ಮಲ್ಟಿಸ್ಪೆಷಾಲಿಟಿ ಆಸ್ಪತ್ರೆ ಅಭಿಯಾನ: ಬೆಂಗಳೂರಿನ ಫ್ರೀಡಂ ಪಾರ್ಕಿನಲ್ಲಿ ಪ್ರತಿಭಟನೆ‌

ಮಲ್ಟಿಸ್ಪಷಾಲಿಟಿ ಆಸ್ಪತ್ರೆ ಬೇಕೇ ಬೇಕು ಎಂಬ ಘೋಷ ವಾಕ್ಯ ಎಲ್ಲಡೆ ಪ್ರದರ್ಶನ

ಬೆಂಗಳೂರು: ಉತ್ತರಕನ್ನಡದಲ್ಲಿ ಸುಸಜ್ಜಿತ ಆಸ್ಪತ್ರೆ ನಿರ್ಮಾಣ ಮಾಡಬೇಕೆಂದು ಆಗ್ರಹಿಸಿ ಸರ್ಕಾರದ ಗಮನ ಸೆಳೆಯಲು ಬೆಂಗಳೂರಿನಲ್ಲಿ ವಾಸವಾಗಿರುವ ಉತ್ತರ ಕನ್ನಡ ಜಿಲ್ಲೆ ಜನರು ಬೆಂಗಳೂರಿನ ಫ್ರೀಡಂ ಪಾರ್ಕಿನಲ್ಲಿ ಪ್ರತಿಭಟನೆ‌ ನಡೆಸಿದರು.

ಕಚೇರಿಯಲ್ಲೇ ಸಾವಿಗೆ ಶರಣಾದ ಅಬಕಾರಿ ಉಪನಿರೀಕ್ಷಕ: ಡೆತ್ ನೋಟಿನಲ್ಲಿ ಏನಿದೆ? ಮೃತನ ಸಹೋದರ ಹೇಳಿದ್ದೇನು?

ಮಲ್ಟಿಸ್ಪಷಾಲಿಟಿ ಆಸ್ಪತ್ರೆ ಬೇಕೇ ಬೇಕು ಎಂಬ ಘೋಷ ವಾಕ್ಯ ಎಲ್ಲಡೆ ಪ್ರದರ್ಶನಗೊಂಡವು. ಅಲ್ಲದೆ ಉತ್ತರಕನ್ನಡ ಜಿಲ್ಲೆಯಲ್ಲಿ ಒಂದು ಸುಸಜ್ಜಿತ ಆಸ್ಪತ್ರೆ ನಿರ್ಮಾಣ ಆಗಬೇಕು, ಉತ್ತರ ಕನ್ನಡ ಜಿಲ್ಲೆಗೆ ಸುಪರ್‌ ಸ್ಪೆಶಾಲಿಟಿ ಆಸ್ಪತ್ರೆ ಬೇಕೇಬೇಕು ಎಂದು ಫಲಕಗಳನ್ನು ಪ್ರದರ್ಶಿಸಿದರು. ಹೌದು, ಉತ್ತರಕನ್ನಡ ಮೂಲದ ಸುಮಾರು ಎರಡು ಸಾವಿರಕ್ಕೂ ಹೆಚ್ಚು ಜನರು ರಾಜ್ಯ ರಾಜಧಾನಿಯಲ್ಲಿ ಧ್ವನಿ ಎತ್ತಿದ್ದು, ಹೋರಾಟಕ್ಕೆ ಬೆಂಬಲ‌ ಸೂಚಿಸಿದರು.

ಈ ವೇಳೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹಾಗೂ ಆರೋಗ್ಯ ಸಚಿವ ಡಾ.ಸುಧಾಕರ ಅವರಿಗೆ ಮನವಿ ಪತ್ರ ನೀಡಲು ನಿರ್ಧರಿಸಲಾಯಿತು.

ಬ್ಯೂರೋ ರಿಪೋರ್ಟ್ ವಿಸ್ಮಯ ನ್ಯೂಸ್

Exit mobile version