Important
Trending

ತಲೆಕೆಳಗಾದ ಆಟೋ ರಿಕ್ಷಾ : ನಾಲ್ವರು ಪ್ರಯಾಣಿಕರಿಗೆ ಗಾಯ | ರೇಶನ್ ಒಯ್ಯುಲು ಬಂದವರು ಆಸ್ಪತ್ರೆ ಸೇರಿದರು

ಅಂಕೋಲಾ: ಚಲಿಸುತ್ತಿದ್ದ ಆಟೋರಿಕ್ಷಾ ಒಂದು ಚಾಲಕನ ನಿಯಂತ್ರಣ ತಪ್ಪಿ ರಸ್ತೆಯಂಚಿನ ತಗ್ಗು ಪ್ರದೇಶದಲ್ಲಿ ಪಲ್ಟಿಯಾಗಿ ನಾಲ್ವರು ಪ್ರಯಾಣಿಕರು ಗಾಯಗೊಂಡ ಘಟನೆ ಗುರುವಾರ ಸಂಜೆ ಬೆಳಂಬಾರ ಗ್ರಾ.ಪಂ ವ್ಯಾಪ್ತಿಯ ತಾಳೇಬೈಲಿನಲ್ಲಿ ನಡೆದಿದೆ.

ಸಾರ್ವಜನಿಕ ಗಣೇಶೋತ್ಸವದ ಆಚರಣೆಗೆ ಭರದ ಸಿದ್ಧತೆ: ಸರ್ಕಾರದ ಮಾರ್ಗಸೂಚಿ ಹೇಗೆ ನೋಡಿ? ಮಹತ್ವದ ಮಾಹಿತಿ ಇಲ್ಲಿದೆ.

ರೇಶನ್ ಅಂಗಡಿಗೆ ಬಂದು ಪಡಿತರ ಧಾನ್ಯ ಪಡೆದು ಬಾಸಗೋಡಿನಿಂದ ಬೆಳಂಬಾರದತ್ತ ತೆರಳುತ್ತಿದ್ದ ಪ್ರಯಾಣಿಕರು ಹಂದಿಗೋಣ ಮಜರೆಯವರಾಗಿದ್ದು ಮನೆಗೆ ತಲುಪುವ ಮುನ್ನ ಮಾರ್ಗ ಮಧ್ಯೆ ತಾಳೇಬೈಲ್ ವ್ಯಾಪ್ತಿಯಲ್ಲಿ ಈ ಅವಘಡ ಸಂಭವಿಸಿದ್ದು ತಲೆಕೆಳಗಾದ ರಿಕ್ಷಾ ನುಜ್ಜು ಗುಜ್ಜಾಗಿದೆ. ಆದರೆ ಅದೃಷ್ಟ ವಶಾತ್ ಯಾವುದೇ ಪ್ರಾಣ ಹಾನಿಯಾಗಿಲ್ಲ.ಅಪಘಾತ ನಡೆದ ತಕ್ಷಣ ಗಾಯಳುಗಳನ್ನು 108 ಅಂಬುಲೆನ್ಸ್ ವಾಹನದ ಮೂಲಕ ತಾಲೂಕಾ ಆಸ್ಪತ್ರೆಗೆ ಸಾಗಿಸಲು ಸ್ಥಳೀಯರು ನೆರವಾದರು.

ಚಿಕ್ಕ ಪುಟ್ಟ ಗಾಯಗಳಾದ ಪ್ರತಿಮಾ ರಾಕು ಗೌಡ ಮತ್ತು ಸೋಮಿ ರಾಮಾ ಗೌಡ ಇವರಿಗೆ ತಾಲೂಕಾ ಆಸ್ಪತ್ರೆಯಲ್ಲಿ ಪ್ರಾಥಮಿಕ ಚಿಕಿತ್ಸೆ ನೀಡಿ ರಾತ್ರಿ ವೇಳೆಗೆ ಆಸ್ಪತ್ರೆಯಿಂದ ಬಿಡುಗಡೆ ಗೊಳಿಸಲಾಗಿದೆ. ಮೂಗು ಮತ್ತಿತರ ಭಾಗಗಳಿಗೆ ಗಾಯ ಗೊಂಡ ಸೀತಾ ಬೊಮ್ಮ ಗೌಡ ಇವಳಿಗೆ ತಾಲೂಕಾ ಆಸ್ಪತ್ರೆಯಲ್ಲಿ ಚಿಕಿತ್ಸೆಗೊಳಪಡಿಸಲಾಗಿದೆ.

ಎಡಗೈಗೆ ಗಂಭೀರ ಗಾಯಗೊಂಡ ನೇತ್ರಾವತಿ ಬೆಚ್ಚು ಗೌಡ ಇವಳನ್ನು ಹೆಚ್ಚಿನ ಚಿಕಿತ್ಸೆಗಾಗಿ ಜಿಲ್ಲಾ ಆಸ್ಪತ್ರೆ ಕಾರವಾರಕ್ಕೆ ಸಾಗಿಸಲಾಗಿದೆ. ಅಪಘಾತದ ಘಟನೆ ಕುರಿತಂತೆ ಹೆಚ್ಚಿನ ಮತ್ತು ನಿಖರ ಮಾಹಿತಿಗಳು ತಿಳಿದು ಬರಬೇಕಿದೆ.

ವಿಸ್ಮಯ ನ್ಯೂಸ್ ವಿಲಾಸ ನಾಯಕ ಅಂಕೋಲಾ

Back to top button