Big News
Trending

ಭಟ್ಕಳ ಮತ್ತು ಹಳಿಯಾಳದಲ್ಲಿ ಗಾಂಜಾ ಮಾರುತ್ತಿದ್ದವರ ಬಂಧನ

  • ಭಟ್ಕಳದಲ್ಲಿ ಪೊಲೀಸರ ಕಾರ್ಯಾಚರಣೆ
  • ಮಂಕಿ, ಮುರ್ಡೇಶ್ವರ, ಕರಿಕಲ್ ಆರೋಪಿಗಳ ಬಂಧನ
  • ಹಳಿಯಾಳದಲ್ಲಿ ಸದ್ದು ಮಾಡಿದ ಗಾಂಜಾ ಘಾಟು
  • ಮನೆಯಲ್ಲಿ ಮಾರುತ್ತಿದ್ದರು ಗಾಂಜಾ

ಭಟ್ಕಳ: ಮಾದಕ ವಸ್ತು ಗಾಂಜಾವನ್ನು ಸಾಗರ ರಸ್ತೆಯ ಕಿತ್ರೆ ಕ್ರಾಸ್ ಹತ್ತಿರ ಮಾರಾಟ ಮಾಡುತ್ತಿದ್ದ ಭಟ್ಕಳದ ಮೂರು ವ್ಯಕ್ತಿಗಳ ಬಂಧಿಸಿ, ಸುಮಾರು 750 ಗ್ರಾಂ ತೂಕದ ಗಾಂಜಾ ಹಾಗೂ ಸ್ಕೂಟಿ-1, ಮೋಬೈಲ್-3, ನಗದು ಹಣ 2700/- ರೂಪಾಯಿ ವಶಪಡಿಸಿಕೊಳ್ಳಲಾಗಿದೆ.

ಖಚಿತ ಮಾಹಿತಿ ಮೇರೆಗೆ ಭಟ್ಕಳದ ಸಾಗರ ರಸ್ತೆಯ ಕಿತ್ರೆ ಕ್ರಾಸ್ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ಆರೋಪಿಗಳು ಗಾಂಜಾ ಮಾರಾಟ ಮಾಡುತ್ತಿದ್ದರು ಎನ್ನಲಾಗಿದೆ. ಹೊನ್ನಾವರ ಮಂಕಿಯ, ಗಣಪತಿ ಮಂಜಪ್ಪ ನಾಯ್ಕ , ಮುರ್ಡೇಶ್ವರದ ಜನಾರ್ಧನ ಅಣ್ಣಪ್ಪ ಹರಿಕಂತ್ರ ಹಾಗು ಭಟ್ಕಳ ಕರಿಕಲ್ ಆನಂದ ಮಾದೇವ ಮೂಗೇರ ಎಂದು ತಿಳಿದುಬಂದಿದೆ.

ಈ ಕಾರ್ಯಾಚರಣೆಯಲ್ಲಿ ಶಿವಪ್ರಕಾಶ ದೇವರಾಜ ಹಾಗೂ ಎಸ್ ಬದ್ರೀನಾಥ ಹೆಚ್ಚುವರಿ ಪೊಲೀಸ್ ಅಧೀಕ್ಷಕರು ಉತ್ತರ ಕನ್ನಡ ಜಿಲ್ಲೆ ಕಾರವಾರ ರವರ ಮಾರ್ಗದರ್ಶನದಲ್ಲಿ ನಿಖಿಲ್ ಬಿ. ಸಹಾಯಕ ಪೊಲೀಸ್ ಅಧೀಕ್ಷಕರು ಭಟ್ಕಳ ಉಪವಿಭಾಗ ರವರ ನೇತೃತ್ವದಲ್ಲಿ ಶ್ರೀ ದಿವಾಕರ್ ಪಿ.ಎಮ್ ಸಿ.ಪಿ.ಐ ಭಟ್ಕಳ ಮುಂದಾಳತ್ವದಲ್ಲಿ ಭಟ್ಕಳ ಗ್ರಾಮೀಣ ಠಾಣೆ ಪಿಎಸ್ಐ ಓಂಕಾರಪ್ಪ ಮುಂತಾದವರು ಭಾಗವಹಿಸಿದ್ದರು.


ಹಳಿಯಾಳದಲ್ಲಿ ಗಾಂಜಾ ಘಾಟು:


ಹಳಿಯಾಳ: ಹಳಿಯಾಳ ತಾಲೂಕಿನ ಕೆಕೆ ಹಳ್ಳಿ ಗ್ರಾಮದ ಮನೆಯೊಂದರಲ್ಲಿ ಗಾಂಜಾ ಮಾರಾಟ ಮಾಡುತ್ತಿದ್ದ ಬಗ್ಗೆ ಖಚಿತ ಮಾಹಿತಿ ಆಧರಿಸಿ, ದಾಳಿ ನಡೆಸಿದ ಪೊಲೀಸರು ಹಸಿ ಗಾಂಜಾ ಗಿಡವನ್ನು ವಶಕ್ಕೆ ಪಡೆದು ಆರೋಪಿಯನ್ನು ಬಂಧಿಸಿದ್ದಾರೆ.

ಬಂಧಿತನಿoದ ಸುಮಾರು 2400 / – ರೂಪಾಯಿ ಮೌಲ್ಯದ 8 ಹಸಿ ಗಾಂಜಾ ಗಿಡಗಳು ( ಒಟ್ಟು ತೂಕ 1 ಕೆ.ಜಿ , 380 ಗ್ರಾಂ ) ಮತ್ತು 200 / – ರೂಪಾಯಿ ನಗದು ಹಣವನ್ನು ಜಪ್ತಿ ಮಾಡಲಾಗಿದೆ..


ವಿಸ್ಮಯ ನ್ಯೂಸ್, ಉದಯ್ ಎಸ್ ನಾಯ್ಕ, ಭಟ್ಕಳ

Related Articles

Back to top button