ಭಾರತೀಯ ತಟರಕ್ಷಕ ಪಡೆಯಿಂದ ಕಡಲ ತೀರದಲ್ಲಿ ಸ್ವಚ್ಛತಾ ಅಭಿಯಾನ : ಜನಜಾಗೃತಿ ಮೂಡಿಸುವ ಪ್ರಯತ್ನ
ನೂರಾರು ಜನರು ಪಾಲ್ಗೊಂಡು ಸ್ವಚ್ಛತೆ ಮತ್ತು ಜಾಗೃತಿ ಸಂದೇಶ
ಅಂಕೋಲಾ: ಆಜಾದಿ ಕಾ ಅಮೃತ ಮಹೋತ್ಸವ ವರ್ಷಾಚರಣೆಯ ಅಂಗವಾಗಿ ಭಾರತೀಯ ತಟರಕ್ಷಕ ಪಡೆಯಿಂದ ಹಲವು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತಿದೆ.ತಟರಕ್ಷಕ ಪಡೆಯ ಸಬೊರ್ಡಿನೇಟ್ ಆಫೀಸರ್ ಜಿ ಕೆ ರಾಯ್ ನೇತೃತ್ವದಲ್ಲಿ ಬೆಲೇಕೇರಿ ಕಡಲ ತೀರದಲ್ಲಿ ಸ್ವಚ್ಛತಾ ಅಭಿಯಾನ ನಡೆಸಲಾಯಿತು. ಸ್ವಾತಂತ್ರ್ಯೋತ್ಸವದ ಅಮೃತ ಮಹೋತ್ಸವದ ಅಂಗವಾಗಿ ಪ್ರಧಾನಿ ಅವರ ಪರಿಕಲ್ಪನೆಯಂತೆ ದೇಶದ ಕಡಲ ತೀರಗಳಲ್ಲಿ ಸ್ವಚ್ಛ ಸಾಗರ ಸುರಕ್ಷಿತ ಸಾಗರ ಅಭಿಯಾನ ಜುಲೈ 5ರಿಂದ ಸೆಪ್ಟೆಂಬರ್ 17 ರ ವರೆಗೆ ನಡೆಯಲಿದ್ದು ಅಭಿಯಾನದ ಭಾಗವಾಗಿ ಭಾರತೀಯ ತಟರಕ್ಷಣಾ ಪಡೆಯ ವತಿಯಿಂದ ತಾಲೂಕಿನ ಬೆಲೇಕೇರಿ ಕಡಲ ತೀರವನ್ನು ಸ್ವಚ್ಛಗೊಳಿಸುವ ಮೂಲಕ ಜನಜಾಗೃತಿ ಮೂಡಿಸಲಾಯಿತು..
ಅಂಗನವಾಡಿ ಕೇಂದ್ರದಲ್ಲಿ ಕಾಣಿಸಿ ಕೊಂಡು ನಾಗರ ಹಾವು|ಬುಸ್ ಬುಸ್ ಎನ್ನುತ್ತ ಹೆಡೆ ಎತ್ತಿ ರೋಷ ತೋರಿದ ನಾಗರ ಹಾವು
ಈ ಸಂದರ್ಭದಲ್ಲಿ ತಟರಕ್ಷಣಾ ಪಡೆಯ ಹಿರಿಯ ಅಧಿಕಾರಿಗಳು ಮಾತನಾಡಿ ಕಡಲ ತೀರಗಳಲ್ಲಿ ಸ್ವಚ್ಛತೆ ಕಾಪಾಡುವಲ್ಲಿ ಸ್ಥಳೀಯ ಜನರ ಸಹಕಾರ, ಸಹಭಾಗಿತ್ವ ಅತ್ಯಂತ ಮುಖ್ಯವಾದುದು ಜನರಿಗೆ ಸ್ವಚ್ಛ ಕರಾವಳಿ ಮತ್ತು ಸುರಕ್ಷಿತ ಸಾಗರದ ಕುರಿತು ಮನವರಿಕೆ ಮಾಡಿಕೊಡಲು ದೇಶದ ಕರಾವಳಿ ತೀರಗಳಲ್ಲಿ ಸ್ವಚ್ಛತಾ ಅಭಿಯಾನ ನಡೆಸಲಾಗುತ್ತಿದೆ ಎಂದರು.
ಭಾರತೀಯ ತಟರಕ್ಷಣಾ ಪಡೆಯ ಸಬೊರ್ಡಿನೇಟ್ ಆಫೀಸರ್ ಜಿ.ಕೆ. ರಾಯ್ ಮತ್ತು ಡಾ. ಸಹಿಂ ಸೇರಿದಂತೆ CM L R E ತಂಡದವರು ನೇತೃತ್ವ ವಹಿಸಿದ್ದರು. ಅಂಕೋಲಾ ತಾಲೂಕಿನ ಕರಾವಳಿ ಕಾವಲು ಪಡೆಯ ಅಧಿಕಾರಿಗಳು ಮತ್ತು ಸಿಬ್ಬಂದಿಗಳು, ರೂರಲ್ ರೋಟರಿ ಕ್ಲಬ್, ಲಯನ್ಸ್ ಕ್ಲಬ್ ಮತ್ತಿತರ ಸಂಘ ಸಂಸ್ಥೆಗಳ ಪದಾಧಿಕಾರಿಗಳು, ಸದಸ್ಯರು, ಸ್ಥಳೀಯ ಶಾಲಾ ವಿದ್ಯಾರ್ಥಿಗಳು, ಊರ ನಾಗರಿಕರು, ಇತರೆ ಪ್ರಮುಖರು ಪಾಲ್ಗೊಂಡು ಕಡಲ ತೀರದಂಚಿಗೆ ಬಿದ್ದ ಕಸ ತ್ಯಾಜ್ಯಗಳನ್ನು ಸಂಗ್ರಹಿಸಿದರು.
ಶಾಲಾ ವಿದ್ಯಾರ್ಥಿಗಳು ಸಹ ಹಿರಿಯರೊಡನೆ ಉತ್ಸಾಹದಿಂದ ಸ್ವಚ್ಛತಾ ಕಾರ್ಯದಲ್ಲಿ ತೊಡಗಿಸಿಕೊಂಡರು. ಗೌರಿ ಗಣೇಶ ಹಬ್ಬದ ಶುಭ ಸಂದರ್ಭದಲ್ಲಿಯೇ ನೂರಾರು ಜನರು ಪಾಲ್ಗೊಂಡು ಸ್ವಚ್ಛತೆ ಮತ್ತು ಜಾಗೃತಿ ಸಂದೇಶ ಸಾರಿದರು.
ವಿಸ್ಮಯ ನ್ಯೂಸ್ ವಿಲಾಸ ನಾಯಕ ಅಂಕೋಲಾ