ಕಾರವಾರ: ಜಿಲ್ಲೆಯಲ್ಲಿ ದಿನದಿಂದ ದಿನಕ್ಕೆ ಕರೊನಾ ಪ್ರಕರಣ ಹೆಚ್ಚುತ್ತಿದ್ದು, ಇಂದು ಕೂಡಾ ಈ ಸಂಖ್ಯೆ ಗಗನಮುಖಿಯಾಗಿದೆ. 70ಕ್ಕಿಂತ ಅಧಿಕ ಕೇಸ್ ದಾಖಲಾಗುವ ಸಾಧ್ಯತೆಯಿದೆ. ಕುಮಟಾದಲ್ಲಿ ಇಂದು ಕರೊನಾ ಕೇಸ್ ಗಳ ಪ್ರಕರಣ ಕಳೆದ ಎರಡು ದಿನಕ್ಕೆ ಹೋಲಿಸಿದ್ರೆ, ಇಂದು ಸ್ವಲ್ಪ ಇಳಿಕೆಯಾಗಿದೆ ಎನ್ನಲಾಗಿದೆ. 10ಕ್ಕಿಂತ ಕಡಿಮೆ ಪ್ರಕರಣ ದಾಖಲಾಗಿದೆ ಎಂಬ ಮಾಹಿತಿ ಲಭಿಸಿದೆ.
ಹಳಿಯಾಳ- ದಾಂಡೇಲಿ ಭಾಗದಲ್ಲಿ 35 ಪ್ರಕರಣಗಳು ದೃಢಪಟ್ಟಿರುವ ಸಾಧ್ಯತೆ ಇದೆ.(©Copyright reserved by Vismaya tv )ಉಳಿದಂತೆ ಭಟ್ಕಳದಲ್ಲಿ 10, ಮುಂಡಗೋಡದಲ್ಲಿ 8, ಕಾರವಾರದಲ್ಲಿ ಏಳು ಪ್ರಕರಣ ದಾಖಲಾಗಿದೆ. ಅಂಕೋಲಾದಲ್ಲಿ 6, ಸಿದ್ದಾಪುರ 3, ಶಿರಸಿ ಒಂದು ಪ್ರಕರಣ ದೃಢಪಟ್ಟಿದೆ.
ಹೊನ್ನಾವರದ ಗುಂಡಿಬೈಲ್ ನಿವಾಸಿಯಲ್ಲಿ ಪಾಸಿಟಿವ್:
ಹೊನ್ನಾವರ ತಾಲೂಕಿನ ಗುಂಡಿಬೈಲ್ ನಿವಾಸಿಯಾದ 35 ವರ್ಷದ ಯುವಕನಲ್ಲಿ (©Copyright reserved by Vismaya tv)ಸೋಂಕು ದೃಢಪಟ್ಟಿದೆ. ಈತ ಬೆಂಗಳೂರಿನಿಂದ ಆಗಮಿಸಿದ್ದ ಎನ್ನಲಾಗಿದೆ.
ಈ ಕುರಿತ ಅಧಿಕೃತ ಮಾಹಿತಿ ಸಂಜೆ ಪ್ರಕಟಿಸುವ ಹೆಲ್ತ್ ಬುಲೆಟಿನ್ ನಲ್ಲಿ ಅಂತಿಮಗೊಳ್ಳಲಿದೆ.
ಈ ಕುರಿತ ಹೆಚ್ಚಿನ ಮಾಹಿತಿಯನ್ನು ರಾತ್ರಿ 8.30ಕ್ಕೆ ಪ್ರಸಾರವಾಗುವ ವಿಸ್ಮಯ ನ್ಯೂಸ್ ವೀಕ್ಷಿಸಿ.
ಬ್ಯೂರೋ ರಿಪೋರ್ಟ್ ವಿಸ್ಮಯ ನ್ಯೂಸ್
ಪಂಡಿತ್ ಶಂಕರ್ ಗುರೂಜಿ
ಪ್ರಸಿದ್ಧ ಜ್ಯೋತಿಷ್ಯರು, ಬೆಂಗಳೂರು, ಮೊ- 9535432749
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ನಿಮ್ಮ ಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃಸಿದ್ಧ. ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ ಎರಡೇ ದಿನಗಳಲ್ಲಿ ಫೋನಿನ ಮೂಲಕ ನೆರವೇರಿಸಿ ಕೊಡುತ್ತಾರೆ. ಇಂದೇ ಸಂಪರ್ಕಿಸಿ.
(ಜಾಹೀರಾತು)