ಕಾರವಾರ: ಇತ್ತಿಚೆಗೆ ಆನ್‌ಲೈನ್‌ಲ್ಲಿ ವಂಚನೆ ಪ್ರಕರಣ ಹೆಚ್ಚುತ್ತಿದೆ. ಜನರ ಅಮಾಯಕ ತನವನ್ನೇ ಬಂಡವಾಳ ಮಾಡಿಕೊಂಡು, ವಂಚಿಸುತ್ತಿದ್ದಾರೆ ಸೈಬರ್ ಖದೀಮರು. ಹೌದು, ವಿದ್ಯುತ್ ಬಿಲ್ ಕಟ್ಟದೇ ಇದ್ದರೆ ಕರೆಂಟ್ ಕಟ್ ಮಾಡಲಾಗುವುದು ಎಂದು ಮೆಸೇಜ್ ಮಾಡಿ, ವ್ಯಕ್ತಿಯಿಂದ 3.33 ಲಕ್ಷ ಹಣವನ್ನ ಎಗರಿಸಿದ್ದಾರೆ. ಈ ಕುರಿತು ಸಿ.ಇ.ಎನ್ ಪೊಲೀಸ್ ಠಾಣೆಯದಲ್ಲಿ ದೂರು ದಾಖಲಾಗಿದೆ.
ನನ್ನನ್ನು ಅಪಹರಿಸಲಾಗಿತ್ತು, ಅವರಿಂದ ತಪ್ಪಿಸಿಕೊಂಡು ಬಂದೆ! ಕೊನೆಗೆ ಬಯಲಾಯ್ತು ವಿದ್ಯಾರ್ಥಿನಿಯ ಡ್ರಾಮಾ
ಇಲ್ಲಿನ ಅರಗಾ ಗ್ರಾಮದ ನೇವಲ್ ಬೇಸ್‌ನಲ್ಲಿ ವಾಸವಾಗಿರುವ ಉತ್ತರ ಪ್ರದೇಶ ಮೂಲದ ರಾಜಕುಮಾರ್ ಹಣ ಕಳೆದುಕೊಂಡ ವ್ಯಕಿ. ಇವರ ಮೊಬೈಲ್ ನಂಬರಿಗೆ ಅಕ್ಟೋಬರ್ 16 ರಂದು ಅಪರಿಚಿತ ನಂಬರ್ ನಿಂದ ನಿಮ್ಮ ಕರೆಂಟ್ ಬಿಲ್ ಪೆಂಡಿoಗ್ ಇದೆ. ಕೂಡಲೇ ಪಾವತಿಸಬೇಕು. ಇಲ್ಲದಿದ್ರೆ ಇಂದೇ ವಿದ್ಯುತ್ ಸಂಪರ್ಕ ಕಡಿತಗೊಳ್ಳಲಿದೆ ಎಂಬ ಮೆಸೇಜ್ ಬಂದಿದೆ. ಮೊಬೈಲ್ ಸಂಖ್ಯೆಯೊoದನ್ನ ನೀಡಿ ಎಲೆಕ್ಟ್ರಿಸಿಟಿ ಅಧಿಕಾರಿಯ ನಂಬರ್‌ಗೆ ಸಂಪರ್ಕಿಸುವoತೆ ತಿಳಿಸಲಾಗಿತ್ತು.
ಈ ಸಂದೇಶ ನೋಡಿದ ವ್ಯಕ್ತಿ ಅಲ್ಲಿದ್ದ ನಂಬರ್‌ಗೆ ಸಂಪರ್ಕಿಸಿದಾಗ, ಒಂದೆರಡು ಆಪ್ ಡೌನ್‌ಲೋಡ್ ಮಾಡಿಕೊಳ್ಳಲು ಮೊದಲು ಹೇಳಿದ್ದಾನೆ. ನಂತ್ ಡೆಬಿಟ್, ಕ್ರೆಡಿಟ್ ಕಾರ್ಡ್ ಮಾಹಿತಿ ಕೇಳಿದ್ದು, ನಂಬಿದ ವ್ಯಕ್ತಿ, ಎಲ್ಲವನ್ನೂ ಕೊಟ್ಟಿದ್ದಾನೆ. ಈ ವೇಳೆ ಒಟ್ಟು 3,33,259 ರೂ. ಹಣವನ್ನ ತಮ್ಮ ಖಾತೆಗೆ ವರ್ಗಾಯಿಸಿಕೊಂಡಿದ್ದಾರೆ. ದೂರಿನ ಅನ್ವಯ ಪೊಲೀಸರು ಇದೀಗ ತನಿಖೆ ಆರಂಭಿಸಿದ್ದಾರೆ. ಇಂಥ ವೇಳೆ Cyber Crime Helpline Number 1930 ಗೆ ಕರೆ ಮಾಡಿ ದೂರು ನೀಡಬಹುದು. ಅಥವಾ ಹತ್ತಿರದ ಸೈಬರ್ ಠಾಣೆಯಲ್ಲೂ ಕೇಸ್ ದಾಖಲಿಸಬಹುದು.
ವಿಸ್ಮಯ ನ್ಯೂಸ್, ಕಾರವಾರ