ಅಂಕೋಲಾ: ತಾಲೂಕಿನ ಹೊನ್ನಾರಾಕಾ ದೇವಸ್ಥಾನದ ಎದುರಿನ ಹೈವೇ ಪ್ಲೈ ಓವರ್ ಗೋಡೆ ಬಳಿ ಸಂಶಯಾಸ್ಪದವಾಗಿ ನಿಂತುಕೊಂಡಿದ್ದ ವ್ಯಕ್ತಿಯೋರ್ವನನ್ನು ಪೋಲೀಸರು ವಶಕ್ಕೆ ಪಡೆದಿದ್ದಾರೆ. ಬಳ್ಳಾರಿ ಜಿಲ್ಲೆಯ ಹಗರಿಬೊಮ್ಮನಹಳ್ಳಿ ನಿವಾಸಿ ಮಹೇಂದ್ರ ಹನುಮೇಶ. ಕೆ (19) ಎಂಬಾತನೇ ಅನುಮಾನಾಸ್ಪದವಾಗಿ ಸಿಕ್ಕಿ ಬಿದ್ದ ವ್ಯಕ್ತಿಯಾಗಿದ್ದಾನೆ. ಈತನು ತನ್ನ ಇರುವಿಕೆ ಮರೆಮಾಚುವ ಉದ್ದೇಶದಿಂದ ವಂದಿಗೆ ಹೊನ್ನಾರಾಕಾ ದೇವಸ್ಥನಾದ ಎದುರಿನ ಪ್ಲೈ ಓವರ್ ಬಳಿ ನಿಂತು ಕೊಂಡಿದ್ದು, ಪೊಲೀಸರನ್ನು ನೋಡಿ ಓಡಿ ಹೋಗುವ ಪ್ರಯತ್ನ ನಡೆಸಿದ್ದ ಎನ್ನಲಾಗಿದೆ.
ಆತನ ವಯಸ್ಸು 52, ಯುವತಿಯ ವಯಸ್ಸು 16! ಅಪ್ರಾಪ್ತ ಜೊತೆ ಮದುವೆ: ಮುಂದೇನಾಯ್ತು ನೋಡಿ?
ಪಿ.ಎಸ್. ಐ ಮಾಲಿನಿ ಹಾಸಬಾವಿ ಅವರು ಆತನ ವಾಸಸ್ಥಳ ಮತ್ತು ಉದ್ಯೋಗದ ಕುರಿತು ವಿಚಾರಣೆ ನಡೆಸಿದಾಗ ಸಮರ್ಪಕ ಉತ್ತರ ನೀಡದಿದ್ದರಿಂದ ಆರೋಪಿತನ ಮೇಲೆ ಅಂಕೋಲಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ, ಕಾನೂನು ಕ್ರಮ ಕೈಗೊಂಡು ಜಿಲ್ಲಾ ಕಾರಾಗೃಹಕ್ಕೆ ಕಳುಹಿಸಿ,ತನಿಖೆ ಮುಂದುವರಿಸಿದ್ದಾರೆ. ಅಸಲಿಗೆ ಈತ ರಾತ್ರಿ ವೇಳೆ ಖಾಸಗಿ ಟೂರಿಸ್ಟ್ ಬಸ್ (ಹೈದ್ರಾಬಾದ- ಮಂಗಳೂರು ) ಒಂದರಲ್ಲಿ ಅಂಕೋಲಾ ಮಾರ್ಗವಾಗಿ ಬರುತ್ತಿರುವಾಗ ಅದೇ ಬಸ್ಸಿನಲ್ಲಿ ಪ್ರಯಾಣಿಸುತ್ತಿದ್ದ ಯುವತಿ ಯೋರ್ವಳ ಬಳಿ ಅನುಚಿತ ವರ್ತನೆ ತೋರಿದ್ದಾನೆ ಎನ್ನಲಾಗಿದೆ.,
ನೊಂದ ಯುವತಿ ತನ್ನ ಮರ್ಯಾದೆಗೆ ಅಂಜಿ ಇಲ್ಲವೇ ಇತರೆ ಕಾರಣಗಳಿಂದ ಪೋಲೀಸ್ ದೂರು ದಾಖಲಿಸದೇ ಇದ್ದರೂ, ಆಗಿರಬಹುದಾದ ಅಚಾತುರ್ಯಕ್ಕೆ ಕ್ಷಮೆ ಕೇಳಲೂ ಒಪ್ಪದ ಯುವಕನಿಗೆ ತಕ್ಕ ಶಾಸ್ತಿ ಆಗಲೆಂದು ಆತನನ್ನು ಅಂಕೋಲಾದ ಬಳಿ ಬಸ್ ನಿಂದ ಇಳಿಸಿ ಹೋಗಲಾಗಿದೆಯೇ ಎಂಬ ಪ್ರಶ್ನೆ ಸಾರ್ವಜನಿಕ ವಲಯದಿಂದ ಕೇಳಿ ಬಂದಂತಿದೆ.
ಇದೇ ವೇಳೆ ಕೆಲ ಟೂರ್ಸ್ ಎಂಡ್ ಟ್ರಾವೆಲ್ಸ್ ಎಜೆನ್ಸಿಗಳು ಕೇವಲ ಹಣ ಮಾಡುವ ಉದ್ದೇಶ ಮಾತ್ರ ಹೊಂದಿರದೇ ತಮ್ಮ ಬಸ್ಸಿನ ಪ್ರಯಾಣಿಕರ ಸುರಕ್ಷತೆಗೆ ಮೊದಲ ಆದ್ಯತೆ ನೀಡಬೇಕೆನ್ನುವ ಆಗ್ರಹ ಕೇಳಿ ಬಂದಿದೆ. ಒಟ್ಟಿನಲ್ಲಿ ಕತ್ತಲೆಯಲ್ಲಿ ಅದಾವುದೋ ಕಾಣದ ಕೈಚಳಕ ತೋರಿಸಲು ಹೋದ ಯುವಕ ತನ್ನ ಕೈಗೆ ತಾನೇ ಕೈ-ಕೋಳ ತೊಡಿಸಿಕೊಳ್ಳುವಂತಾಯಿತೇ ಎಂಬ ಮಾತು ಪಟ್ಟಣದ ಕೆಲವೆಡೆ ಸಾರ್ವಜನಿಕ ಚರ್ಚೆಗೆ ಕಾರಣವಾದಂತಿದ್ದು,ಪೊಲೀಸರು ವಶಕ್ಕೆ ಪಡೆದ ಪೊಲೀ ಹುಡುಗನ ಅಸಲಿಯತ್ತೇನು ಎನ್ನುವುದು ಪ್ರಶ್ನೆಯಾಗಿಯೇ ಉಳಿದಿದೆ.
ವಿಸ್ಮಯ ನ್ಯೂಸ್ ವಿಲಾಸ ನಾಯಕ ಅಂಕೋಲಾ