ಜಿಲ್ಲೆಯಲ್ಲಿ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆ ಸಂಬಂಧ ಸ್ಥಳ ಪರಿಶೀಲನೆ | ಕುಮಟಾ ತಾಲೂಕಿನ ನಾಲ್ಕು ಕಡೆಗಳಲ್ಲಿ ಜಿಲ್ಲಾಧಿಕಾರಿಗಳ ಸುತ್ತಾಟ

ಅಧಿಕಾರಿಗಳೊಂದಿಗೆ ತೆರಳಿ ಸಾಧಕ-ಬಾಧಕ ಚರ್ಚೆ

ಕುಮಟಾ: ಉತ್ತರ ಕನ್ನಡ ಜಿಲ್ಲೆಯಲ್ಲಿ ಸುಸಜ್ಜಿತ ಆಸ್ಪತ್ರೆ ನಿರ್ಮಾಣಕ್ಕೆ ಸಂಭಂಸಿದಿದಂತೆ ಜಿಲ್ಲೆಯ ಹೃದಯ ಭಾಗವಾದ ಕುಮಟಾ ತಾಲೂಕಿನಲ್ಲಿ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆ ನಿರ್ಮಾಣವಾಗುವ ಸಾಧ್ಯತೆಗಳಿದ್ದು, ಈ ಕುರಿತಾಗಿ ಉತ್ತರ ಕನ್ನಡ ಜಿಲ್ಲಾಧಿಕಾರಿಗಳಾದ ಮುಲ್ಲೈ ಮುಗಿಲನ್ ಅವರು ಕುಮಟಾಕ್ಕೆ ಆಗಮಿಸಿ 4 ಪ್ರದೇಶಗಳಿಗೆ ಅಧಿಕಾರಿಗಳೊಡನೆ ತೆರಳಿ ಪರಶೀಲನೆ ನಡೆಸಿದ್ದಾರೆ.

ಈ ಸುದ್ದಿಯನ್ನು ಓದಿ: ಮಗು ಜೊತೆ ತಾಯಿ ಸಾವಿಗೆ ಶರಣು

ಕುಮಟಾ ತಾಲೂಕಿನ ದಿವಗಿ ಗ್ರಾಮ ಪಂಚಾಯತ ವ್ಯಾಪ್ತಿಯ ಶಿಳ್ಳೆಯ ಅರಣ್ಯ ಇಲಾಖೆಯ ಪ್ರದೇಶ, ಕುಮಟಾ ಹೊಸ ಬಸ್ ನಿಲ್ದಾಣದಿಂದ ರೈಲ್ವೆ ನಿಲ್ದಾಣಕ್ಕೆ ಸಾಗುವ ರಸ್ತೆಯ ಸಮೀಪದ ಪ್ರದೇಶ, ಮಿರ್ಜಾನ ಗ್ರಾಮದ ಎತ್ತಿನ ಬೈಲ್ ಹಾಗೂ ಕಲಭಾಗದ ಕೊಂಕಣ ಎಜ್ಯುಕೇಶನ್ ಸಂಸ್ಥೆಯ ಸಮೀಪದ ಜಾಗವನ್ನು ಪರಿಶೀಲನೆ ನಡೆಸಿದ್ದಾರೆ.

ಈ ಎಲ್ಲಾ ಪ್ರದೇಶಗಳ ಪರಿಶೀಲನೆಯ ಬಳಿಕ ಆಸ್ಪತ್ರೆ ನಿರ್ಮಾಣಕ್ಕೆ ಎಲ್ಲಾ ರೀತಿಯಲ್ಲಿಯೂ ದಿವಗಿ ಗ್ರಾಮ ಪಂಚಾಯತ ವ್ಯಾಪ್ತಿಯ ಶಿಳ್ಳೆಯ ಅರಣ್ಯ ಇಲಾಖೆಯ ಪ್ರದೇಶ ಸೂಕ್ತ ಎಂಬಂತಿದೆ ಎಂದು ಜಿಲ್ಲಾಧಿಕಾರಿಗಳು ಅಭಿಪ್ರಾಯ ಪಟ್ಟಿದ್ದಾರೆ ಎಂದು ತಿಳಿದುಬಂದಿದೆ.

ವಿಸ್ಮಯ ನ್ಯೂಸ್ ಯೋಗೇಶ್ ಮಡಿವಾಳ ಕುಮಟಾ

Exit mobile version