- ಚಂದಾವರ, ಕಡ್ಲೆ, ಹೊದ್ಕೆಶಿರೂರ, ಹಳದೀಪುರ, ಹಡಿನಬಾಳ, ಅಳ್ಳಂಕಿ, ಅನೀಲಗೋಡಗೂ ವ್ಯಾಪಿಸಿದ ಸೋಂಕು
- 20 ಪುರುಷರು ಮತ್ತು ಮೂವರು ಮಹಿಳೆಯರಿಗೆ ಸೋಂಕು ದೃಢ
ಹೊನ್ನಾವರ: ತಾಲೂಕಿನಲ್ಲಿ ಇಂದು ಒಟ್ಟು 23 ಕರೊನಾ ಪ್ರಕರಣ ಪತ್ತೆಯಾಗಿದೆ. 20 ಪುರುಷರು ಮತ್ತು ಮೂವರು ಮಹಿಳೆ ಸೇರಿದಂತೆ ತಾಲೂಕಿನಲ್ಲಿ ಒಟ್ಟೂ 23 ಕರೋನಾ ಪಾಸಿಟಿವ್ ಪ್ರಕರಣ ದೃಢಪಟ್ಟಿರುವುದಾಗಿ ತಿಳಿದುಬಂದಿದೆ,
ಕರಾವಳಿ ಕಾವಲು ಪಡೆಯಲ್ಲಿ 6 ಸಿಬ್ಬಂದಿಗಳು , ಐ ಆರ್ ಬಿ ಟೋಲನಲ್ಲಿ ಕೆಲಸ ನಿರ್ವಹಿಸುತ್ತಿದ್ದ ಇಬ್ಬರು, ಸಾಲಕೋಡಿನ ಮೂವರು, ವಲ್ಕಿಯ ಇಬ್ಬರಲ್ಲಿ ಸೋಂಕು ಪತ್ತೆಯಾಗಿದೆ. ಚಂದಾವರ, ಕಡ್ಲೆ, ಹೊದ್ಕೆಶಿರೂರ, ಹಳದಿಪುರ, ಹಡಿನಬಾಳ, ಅಳ್ಳಂಕಿ, ಅನೀಲಗೋಡ, ಹೊನ್ನಾವರ ಪಟ್ಟಣದ ಬಂದರ ರಸ್ತೆ, ಪ್ರಭಾತನಗರ, ರಾಯಕೇರಿಯ ತಲಾ ಒಬ್ಬರಲ್ಲಿ ಕರೋನಾ ಪಾಸಿಟಿವ್ ಬಂದಿದೆ.
ಕರಾವಳಿ ಕಾವಲು ಪಡೆಯ 58, 36, 33, 40, 43, 39 ವರ್ಷದ 6 ಸಿಬ್ಬಂದಿಗಳಲ್ಲಿ, ಐ ಆರ್ ಬಿ ಟೋಲಿನ 37 ಮತ್ತು 21 ವರ್ಷದ ಸಿಬ್ಬಂದಿಗಳಲ್ಲಿ ಮತ್ತು ಸಾಲಕೋಡಿನ 25, 39, 32 ವರ್ಷದ ಯುವಕರಲ್ಲಿ ಮತ್ತು ವಲ್ಕಿಯ 36-29 ಯುವಕರಲ್ಲಿ ಮತ್ತು ಚಂದಾವರದ 46 ವರ್ಷದ ಪುರುಷ, ಹೊದ್ಕೆಶಿರೂರಿನ 29 ವರ್ಷದ ಯುವತಿ, ಹಳದೀಪುರದ 32 ವರ್ಷದ, ಯುವಕ ಹಡಿನಬಾಳದ 19 ವರ್ಷದ ಯುವಕ, ಅಳ್ಳಂಕಿಯ 21 ವರ್ಷದ ಯುವಕ ಅನೀಲಗೋಡಿನ 26 ವರ್ಷದ ಯುವಕ ಹೊನ್ನಾವರ ಪಟ್ಟಣದ ಬಂದರ ರಸ್ತೆಯ 25 ವರ್ಷದ ಯುವಕ, ಪ್ರಭಾತನಗರದ 45 ವರ್ಷದ ಮಹಿಳೆಯಲ್ಲಿ ಹಾಗೂ ರಾಯಕೇರಿಯ 38 ವರ್ಷದ ಯುವಕ ಸೇರಿದಂತೆ ಒಟ್ಟೂ 23 ಜನರಲ್ಲಿ ಕರೋನಾ ಪಾಸಿಟಿವ್ ಪ್ರಕರಣ ದೃಡ ಪಟ್ಟಿದೆ,
ಈ ಕುರಿತ ಹೆಚ್ಚಿನ ಮಾಹಿತಿಯನ್ನು ರಾತ್ರಿ 8.30ಕ್ಕೆ ಪ್ರಸಾರವಾಗುವ ವಿಸ್ಮಯ ನ್ಯೂಸ್‌ನಲ್ಲಿ ವೀಕ್ಷಿಸಿ
ವಿಸ್ಮಯ ನ್ಯೂಸ್ ಶ್ರೀಧರ ನಾಯ್ಕ ಹೊನ್ನಾವರ,
ಪಂಡಿತ್ ಶಂಕರ್ ಗುರೂಜಿ
ಪ್ರಸಿದ್ಧ ಜ್ಯೋತಿಷ್ಯರು, ಬೆಂಗಳೂರು, ಮೊ- 9535432749
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವ್ಯವಹಾರದಲ್ಲಿ ನಷ್ಟ, ನಿಮ್ಮ ಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃಸಿದ್ಧ. ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ ಎರಡೇ ದಿನಗಳಲ್ಲಿ ಫೋನಿನ ಮೂಲಕ ನೆರವೇರಿಸಿ ಕೊಡುತ್ತಾರೆ. ಇಂದೇ ಸಂಪರ್ಕಿಸಿ.
(ಜಾಹೀರಾತು)