Uttara Kannada
Trending

ಉತ್ತರಕನ್ನಡದಲ್ಲಿ ಇಂದು ಶತಕ ಬಾರಿಸಿದ ಕರೊನಾ

ದಾಂಡೇಲಿ-ಹಳಿಯಾಳ: 52
ಭಟ್ಕಳ: 9
ಕುಮಟಾ: 8
ಹೊನ್ನಾವರ: 6
ಅಂಕೋಲಾ: 8
ಸಿದ್ದಾಪುರ: 3
ಶಿರಸಿ: 7
ಕಾರವಾರ: 11

ಜಿಲ್ಲೆಯಲ್ಲಿ ಸಾವಿರ ಗಡಿದಾಟಿದ ಸೋಂಕಿತರ ಸಂಖ್ಯೆ
ಕುಮಟಾದ ಖಾಸಗಿ ಆಸ್ಪತ್ರೆಯ ಇಬ್ಬರು ಸಿಬ್ಬಂದಿಗೆ ಸೋಂಕು
ಭಟ್ಕಳದಲ್ಲಿ 78 ಮಂದಿ ಗುಣಮುಖರಾಗಿ ಡಿಸ್ಚಾರ್ಜ್

[sliders_pack id=”1487″]

ಕಾರವಾರ: ಉತ್ತರಕನ್ನಡ ಜಿಲ್ಲೆಯಲ್ಲಿ ಕರೊನಾ ಆರ್ಭಟ ಜೋರಾಗಿದ್ದು, ಇಂದು ಒಟ್ಟು 115 ಮಂದಿಗೆ ಸೋಂಕು ದೃಢಪಟ್ಟಿದೆ. ಇದರಿಂದಾಗಿ ಒಟ್ಟು ಸೋಂಕಿತರ ಸಂಖ್ಯೆ 1,016ಕ್ಕೆ ಏರಿಕೆಯಾಗಿದೆ. ಹಳಿಯಾಳ- ದಾಂಡೇಲಿಯಲ್ಲಿ 52 ಪ್ರಕರಣಗಳು ಪತ್ತೆಯಾಗಿದೆ. ಭಟ್ಕಳದಲ್ಲಿ 9, ಕಾರವಾರದಲ್ಲಿ 11, ಕುಮಟಾದಲ್ಲಿ 8, ಅಂಕೋಲಾದಲ್ಲಿ 8, ಸಿದ್ದಾಪುರ 3 , ಶಿರಸಿಯಲ್ಲಿ 7, ಹೊನ್ನಾವರದಲ್ಲಿ 6, ಯಲ್ಲಾಪುರದಲ್ಲಿ 1 ಪ್ರಕರಣ ದೃಢಪಟ್ಟಿದೆ.

ಕುಮಟಾದ ಖಾಸಗಿ ಆಸ್ಪತ್ರೆಯ ಇಬ್ಬರು ಸಿಬ್ಬಂದಿಗೆ ಸೋಂಕು:
ಕುಮಟಾ: ತಾಲೂಕಿನಲ್ಲಿ ಕರೊನಾ ಆರ್ಭಟ ಮುಂದುವರೆಯುತ್ತಲೇ ಇದ್ದು, ಇಂದು ಸಹ 9 ಪ್ರಕರಣಗಳು ದಾಖಲಾಗಿವೆ. (©Copyright reserved by Vismaya tv)ಕುಮಟಾ ತಾಲೂಕಿನ 3 ವರ್ಷದ ಓರ್ವ ಮಗು, 44 ವರ್ಷದ ಮಹಿಳೆ, 32 ವರ್ಷದ ಮಹಿಳೆ, 54 ವರ್ಷದ ಮಹಿಳೆ, 32 ವರ್ಷದ ಮಹಿಳೆ, 38 ವರ್ಷದ ಪುರುಷ, 26 ವರ್ಷದ ಯುವಕ, 59 ವರ್ಷದ ಪುರುಷ, 29 ವರ್ಷದ ಯುವತಿಯಲ್ಲಿ ಸೋಂಕು ದೃಡಪಟ್ಟಿದೆ ಎನ್ನಲಾಗಿದೆ. ಹಾಗೂ ಈ ಹಿಂದೆ ಕರೊನಾ ಸೋಂಕು ತಗುಲಿ ಚಿಕಿತ್ಸೆ ಪಡೆಯುತ್ತಿದ್ದ 6 ಜನರು ಗುಣಮುಖರಾಗಿ ಇಂದು ಆಸ್ಪತ್ರೆಯಿಂದ ಬಿಡುಗಡೆಗೊಂಡಿದ್ದಾರೆ.
ಗುಂದ, ಧಾರೇಶ್ವರ, ಗುಡೇಅಂಗಡಿ, ಕುಮಟಾ ಪಟ್ಟಣ ಈ ಭಾಗದಲ್ಲೇ ಬಹುತೇಕ ಪ್ರಕರಣಕಂಡುಬಂದಿದೆ. (©Copyright reserved by Vismaya tv)ಗೋಕರ್ಣದಲ್ಲಿ 1 ಪ್ರಕರಣ, ಕುಮಟಾದ ಖಾಸಗಿ ಆಸ್ಪತ್ರೆಯ ಇಬ್ಬರು ಸಿಬ್ಬಂದಿಗಳು, ಈ ಹಿಂದೆ ಸೋಂಕು ತಗುಲಿದ್ದ ನಿವೃತ್ತ ಪೊಲೀಸ್ ಅಧಿಕಾರಿಯ ಕುಟುಂಬದ ಓರ್ವ ಸದಸ್ಯರು, ಮಹರಾಷ್ಟ್ರದಿಂದ ಆಗಮಿಸಿದ್ದ ಓರ್ವರಲ್ಲಿ ಮತ್ತು ಈ ಹಿಂದೆ ಕರೋನಾ ಸೋಂಕು ತಗುಲಿದ್ದ ಖಾಸಗಿ ವೈದ್ಯರ ಸಂಪರ್ಕಕ್ಕೆ ಬಂದ ಮತ್ತೋರ್ವರಲ್ಲಿ ಸೋಂಕು ದೃಢಪಟ್ಟಿದೆ ಎನ್ನಲಾಗಿದೆ.

