ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಹಳಿಯಾಳದಲ್ಲಿ ನಡೆದಿದೆ. ಹಳಿಯಾಳ ಮೂಲದ ಜ್ಯೋತಿ ಸುರೇಶ ಅಂತ್ರೋಳಕರ (19), ರಿಕೇಶ ಸುರೇಶ ಮಿರಾಶಿ (೨೦) ಮೃತ ಪ್ರೇಮಿಗಳು. ಹಳಿಯಾಳದ ಹವಗಿಯಲ್ಲಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ವಿದ್ಯಾಭ್ಯಾಸ ಮಾಡುತ್ತಿದ್ದ ಇಬ್ಬರು ಪರಸ್ಪರ ಪ್ರೀತಿಸುತ್ತಿದ್ದರು ಎನ್ನಲಾಗಿದೆ.
ಆದರೆ ಪ್ರೀತಿಗೆ ಮನೆಯವರ ವಿರೋಧ ವ್ಯಕ್ತಪಡಿಸಿ ಯುವತಿಯನ್ನು ತಿಂಗಳ ಹಿಂದೆ ಬೆರೊಂದು ಯುವಕನೊಂದಿಗೆ ಮದುವೆ ಮಾಡಿದ್ದರು. ಆದರೆ ಜುಲೈ 15 ರಂದು ಮುಂಡಗೋಡು ರಸ್ತೆಯಲ್ಲಿ ಇಬ್ಬರು ವಿಷ ಸೇವಿಸಿದ್ದರು ಬಳಿಕ ಇಬ್ಬರನ್ನು ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗುತ್ತಾದರೂ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾರೆ. ಈ ಬಗ್ಗೆ ಹಳಿಯಾಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ವಿಸ್ಮಯ ನ್ಯೂಸ್ ಕಾರವಾರ