ಶ್ರೀ ಮಾರಿಕಾಂಬಾದೇವಾಲಯದಲ್ಲಿ ಶ್ರಾವಣ ಮಾಸದ 12 ನೇ ದಿನದ ಕಾರ್ಯಕ್ರಮ

ಶಿರಸಿ : ಜಗನ್ಮಾತೆ ಶ್ರೀ ಮಾರಿಕಾಂಬಾ ದೇವಾಲಯದ ಸಭಾ ಮಂಟಪದಲ್ಲಿ “ ಶ್ರಾವಣ ಮಾಸ”ದ ನಿಮಿತ್ತ ಆಯೋಜಿಸಿದ ಕಾರ್ಯಕ್ರಮದಲ್ಲಿ 12 ನೇ ದಿನದ ಮೊದಲನೇ ಕಾರ್ಯಕ್ರಮದಲ್ಲಿ ಶಿರಸಿಯ ಯೋಗ ಮಂದಿರ ಮಹಿಳಾ ಮಂಡಳದ ಸದಸ್ಯರು ವಿವಿಧ ಭಜನೆಗಳನ್ನು ಸುಶ್ರಾವ್ಯವಾಗಿ ಪ್ರಸ್ತುತ ಪಡಿಸಿದರು. ಇವರಿಗೆ ಹಾರ್ಮೋನಿಯಂ ನಲ್ಲಿ ಶ್ರೀಮತಿ ಕಾವ್ಯಶ್ರೀ ಹೆಗಡೆ ಮತ್ತು ತಬಲಾದಲ್ಲಿ ಶ್ರೀ ಪನ್ನಗ ಹೆಗಡೆ ಅವರು ಸಾಥ ನೀಡಿದರು.

2 ನೇ ಕಾರ್ಯಕ್ರಮದಲ್ಲಿ ಶ್ರೀ ಮಧುಸೂದನದಾಸರು, ಮಂಡ್ಯ ಇವರು ಕೃಷ್ಣಾವತಾರ ಎಂಬ ಕೀರ್ತನೆಯನ್ನು ಪ್ರಸ್ತುತ ಪಡಿಸಿದರು. ಇವರಿಗೆ ಕೀಬೊರ್ಡಿನಲ್ಲಿ ವಿದ್ವಾನ್ ಶ್ರೀ ವಿಶ್ವನಾಥ, ತಬಲಾದಲ್ಲಿ ಶ್ರೀ ಜಿ. ವೆಂಕಟೇಶ ರವರು ಸಾಥ ನೀಡಿದರು. 3 ನೇ ಕಾರ್ಯಕ್ರಮದಲ್ಲಿ ಸ್ವರ್ಣವಲ್ಲಿ ಮಾತೃ ಮಂಡಳಿಯ ಸದಸ್ಯರು ವಿವಿಧ ಭಜನೆಯನ್ನು ಪ್ರಸ್ತುತ ಪಡಿಸಿದರು. ಇವರಿಗೆ ಹಾರ್ಮೋನಿಯಂ ಶ್ರೀ ಚಿನ್ಮಯ ಹೆಗಡೆ ಮತ್ತು ತಬಲಾದಲ್ಲಿ ಶ್ರೀ ಆನಂದ ಭಟ್ಟ ದಾಯಿಮನೆ ಅವರು ಸಹಕರಿಸಿದರು.

ವಿಸ್ಮಯ ನ್ಯೂಸ್, ಶಿರಸಿ

Exit mobile version