ಭಟ್ಕಳ ತಾಲೂಕಿನಲ್ಲಿಂದು 9 ಪ್ರಕರಣ ಪತ್ತೆ:
ಭಟ್ಕಳ: ತಾಲೂಕಿನಲ್ಲಿ ಶನಿವಾರ ಒಟ್ಟು ಒಂಬತ್ತು ಪ್ರಕರಣ ಪತ್ತೆಯಾಗಿದೆ. ಭಟ್ಕಳದ ಎಂಟು ಮಂದಿ ಹಾಗೂ ಓರ್ವ ಹೊನ್ನಾವರ ಮೂಲದ ವ್ಯಕ್ತಿಗೆ ಸೋಂಕು ಪತ್ತೆಯಾಗಿದೆ. (©Copyright reserved by Vismaya tv)ತಾಲೂಕಿನ ಮುಶಾನಗರದ 7 ವರ್ಷ ವೃದ್ಧೆ, ಅಜಾಜ್ ನಗರದ 78 ವರ್ಷದ ವೃದ್ಧೆ, ಭಟ್ಕಳ ಮೆನ್ ರೋಡ್‌ನ 45 ವರ್ಷದ ಮಹಿಳೆ , ಸರ್ಪನಕಟ್ಟೆಯ 53 ವರ್ಷದ ಪುರುಷ, ಸೋನಾರಾಕೇರಿಯ 30 ವರ್ಷದ ಪುರುಷ, ಚೌಥನಿಯ 50 ವರ್ಷದ ಪುರುಷ ಹಾಗೂ ತಾಲೂಕಿನ 29,31 ಪುರುಷನ ಹಾಗೂ ಹೊನ್ನಾವರ ಗುಂಡಿಬೈಲನ 35 ವರ್ಷದ ಪುರುಷ ಭಟ್ಕಳದಲ್ಲಿ ಗಂಟಲು ದ್ರವ ಪರೀಕ್ಷೆಗೆ ನೀಡಿದ್ದು ಆತನಲ್ಲೂ ಇಂದು ಸೋಂಕು ಇರುವುದು ಪತ್ತೆಯಾಗಿದೆ. ಇಂದು ತಾಲೂಕಿನಲ್ಲಿ 63 ಮಂದಿಯ ಗಂಟಲು ದ್ರವ ವರದಿ ನೆಗೆಟಿವ್ ಬಂದಿದ್ದು, 78 ಮಂದಿ ಗುಣಮುಖರಾಗಿ ಮನೆಗೆ ಮರಳಿದ್ದಾರೆ.

ವಿಸ್ಮಯ ನ್ಯೂಸ್, ಉದಯ್ ಎಸ್ ನಾಯ್ಕ, ಭಟ್ಕಳ

ಪಂಡಿತ್ ಶಂಕರ್ ಗುರೂಜಿ
ಪ್ರಸಿದ್ಧ ಜ್ಯೋತಿಷ್ಯರು, ಬೆಂಗಳೂರು, ಮೊ- 9535432749

ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವ್ಯವಹಾರದಲ್ಲಿ ನಷ್ಟ, ನಿಮ್ಮ ಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃಸಿದ್ಧ. ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ ಎರಡೇ ದಿನಗಳಲ್ಲಿ ಫೋನಿನ ಮೂಲಕ ನೆರವೇರಿಸಿ ಕೊಡುತ್ತಾರೆ. ಇಂದೇ ಸಂಪರ್ಕಿಸಿ.
(ಜಾಹೀರಾತು)

Back to top button