ಯುವತಿಯ ಸಾವಿನ ಸುತ್ತ ಅನುಮಾನದ ಹುತ್ತ ? ಬಡ ಕುಟುಂಬದ ಹೆಣ್ಣುಮಗಳು ಬಟ್ಟೆ ಅಂಗಡಿಯಲ್ಲಿದ್ದು ಈ ಫ್ಯಾಷನ್ ಗೆ ಮರುಳಾದಳೇ ?

ಪೋಲೀಸ್ ಇಲಾಖೆಯಿಂದ ತಿಳಿದು ಬರಬೇಕಿದೆ ಸತ್ಯಾ ಸತ್ಯತೆ?

ಅಂಕೋಲಾ : ತಾಲೂಕಿನ ಬಟ್ಟೆ ಅಂಗಡಿ ಒಂದರಲ್ಲಿ ಕೆಲಸಕ್ಕಿದ್ದ ಯುವತಿಯೋರ್ವಳು ಕಳೆದ ಕೆಲ ದಿನಗಳ ಹಿಂದೆ ಅದಾವುದೋ ಕಾರಣದಿಂದ ಮೃತಪಟ್ಟಿದ್ದಾಳೆ ಎನ್ನಲಾಗಿದ್ದು, ಅವಳ ಸಾವಿನ ಸುತ್ತ ಅನುಮಾನದ ಹುತ್ತ ಮೂಡುವಂತಾಗಿದೆ ಎಂಬ ಗುಸು ಗುಸು ಮಾತು ಪಟ್ಟಣದ ಹಲವಡೆ ಕೇಳಿ ಬಂದಿದೆ.

ಬಸ್ ತಪ್ಪಿಸಲು ಹೋಗಿ ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯದ ಲಾರಿ : ಅಪಾಯದಿಂದ ಪಾರಾದ ಚಾಲಕ

ಹೊರ ಜಿಲ್ಲೆಯ ಮೂಲದವರಾದ ಬಡ ಕುಟುಂಬವೊಂದು ಉದ್ಯೋಗ ಅರಸಿ ಅಂಕೋಲಾಕ್ಕೆ ಬಂದು ಇಲ್ಲಿಯೇ ಬಾಡಿಗೆ ಮನೆ ಮಾಡಿಕೊಂಡು ವಾಸವಿದ್ದು, ಅದೇ ಕುಟುಂಬದ ಯುವತಿ ಕಳೆದ ಕೆಲ ಕಾಲದಿಂದ ಅಂಗಡಿಯೊಂದರಲ್ಲಿ ಬಟ್ಟೆ ಮಾರಾಟದ ಕೆಲಸಕ್ಕೆ ಸಹಾಯಕಿಯಾಗಿ ಸೇರಿಕೊಂಡಿದ್ದಳು ಎನ್ನಲಾಗಿದೆ.

ಅದಾವುದೋ ಕಾರಣದಿಂದ ಒಮ್ಮೇಲೆ ಅವಳ ಆರೋಗ್ಯ ಸ್ಥಿತಿಯಲ್ಲಿ ಏರುಪೇರಾಗಿ ಜಿಲ್ಲಾ ಕೇಂದ್ರ ಕಾರವಾರದ ಆಸ್ಪತ್ರೆ ಸೇರಿದಂತೆ ಇತರೆಡೆ ತಪಾಸಣೆಗೆ ಒಳಪಟ್ಟಿದ್ದಳು ಎನ್ನಲಾಗಿದ್ದು ಈ ನಡುವೆ ಒಂದು ದಿನ ದಾರಿಮಧ್ಯೆಯೇ ಕೊನೆಯುಸಿರೆಳೆದಳು ಎನ್ನಲಾಗಿದೆ. ಚೆನ್ನಾಗಿ ಓಡಾಡಿಕೊಂಡಿದ್ದ ಈ ಬಡ ಹೆಣ್ಣು ಮಗಳ ಆರೋಗ್ಯದಲ್ಲಿ ಒಮ್ಮೇಲೆಯೇ ಏರು ಪೇರಾಗಲು ಕಾರಣಗಳೇನಿರಬಹುದು? ಅದಾವುದೋ ಫ್ಯಾಷನ್ ಮಾಯೆಗೆ ಸಿಲುಕಿ ಯಾರದೋ ಅತಿಯಾದ ಸಲುಗೆ ಬೆಳೆದು ಅದರಿಂದಲೇ ಏನಾದರೂ ತೊಂದರೆಯಾಗಿ ಇಲ್ಲವೇ ಮತ್ತಿತರ ಕಾರಣಗಳಿಂದ ಮನನೊಂದು ಆತ್ಮಹತ್ಯೆಗೆ ಶರಣಾದಳೇ? ಅಥವಾ ಪುಡ್ ಫಾಯಿಸನ್ ಆಗಿರಬಹುದೇ ಎಂಬಿತ್ಯಾದಿ ಅನುಮಾನದ ಮಾತುಗಳು ಅಲ್ಲಲ್ಲಿ ಕೇಳಿ ಬಂದಂತಿದೆ.

