ಬಾಲಕನ ಅಪಹರಣ ಪ್ರಕರಣ: 24 ಗಂಟೆಯೊಳಗೆ ಆರೋಪಿಗಳು ಅಂದರ್

ಸoಬoಧಿಕರಿoದಲೇ ಅಪಹರಣ ಶಂಕೆ: ಗೋವಾದಲ್ಲಿ ಬಾಲಕ ಪತ್ತೆ

ಭಟ್ಕಳ: ಶನಿವಾರ ರಾತ್ರಿ ತಾಲೂಕಿನ ಆಜಾದ್ ನಗರದಲ್ಲಿ ಅಪಹರಣಕ್ಕೊಳಗಾದ  ಎಂಟು ವರ್ಷದ ಬಾಲಕ ಗೋವಾ ಕ್ಯಾಲಂಗುಟ್ ಬೀಚ್ ನಲ್ಲಿ ಪತ್ತೆಯಾದ್ದಾನೆ. ಅಪಹರಣಕ್ಕೆ ಒಳಗಾದ ಬಾಲಕನನ್ನು ರಾತ್ರಿ ಸಿ.ಪಿ.ಐ ದಿವಾಕರ ನೇತೃತ್ವದ ತಂಡ ಅಪಹರಣಕಾರರಿಂದ ರಕ್ಷಣೆ ಮಾಡಿದ್ದು, ಭಟ್ಕಳಕ್ಕೆ ಕರೆ ತರಲಾಗಿದೆ. ಹಾಗೂ ಬಾಲಕನನ್ನು ಅಪಹರಣ ಮಾಡಿದ ಇಬ್ಬರು ಆರೋಪಿಯನ್ನು ಬಂಧಿಸಲಾಗಿದೆ. 

ಕಾರ್ ಬಾಡಿಗೆ ಮಾಡಿಕೊಂಡು ಬಂದು ಚಾಲಕನ ದರೋಡೆಗೆ ಸಂಚು: ಚಾಲಕ ಕೂಗಿಕೊಳ್ಳುತ್ತಿದ್ದಂತೆ ಗದ್ದೆಯಲ್ಲಿ ಓಡಿಹೋದರು

ಇಬ್ಬರು ಆರೋಪಿಗಳು ಬಾಲಕನ ಸಂಬಂಧಿಕರೆಂದು ಮಾಹಿತಿ ತಿಳಿದು ಬಂದಿದೆ. ಬಾಲಕನ ಅಪಹರಣಕ್ಕೆ ಕಾರಣ ಏನು ಎಂದು ಪೊಲೀಸ್ ತನಿಖೆಯಿಂದ ತಿಳಿದು ಬರಬೇಕಿದೆ. ಕ್ಷಿಪ್ರ ಕಾರ್ಯಾಚರಣೆ ಮಾಡಿದ ಭಟ್ಕಳ ಪೊಲೀಸರ ಬಗ್ಗೆ ಸಾರ್ವಜನಿಕ ವಲಯದಲ್ಲಿ  ಮೆಚ್ಚುಗೆ ವ್ಯಕ್ತವಾಗಿದೆ.

ಕಾರಿನಲ್ಲಿ ಬಂದು ಬಾಲಕನ ಅಪಹರಿಸಿದ್ದರು: ಸಿಸಿಟಿವಿ ದೃಶ್ಯದಲ್ಲಿ ಸೆರೆಯಾದ ಕಿಡ್ನಾಪ್

ಹೌದು, ಕಾರಿನಲ್ಲಿ ಬಂದ ದುಷ್ಕರ್ಮಿಗಳು ಎಂಟು ವರ್ಷದ ಬಾಲಕನನ್ನು ಅಪಹರಿದ ಘಟನೆ ಭಟ್ಕಳ ತಾಲ್ಲೂಕಿನ ಆಜಾದ್ ನಗರದಲ್ಲಿ ನಡೆದಿತ್ತು. 8 ವರ್ಷದ ಬಾಲಕ ಅಂಗಡಿಯಿಂದ ಬ್ರೆಡ್ ತರಲು ಹೋಗಿದ್ದ ಸಂದರ್ಭದಲ್ಲಿ ಇದ್ದಕ್ಕಿದ್ದಂತೆ ನಾಪತ್ತೆಯಾಗಿರುವುದು ಬೆಳಕಿಗೆ ಬಂದಿತ್ತು.

ಬಾಲಕ ಎಷ್ಟು ಹೊತ್ತಾದರೂ ಮನೆಗೆ ಆಗಮಿಸದಿದ್ದಾಗ ಅಕ್ಕಪಕ್ಕದ ಮನೆಗಳ ಅವರ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಿದಾಗ ರಾತ್ರಿ 8 ಗಂಟೆ ಸುಮಾರಿಗೆ ಮಾರುತಿ ಇಕೋ ವ್ಯಾನ್ ಬರುತ್ತಿರುವುದು ಕಂಡು ಬಂದಿದ್ದು, ಅದರಲ್ಲಿದ್ದ ವ್ಯಕ್ತಿಯೊಬ್ಬರು ಇಳಿದು ಬಾಲಕನನ್ನು ಎತ್ತಿಕೊಂಡು ಕಾರಿನಲ್ಲಿ ಹಾಕಿಕೊಂಡು ಸ್ಥಳದಿಂದ ಪರಾರಿಯಾಗಿದ್ದರು.

ಪೊಲೀಸರು ಇತರ ಮನೆಗಳ ಹೊರಗಿನ ಸಿಸಿಟಿವಿ ದೃಶ್ಯಗಳನ್ನು ಸಹ ಪಡೆದುಕೊಂಡಿದ್ದು, ಕೂಲಂಕುಷವಾಗಿ ತನಿಖೆ ನಡೆಸುತ್ತಿದ್ದು, ಆರೋಪಿಗಳಿಗಾಗಿ ಬಲೆ ಬೀಸಿದ್ದರು.

ವಿಸ್ಮಯ ನ್ಯೂಸ್, ಉದಯ್ ಎಸ್ ನಾಯ್ಕ, ಭಟ್ಕಳ

Exit mobile version