Important
Trending

ಬಸ್ ತಪ್ಪಿಸಲು ಹೋಗಿ ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯದ ಲಾರಿ : ಅಪಾಯದಿಂದ ಪಾರಾದ ಚಾಲಕ

ನಿಯಂತ್ರಣ ತಪ್ಪಿಮೆಕ್ಕೆಜೋಳ ಸಾಗಿಸುವ ಲಾರಿ ಪಲ್ಟಿ

ಭಟ್ಕಳ : ಕೆ.ಎಸ್.ಆರ್.ಟಿ.ಸಿ ಬಸ್ ತಪ್ಪಿಸಲು ಹೋಗಿ ಚಾಲಕನ ನಿಯಂತ್ರಣ ತಪ್ಪಿ ಲಾರಿ ಪಲ್ಟಿಯಾಗಿರುವ ಘಟನೆ ಮೂಡ ಭಟ್ಕಳದ ರಾಷ್ಟ್ರೀಯ ಹೆದ್ದಾರಿಯಲ್ಲಿ ನಡೆದಿದೆ. ರಾತ್ರಿ ಸುರಿದ ಮಳೆಯಲ್ಲಿ ಸಂಚರಿಸುವಾಗ ಕೆಎಸ್ ಆರ್ ಟಿಸಿ ಬಸ್ ತಪ್ಪಿಸಲು ಹೋಗಿ ಚಾಲಕನ ನಿಯಂತ್ರಣ ತಪ್ಪಿಮೆಕ್ಕೆಜೋಳ ಸಾಗಿಸುವ ಲಾರಿ ಪಲ್ಟಿಯಾಗಿದೆ. ಲಾರಿ ಪಲ್ಟಿಯಾದ ಕಾರಣ ಯಾವುದೇ ಸಾವುನೋವು ಸಂಭವಿಸಿಲ್ಲ ಚಾಲಕ ಮಾರುತಿ ತಿಪ್ಪಣ್ಣ ವಡ್ಡರ ಹಾನಗಲ್ ನಿವಾಸಿ ಅಸ್ತವ್ಯಸ್ತಗೊಂಡಿದ್ದು, ಹಾಗೂ ಕ್ಲೀನರ್ ಮನೋಜ್ ಮಲಕಪ್ಪ ಬೊಮ್ಮನಹಳ್ಳಿ ಅಪಾಯದಿಂದ ಪಾರಾಗಿದ್ದಾರೆ.

ಪರೇಶ ಮೇಸ್ತಾ ಸಾವಿನ ಪ್ರಕರಣದಲ್ಲಿ ನಿರಪರಾಧಿಗಳ ವಿರುದ್ಧದ ಕೇಸ್ ವಾಪಸ್ ತೆಗೆಯಲು ನಿರ್ಧಾರ: ಕೋಟಾ ಶ್ರೀನಿವಾಸ್ ಪೂಜಾರಿ

ನಗರ ಪೋಲಿಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ. 112 ವಾಹನ ಹಾಗೂ ಹೈವೇ ಪೆಟ್ರೋಲಿಂಗ್ ಪೊಲೀಸ್ ವಾಹನ ಸ್ಥಳಕ್ಕೆ ತೆರಳಿ ಗಾಯಾಳು ಚಾಲಕನನ್ನು ಆಸ್ಪತ್ರೆಗೆ ಸಾಗಿಸಿ ತುರ್ತು ಚಿಕಿತ್ಸೆ ನೀಡಿದ್ದಾರೆ. ಈ ಸಂದರ್ಭದಲ್ಲಿ ಗ್ರಾಮೀಣ ಠಾಣೆ ಪಿ.ಎಸ್.ಐ ಗಣೇಶ ನಾಯ್ಕ ಹಾಗೂ ನಗರ ಠಾಣೆ ಎ.ಎಸ್.ಐ ನವೀನ ಬೋರ್ಕರ್,ಹಾಗೂ ಇತರ ಪೊಲೀಸ್ ಸಿಬ್ಬಂದಿಗಳು ಉಪಸ್ಥಿತರಿದ್ದರು.

ವಿಸ್ಮಯ ನ್ಯೂಸ್, ಉದಯ್ ಎಸ್ ನಾಯ್ಕ, ಭಟ್ಕಳ

Related Articles

Back to top button