ದಿವಗಿ ಗ್ರಾ.ಪಂ ವ್ಯಾಪ್ತಿಯಲ್ಲಿ 15 ದಿನದ ಲಾಕ್‍ಡೌನ್

ಕುಮಟಾ: ಕರೊನಾ ನಿಯಂತ್ರಣ ಮಾಡುವ ನಿಟ್ಟಿನಲ್ಲಿ ತಾಲೂಕಿನ ದೀವಗಿ ಗ್ರಾಮ ಪಂಚಾಯತ ವ್ಯಾಪ್ತಿಯಲ್ಲಿ ಸರ್ವ ಪಕ್ಷದ ನಿರ್ಣಯದಂತೆ 15 ದಿನಗಳ ಕಾಲ ಅರ್ಧ ದಿನದ ಲಾಕ್‍ಡೌನ್ ಮಾಡಲು ನಿರ್ಧರಿಸಲಾಯಿತು.
ಸೋಮವಾರ ಜಿ.ಪಂ. ಸದಸ್ಯ ಗಜಾನನ ಪೈ ಮುಂದಾಳತ್ವದಲ್ಲಿ ದಿವಗಿಯ ಸಭಾಭವನದಲ್ಲಿ ನಡೆದ ಸರ್ವಪಕ್ಷದ, ಊರ ಪ್ರಮುಖರ ಹಾಗೂ ವ್ಯಾಪಾರಸ್ಥರ ಸಭೆಯಲ್ಲಿ ಈ ಮಹತ್ವದ ನಿರ್ಣಯವನ್ನು ಕೈಗೊಳ್ಳಲಾಯಿತು. ಜು.21 ರಿಂದ 15 ದಿನಗಳವರೆಗೆ ಬೆಳಿಗ್ಗೆ 8 ಘಂಟೆಯಿಂದ ಮಧ್ಯಾಹ್ನ 3 ಘಂಟೆಯವರೆಗೆ ಮಾತ್ರ ಸಾರ್ವಜನಿಕರು ವ್ಯಾಪಾರ ವಹಿವಾಟು ನಡೆಸಬಹುದಾಗಿದೆ. ಇನ್ನು ಮಧ್ಯಾಹ್ನ 3 ಘಂಟೆಯಿಂದ ಮುಂಜಾನೆಯವರೆಗೆ 8 ಗಂಟೆಯವರೆಗೆ ಸಂಪೂರ್ಣ ಲಾಕ್‍ಡೌನ್ ಜಾರಿಯಲ್ಲಿರಲಿದ್ದು, ಸಾರ್ವಜನಿಕರು ಅನಗತ್ಯ ಅಲೆದಾಟ ಮಾಡಿದರೆ ಶಿಸ್ತು ಕ್ರಮ ಜರುಗಿಸುವ ಬಗ್ಗೆ ಸಭೆಯಲ್ಲಿ ನಿರ್ಣಯಿಸಲಾಯಿತು.

ಇನ್ನು ಮಾಸ್ಕ್ ಧರಿಸದೇ, ಅಲೆದಾಡುವವರಿಗೆ ಗ್ರಾಮ ಪಂಚಾಯತ ಮತ್ತು ಪೊಲೀಸ್ ಇಲಾಖೆಯ ವತಿಯಿಂದ ದಂಡ ವಿಧಿಸುವ ನಿರ್ಣಯ ಕೈಗೊಳ್ಳಲಾಯಿತು.

ಈ ಸಂದರ್ಭದಲ್ಲಿ ಪಂಚಾಯತ್ ಮಾಜಿ ಅಧ್ಯಕ್ಷರಾದ ಕೃಷ್ಣ ಗೌಡ, ಹೇಮಂತಕುಮಾರ ಗಾಂವಕರ, ಮಾಜಿ ಸದಸ್ಯರಾದ ಉತ್ತುಮ ಭಂಡಾರಿ, ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

ವಿಸ್ಮಯ ನ್ಯೂಸ್ ಕುಮಟಾ

[sliders_pack id=”1487″]

[sliders_pack id=”2570″]
Exit mobile version