ಶಿರಸಿ: ಸಾರ್ವಜನಿಕ ಆಸ್ತಿಪಾಸ್ತಿ ಹಾನಿ, ಶಾಂತಿಗೆ ಭಂಗ ತರುವಂತಹ ಕೃತ್ಯಗಳಲ್ಲಿ ತೊಡಗುವ ಶಂಕೆ ಹಿನ್ನಲೆಯಲ್ಲಿ ಉತ್ತರಕನ್ನಡ ಜಿಲ್ಲೆಯ ಶಿರಸಿ ಗ್ರಾಮೀಣ ಠಾಣಾ ವ್ಯಾಪ್ತಿಯಲ್ಲಿ PFI ಸಂಘಟನೆಯ ಮೂವರು ಸದಸ್ಯರನ್ನು ಮುಂಜಾಗೃತ ಕ್ರಮವಾಗಿ ಬಂಧಿಸಿದ ಘಟನೆ ನಡೆದಿದೆ. ಸಾರ್ವಜನಿಕರನ್ನು ಕೆರಳಿಸುವ ಮತ್ತು ಕೋಮು ಸೌಹಾರ್ತೆಗೆ ಧಕ್ಕೆ ತರುವ ಸಾಧ್ಯತೆ ಇರುವುದರಿಂದ ಮುಂಜಾಗ್ರತಾ ಕ್ರಮವಾಗಿ ಇವರನ್ನ ವಶಕ್ಕೆ ಪಡೆದಿದ್ದಾರೆ.
36 ಸಾವಿರ ಆರಂಭಿಕ ವೇತನ: SBI ನಲ್ಲಿ 1,673 ಹುದ್ದೆಗಳು ಖಾಲಿ: ಇಂದೇ ಅರ್ಜಿ ಸಲ್ಲಿಸಿ
ಶಿರಸಿಯಲ್ಲಿ ಇತ್ತೀಚಿಗೆ ಬಂಧಿತನಾಗಿದ್ದ ಟಿಪ್ಪು ನಗರದ ಅಬ್ದುಲ್ ಅಜೀಜ್ ಶುಕೂರ್‌ನ ಸಹೋದರ ಅಬ್ದುಲ್ ರಜಾಕ್, ಅತಾವುಲ್ಲ ತಡಸ್ ಹಾಗೂ ಕೆರೆಕೊಪ್ಪದ ಇಮಾಮ್ ಸಾಬ್ ಪೊಲೀಸರ ವಶದಲ್ಲಿರುವವರು ಎಂದು ತಿಳಿದುಬಂದಿದೆ. ಡಿವೈಎಸ್‌ಪಿ ರವಿ ಡಿ.ನಾಯ್ಕ್, ಸಿಪಿಐ ರಾಮಚಂದ್ರ ನಾಯಕ್ ಮಾರ್ಗದರ್ಶನದಲ್ಲಿ ಈ ಕಾರ್ಯಾಚರಣೆ ನಡೆದಿದೆ.
ಪಿಎಫ್‌ಐ ಮತ್ತು ಅದರ ಸಹಸಂಘಟನೆಗಳಿಗೆ ಐದುವರ್ಷ ನಿಷೇಧ
ಇದೇ ವೇಳೆ, ಎನ್‌ಐಎ ಮತ್ತು ಇತರ ತನಿಖಾ ಏಜೆನ್ಸಿಗಳು ಕಳೆದ ಒಂದು ವಾರದಿಂದ ಎರಡು ಬಾರಿ ದೇಶಾದ್ಯಂತ ದಾಳಿಗಳನ್ನು ನಡೆಸಿದ ಸಂಗ್ರಹಿಸಿದ ಮಹತ್ವದ ದಾಖಲೆಗಳ ಆಧಾರದ ಮೇಲೆ ಪಾಪ್ಯುಲರ್ ಫ್ರೆಂಟ್ ಆಫ್ ಇಂಡಿಯಾ ಪಿಎಫ್‌ಐ ಮತ್ತು ಅದರ ಸಹಸಂಘಟನೆಗಳಿಗೆ ಕೇಂದ್ರ ಸರಕಾರ ತಕ್ಷಣದಿಂದಲೇ ಜಾರಿಗೆ ಬರುವಂತೆ ನಿಷೇಧ ಹೇರಿದೆ. ಐದು ವರ್ಷಗಳ ಕಾಲ ನಿಷೇಧ ಹೇರಲಾಗಿದ್ದು, ಕಾನೂನುಬಾಹಿರ ಸಂಘಟನೆಗಳೆoದು ಕೇಂದ್ರಸರ್ಕಾರ ಘೋಷಿಸಿದೆ. ರಿಹಾಬ್ ಇಂಡಿಯಾ ಫೌಂಡೇಷನ್ ಆರ್‌ಐಎಫ್, ಕ್ಯಾಂಪಸ್ ಫ್ರಂಟ್ ಆಫ್ ಇಂಡಿಯಾ, ಸಿಎಫ್‌ಐ ಆಲ್ ಇಂಡಿಯಾ ಇಮಾಮ್ ಕೌನ್ಸಿಲ್ ಸೇರಿದಂತೆ ಏಳು ಇತರ ಸಂಘಟನೆಗಳು ಕೂಡಾ ನಿಷೇಧಿತ ಎಂದು ಕೇಂದ್ರ ಸರಕಾರ ಘೋಷಣೆ ಮಾಡಿದೆ.
ವಿಸ್ಮಯ ನ್ಯೂಸ್, ಶಿರಸಿ