ದಾoಡೇಲಿ : ದಾಂಡೇಲಿಯ ಕಾಳಿ ನದಿಯಲ್ಲಿ ಮೊಸಳೆಗಳ ಸಂಖ್ಯೆ ಗಣನೀಯ ಹೆಚ್ಚಳ ಕಂಡಿದ್ದು, ಮೊಸಳೆಗಳು ಆಹಾರದ ಕೊರತೆ ಎದುರಿಸುತ್ತಿದೆ ಎನ್ನಲಾಗಿದ್ದು, ಇದೀಗ ಸಾರ್ವಜನಿಕ ಸ್ಥಳದತ್ತ ಆಗಮಿಸುತ್ತಿವೆ. ಸಾರ್ವಜನಿಕ ಸ್ಥಳ, ಊರು-ಕೇರಿ, ನಗರದ ಭಾಗಕ್ಕೂ ದಾಳಿ ಇಡುತಿದ್ದು, ಓಡಾಡುವ ಜನರಿಗೆ ಮೊಸಳೆಗಳ ಕಾಟ ಹೆಚ್ಚಾಗಿವೆ.
ರಜೆಗೆ ಊರಿಗೆ ಬಂದವ ಬಾರದ ಲೋಕಕ್ಕೆ ತೆರಳಿದ| ಬೈಕಿನಲ್ಲಿ ಹೋಗುವಾಗ ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದು ಯುವಕ ಸಾವು
ಹೌದು, ತಾಲೂಕಿನಲ್ಲಿ ಕಾಳಿ ನದಿ ತೀರ ಪ್ರದೇಶದ ಮೊಳಸೆ ಕಾಟದಿಂದಲೇ ಜನರು ಬದುಕುವಂತಾಗಿದೆ. ಕಳೆದ ಕೆಲ ತಿಂಗಳ ಹಿಂದೆ ಮೀನುಹಿಡಿಯುತ್ತಿದ್ದ ಓರ್ವನನ್ನು ಮೊಸಳೆ ಎದುಕೊಂಡುಹೋಗಿದ್ದು, ಬಳಿಕ ಆ ವ್ಯಕ್ತಿಯ ಶವಪತ್ತೆಯಾಗಿತ್ತಯ. ಇಲ್ಲಿನ ಹೊಸಕೊಣಪಾ ಗ್ರಾಮದಲ್ಲಿ ಮೊಸಳೆಗಳು ದಡದಿಂದ ಮೇಲೆ ಬರುತಿದ್ದು ಚಿಕ್ಕ ಮರಿಗಳು ಸಹ ಈ ಭಾಗದಲ್ಲಿ ರಸ್ತೆಭಾಗದಲ್ಲಿ ಕಾಣಸಿಗುತಿದೆ.
ಸಾರ್ವಜನಿಕರು ಓಡಾಡುವ ಪ್ರದೇಶದಲ್ಲಿ ಹೆಚ್ಚಿನ ಮೊಸಳೆಗಳು ಕಂಡುಬರುತ್ತಿರುವುದರಿoದ ಮೊಸಳೆಗಳ ನಿಯಂತ್ರಣಕ್ಕೆ ಅರಣ್ಯ ಇಲಾಖೆ ಕ್ರಮವಹಿಸಬೇಕು ಎಂದು ಸ್ಥಳೀಯರು ಒತ್ತಾಯಿಸಿದ್ದಾರೆ. ಸದ್ಯಕ್ಕೆ ದಾಂಡೇಲಿ ನಗರದಲ್ಲಿ ಇರುವ ಕಾಳಿ ನದಿ ಭಾಗದ ಮೊಸಳೆ ಪಾರ್ಕ ಅನ್ನು ಪ್ರವಾಸಿಗಳಿಗೆ ನಿರ್ಬಂಧ ಹೇರಲಾಗಿದೆ. ಇಲ್ಲಿ ತಂತಿ ಬೇಲಿ ಅಳವಡಿಸಿದ್ದರೂ ಸುತ್ತಮುತ್ತಲ ಭಾಗದ ಹಳ್ಳಿಗಳಲ್ಲಿ ಮೊಸಳೆಗಳು ಆಹಾರ ಅರಸಿ ಬರುತಿದ್ದು, ಜನರಲ್ಲಿ ಭಯಹುಟ್ಟಿಸಿದೆ.
ವಿಸ್ಮಯ ನ್ಯೂಸ್, ಕಾರವಾರ