ಹಾಗೊಮ್ಮೆ ಅಚಾತುರ್ಯ ಏನಾದರೂ ನಡೆದಿದ್ದರೆ ಕುಟುಂಬಸ್ಥರು ದೂರು ನೀಡಲು ಹಿಂಜಂರಿದರೇಕೆ ? ಅಥವಾ ಬಡವರ ಅಸಹಾಯಕತೆಯನ್ನು ದುರುಪಯೋಗ ಪಡಿಸಿಕೊಂಡು ದೂರು ದಾಖಲಿಸದಂತೆ ಒತ್ತಡ ಇಲ್ಲಲೇ ಆಮಿಷದ ತಂತ್ರ ಬಳಸಿದರೇ ಎಂಬ ಮಾತು ಸಾರ್ವಜನಿಕ ವಲಯದಿಂದ ಕೇಳಿ ಬರಲಾರಂಭಿಸಿದಂತಿದೆ.

ಒಟ್ಟಿನಲ್ಲಿ ಯುವತಿಯ ಸಾವಿನಸುತ್ತ ಕೇಳಿ ಬರುತ್ತಿರುವ ಹಲವು ಅನುಮಾನಗಳ ಕುರಿತು ಸತ್ಯಾ ಸತ್ಯತೆ ತಿಳಿದು ಬರಬೇಕಿದೆ. ಈ ಕುರಿತಂತೆ ಪೋಲೀಸರು ಸಹ ಕೆಲವರ ವಿಚಾರಣೆ ಮಾಡುತ್ತಿದ್ದಾರೆ ಎನ್ನಲಾಗಿದ್ದು ಇಲಾಖೆಯಿಂದ ಅಧಿಕೃತ ಮಾಹಿತಿಗಳು ತಿಳಿದು ಬರಬೇಕಿದೆ.

ವಿಸ್ಮಯ ನ್ಯೂಸ್ ವಿಲಾಸ ನಾಯಕ ಅಂಕೋಲ

ವಿಶೇಷ ಸೂಚನೆ: ಉತ್ತರಕನ್ನಡದ ಪ್ರಮುಖ ಸುದ್ದಿ, ವಿಶೇಷ ವರದಿ, ಸಭೆ-ಸಮಾರಂಭ ಉದ್ಯೋಗದ ಮಾಹಿತಿಯನ್ನು ನಿರಂತರವಾಗಿ ಪಡೆಯಿರಿ. ವಿಸ್ಮಯ ಟಿ.ವಿಯ 8762287698 ಈ ನಂಬರ್ ಸೇವ್ ಮಾಡಿಕೊಂಡು, ನಮ್ಮ ವಾಟ್ಸಪ್ ನಂಬರ್‌ಗೆ ಹಾಯ್ ಅಂತ ಮೆಸೇಜ್ ಮಾಡಿ ವಿಸ್ಮಯ ಟಿ.ವಿ ನ್ಯೂಸ್ ಗ್ರೂಫ್ ಮೂಲಕ ಕ್ಷಣ ಕ್ಷಣದ ಸುದ್ದಿಗಳನ್ನು, ಮೊಬೈಲ್ ನಲ್ಲಿ ನೀವಿರುವ ಸ್ಥಳದಲ್ಲೇ ನಿರಂತರವಾಗಿ ಪಡೆಯಿರಿ. ಈ ಕೆಳಗಿನ ಲಿಂಕ್ ಕ್ಲಿಕ್ ಮಾಡಿ., ಹಾಯ್ ಅಂತ ಮೆಸೇಜ್ ಮಾಡಿ.

Exit mobile version