Important
Trending

ಡಾಂಬರ ಪ್ಲಾಂಟಿನಲ್ಲಿ ಹಲ್ಲೆ : ಜೀವ ಬೆದರಿಕೆ ದೂರು ದಾಖಲು: ಕೆಲವೆಡೆ ಜೋರಾಗಿದೆಯಂತೆ  ಅಕ್ರಮ ದಂಧೆಯ ಘಾಟು ವಾಸನೆ ? 

ಅಂಕೋಲಾ: ತಾಲೂಕಿನ ಹಾರವಾಡ ಬಳಿ ರಾ.ಹೆ 66 ರ ಅಂಚಿಗೆ ಇರುವ ಎ.ಜೆ.ಯು.ಎಸ್ ಡಾಂಬರು ತಯಾರಿಕಾ ಘಟಕದಲ್ಲಿ ಡಾಂಬರು ಲೋಡಿಂಗ್ ಗೆ ಸಂಬಂಧಿಸಿದಂತೆ ನಡೆದ ಗಲಾಟೆಯಲ್ಲಿ ಮೂವರ ಮೇಲೆ ಹಲ್ಲೆ ಮಾಡಿ ಜೀವ ಬೆದರಿಕೆ ಹಾಕಿರುವ ಘಟನೆ ನಡೆದಿದೆ.

ಚಲಿಸುತ್ತಿರುವ ಬಸ್ಸಿನಿಂದ ಕೆಳಗೆ ಬಿದ್ದ ಐಟಿಐ ವಿದ್ಯಾರ್ಥಿ: ಗಂಭೀರ ಗಾಯಗೊಂಡು ಜಿಲ್ಲಾ ಸ್ಪತ್ರೆಗೆ ದಾಖಲು

ಮೈಸೂರು ರಾಜೀವ ನಗರ ನಿವಾಸಿ ಸಲ್ಮಾನ್ ಖಾನ್ ಆಯೂಬ್ ಖಾನ್ ಎನ್ನುವವರು ಈ ಕುರಿತು  ದೂರು ದಾಖಲಿಸಿದ್ದು  ಅವರು ತಮ್ಮ ಕಂಪನಿಯ ಇನ್ನಿಬ್ಬರು ಲಾರಿ ಚಾಲಕರುಗಳಾದ ಮೈಸೂರು ಟಿ. ನರಸೀಪುರ ನಿವಾಸಿ ನೂರ್ ಅಹ್ಮದ್ ಶಬ್ಬೀರ್ ಅಹ್ಮದ್ (38) ಮತ್ತು ಮತ್ತು ಮೈಸೂರು ಕೆ.ಎನ್. ಪುರ ನಿವಾಸಿ ಮುಜೀಬುಲ್ ರೆಹಮಾನ (43) ಅವರೊಂದಿಗೆ ಹಾರವಾಡದ ಎ.ಜೆ.ಯು.ಸ್ ಡಾಂಬರು ತಯಾರಿಕಾ ಘಟಕದಲ್ಲಿ ಡಾಂಬರು ಲೋಡ್ ಮಾಡಿ ಟಪಾಲು ತರಲು ಹೋಗಿದ್ದಾಗ, ಡಾಂಬರು ಘಟಕದಲ್ಲಿ ಕೆಲಸ ಮಾಡುತ್ತಿದ್ದ ನಾಗರಾಜ, ಯಶವಂತ, ಚೋಟು, ಮತ್ತು ನಾಗರಾಜನ ತಮ್ಮ ಎಂಬಾತ ಇನ್ನೂ ಕೆಲವರೊಂದಿಗೆ ಸೇರಿ ಅಡ್ಡಗಟ್ಟಿ ತಮ್ಮ ಮಾಲಿಕರು ಲೋಡ್ ಖಾಲಿ ಮಾಡಲು ಹೇಳಿದ್ದಾರೆ ಎಂದು   ಲೋಡ್ ಖಾಲಿ ಮಾಡುವಂತೆ ತಿಳಿಸಿದ್ದು ಅವರು ಲೋಡ್ ಖಾಲಿ ಮಾಡಲು ಒಪ್ಪದಿದ್ದಾಗ ಆಪಾದಿತ ನಾಗರಾಜ ಎಂಬಾತನಿಗೆ ಸಂದೀಪ ಗಿರಿಶಂಕರ್ ಸಿಂಗ್ ಎಂಬಾತ ವಾಟ್ಸಪ್ ಕರೆ ಮಾಡಿ ಲೋಡ್ ಖಾಲಿ ಮಾಡದಿದ್ದರೆ ಅವರನ್ನು ಹೊಡೆದು, ಇಲ್ಲವೇ ಜೀವ ತೆಗೆದು ಲೋಡ್ ಖಾಲಿ ಮಾಡಿಸುವಂತೆ ಹಿಂದಿ ಭಾಷೆಯಲ್ಲಿ ಸೂಚನೆ ನೀಡಿದ್ದ ಎನ್ನಲಾಗಿದೆ. 

