ಗುರುತು ಮರೆಮಾಚಿಕೊಂಡು 50 ಲಕ್ಷ ಹಣಕ್ಕಾಗಿ ಬ್ಲ್ಯಾಕ್ ಮೇಲ್ : ಇಬ್ಬರು ಆರೋಪಿಗಳನ್ನು ಬಂಧಿಸಿದ ಪೊಲೀಸರು

ಹೊನ್ನಾವರ: 50 ಲಕ್ಷ ಹಣಕ್ಕಾಗಿ ಬ್ಲ್ಯಾಕ್ ಮೇಲ್ ಮಾಡುತ್ತಿದ್ದ ಆರೋಪಿಗಳನ್ನು ಪತ್ತೆ ಹಚ್ಚಿ, ಅವರನ್ನು ಬಂಧಿಸಿ ನ್ಯಾಯಾಲಯಕ್ಕೆ ಹೊನ್ನಾವರ ಪೊಲೀಸರು ಹಾಜರು ಪಡಿಸಿದ್ದಾರೆ.

ಕಾರು ಅಪಘಾತ: ನಿಶ್ಚಿತಾರ್ಥವಾಗಿದ್ದ ಯುವಕ ಸಾವು

ಹೌದು, ಪಟ್ಟಣದ ಉದ್ಯಮಿ ಪುರುಷೋತ್ತಮ ಪ್ರಭು ಎನ್ನುವವರನ್ನು ಹೆದರಿಸಿ 50 ಲಕ್ಷ ರೂಪಾಯಿ ಹಣ ಕೊಡುವಂತೆ ಬ್ಲಾಕಮೇಲ್ ಮಾಡುತ್ತಿದ ಇಬ್ಬರು ಆರೋಪಿಯನ್ನು ಬಂಧಿಸಿದ್ದಾರೆ,ತಮ್ಮ ಗುರುತನ್ನು‌ ಮರೆಮಾಚಿಕೊಂಡು ಬ್ಲ್ಯಾಕ್ ಮೇಲ್ ಮಾಡುತ್ತಿದ್ದ ಕರ್ಕಿಕೋಡಿಯ ಪರಮೇಶ್ವರ ಮುಕುಂದ ಉಪ್ಪಾರ ಮತ್ತು ಉದ್ಯಮನಗರದ ಸುನೀಲ್ ಬಾಬು ಮೇಸ್ತಾ ಸೇರಿ ಇಬ್ಬರನ್ನು ಹೊನ್ನಾವರ ಪೋಲಿಸರು ಬಂಧಿಸಿ ನ್ಯಾಯಾಲಕ್ಕೆ ಒಪ್ಪಿಸಲಾಗಿದೆ.

ಬಂಧಿತ ಆರೋಪಿಯಿಂದ ಟಾಟಾ ಕಂಪನಿಯ ಹೊಸ ಪಂಚ್ ಕಾರು, ಹೊಂಡಾ ಕಂಪನಿಯ ಸ್ಕೂಟಿ ಬೈಕ್,
3 ಮೊಬೈಲ್ ಪೋನ್, ಹೆಲ್ಮೆಟ್,
ಕೃತ್ಯದಲ್ಲಿ ಧರಿಸಿದ್ದ ಬಟ್ಟೆ ಹಾಗೂ ಇತರೇ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ.

ವಿಸ್ಮಯ ನ್ಯೂಸ್ ಶ್ರೀಧರ್ ನಾಯ್ಕ ಹೊನ್ನಾವರ

Exit mobile version