ನಂತರ ಆಪಾದಿತ ನಾಗರಾಜ ಮತ್ತಿತರರು ಸೇರಿ  ಸಲ್ಮಾನ್ ಎನ್ನುವವರಿಗೆ ಅವಾಚ್ಯ ಶಬ್ದಗಳಿಂದ ಬಯ್ದು ಹಲ್ಲೆ ನಡೆಸಿದ್ದು ಬಿಡಿಸಲು ಬಂದ ಶಬ್ಬೀರ್ ಮತ್ತು ಮುಜೀಬುಲ್ ಎನ್ನುವವರಿಗೂ ಹೊಡೆದು  ಲೋಡ್ ಖಾಲಿ ಮಾಡದಿದ್ದರೆ ಜೀವ ಸಹಿತ ಬಿಡುವುದಿಲ್ಲ ಎಂದು ಜೀವ  ಬೆದರಿಕೆ ಹಾಕಿರುವುದಾಗಿ ಹೇಳಲಾಗಿದ್ದು ಈ ಕುರಿತಂತೆ ಸಂದೀಪ ಗಿರಿಶಂಕರ್ ಸಿಂಗ್, ನಾಗರಾಜ  ಸೇರಿದಂತೆ ಇತರರ ಮೇಲೆ ಅಂಕೋಲಾ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು ಪ್ರಕರಣ ದಾಖಲಿಸಿಕೊಂಡ ಪೊಲೀಸರು ತನಿಖೆ ಕೈಗೊಂಡಿದ್ದಾರೆ. 

ನಿಯಂತ್ರಣ ತಪ್ಪಿ ಬಿದ್ದ ಬೈಕ್: ಕಾಲೇಜಿನ ಉಪನ್ಯಾಸಕ ನಿಧನ

ಈ ಪ್ರಕರಣದ ಹೊರತಾಗಿ ತಾಲೂಕು ಹಾಗೂ ಜಿಲ್ಲೆಯ ಹಲವೆಡೆ ಅಕ್ರಮ ಡಾಂಬರ್ ಅಡ್ಡೆಗಳಿಂದ  ಕಳ್ಳ ದಂಧೆಯ ಘಾ ಟು ವಾಸನೆ ಜೋರಾಗಿ ಬಡಿಯಲಾರಂಭಿಸಿದೆ ಎನ್ನಲಾಗಿದ್ದು , ಅಂತಹ ಕಡೆಗಳಲ್ಲಿಯೂ  ಕೆಲವೊಮ್ಮೆ ಆಕ್ರಮ ಸಾಗಾಟ ಹಾಗೂ ಇಳಿಸುವಿಕೆ ವೇಳೆ  ಸ್ಥಳೀಯರೇ ಇರಲಿ, ರಾಜ್ಯ ಹಾಗೂ ಪರರಾಜ್ಯದವರೇ ಇದ್ದರೂ ಪರಸ್ಪರ ವಾದ, ತಿಕ್ಕಾಟ, ಸಣ್ಣ ಪುಟ್ಟ ಹಲ್ಲೆಗಳು  ನಡೆದಿದ್ದರೂ ಆ ಪ್ರಕರಣಗಳನ್ನು ದಾಖಲಿಸಲು ಹೋದರೆ ತಮ್ಮ ಅಕ್ರಮಗಳು ಎಲ್ಲಿ ಬಯಲಾಗುತ್ತವೆಯೋ ಎಂಬ ಹೆದರಿಕೆಯಲ್ಲಿ ಇಲ್ಲವೇ ಇನ್ನಿತರೆ ಕಾರಣಗಳಿಂದ  ಮುಚ್ಚಿ ಹಾಕುತ್ತಾರೆ ಎನ್ನಲಾಗುತ್ತಿದೆ.                 

ವಿಸ್ಮಯ ನ್ಯೂಸ್ ವಿಲಾಸ ನಾಯಕ ಅಂಕೋಲಾ

Back to top button